MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Raveena Tandon About Daughters: ಹೆಣ್ಮಕ್ಕಳನ್ನು ದತ್ತುಪಡೆದ ವಿಷಯ ರವೀನಾ ಮುಚ್ಚಿಟ್ಟಿದ್ದೇಕೆ?

Raveena Tandon About Daughters: ಹೆಣ್ಮಕ್ಕಳನ್ನು ದತ್ತುಪಡೆದ ವಿಷಯ ರವೀನಾ ಮುಚ್ಚಿಟ್ಟಿದ್ದೇಕೆ?

ರವೀನಾ ಟಂಡನ್ (Raveena Tandon) ಕೇವಲ 21 ನೇ ವಯಸ್ಸಿನಲ್ಲಿ ಮದುವೆಯಾಗದೆ ತಾಯಿಯಾದರು. ವಾಸ್ತವವಾಗಿ, ರವೀನಾ 1995 ರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದರು. ಆದಾಗ್ಯೂ, ನಂತರ ರವೀನಾ ಟಂಡನ್ ಉದ್ಯಮಿ ಅನಿಲ್ ಥಡಾನಿ ಅವರನ್ನು ವಿವಾಹವಾದರು ಮತ್ತು ಈಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 27 ವರ್ಷಗಳ ನಂತರ, ರವೀನಾ ಟಂಡನ್ ಮದುವೆಗೆ ಮುಂಚೆಯೇ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ತಾಯಿಯಾಗಲು ಏಕೆ ನಿರ್ಧರಿಸಿದರು ಎಂಬುದರ ಕುರಿತು ಅವರು ಮೌನ ಮುರಿದರು. ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಕಾರಣವನ್ನು ರವೀನಾ ಟಂಡನ್ ವಿವರಿಸಿದ್ದಾರೆ 

2 Min read
Suvarna News
Published : Jan 27 2022, 07:27 PM IST
Share this Photo Gallery
  • FB
  • TW
  • Linkdin
  • Whatsapp
18

ತನ್ನ ಇತ್ತೀಚಿನ ಸಂದರ್ಶನದಲ್ಲಿ, ರವೀನಾ ಟಂಡನ್ ಅವರು ಮಾಧ್ಯಮಗಳು ಈ ಸುದ್ದಿಯನ್ನು ಹೇಗೆ ಪರಿಗಣಿಸುತ್ತವೆ ಎಂದು ನಾನು ತುಂಬಾ ಹೆದರುತ್ತಿದ್ದೆ ಎಂದು ಬಹಿರಂಗಪಡಿಸಿದರು. ಮದುವೆಯಾಗದೆ ತಾಯಿಯಾಗುತ್ತಾಳೆ ಎಂಬ ಆರೋಪ ಬರುತ್ತದೆ. ಆ ಯುಗವು ಪತ್ರಿಕೋದ್ಯಮದ ವಿಷಯದಲ್ಲಿ ಉತ್ತಮವಾಗಿಲ್ಲ ಮತ್ತು ಜನರು ಏನು ಬೇಕಾದರೂ ಬರೆಯುತ್ತಿದ್ದರು ಎಂಬ ಭಯವಿತ್ತು ಎಂದು ರವೀನಾ ಹೇಳಿದ್ದಾರೆ.

28

ರವೀನಾ ಟಂಡನ್ ಪ್ರಕಾರ, ಅದು ಹಳದಿ ಪತ್ರಿಕೋದ್ಯಮದ ಯುಗ. ಆ ಸಮಯದಲ್ಲಿ ಯಾವುದೋ ಒಂದು ಹಗರಣವನ್ನು ಸೃಷ್ಟಿಸಲಾಯಿತು. ನಾನು ನನ್ನ ಹೆಣ್ಣು ಮಕ್ಕಳನ್ನು ದತ್ತು ಪಡೆದಾಗ, ನಾನು ಯಾರಿಗೂ ಹೇಳಿರಲಿಲ್ಲ. ಹೆಣ್ಣು ಮಕ್ಕಳು 10ನೇ ತರಗತಿ ಪಾಸಾಗುವವರೆಗೂ ಈ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟಿದ್ದೆ. 
 

38

ಆ ನಂತರ ಹೆಣ್ಣು ಮಕ್ಕಳು ನನ್ನೊಂದಿಗೆ ಶೂಟಿಂಗ್‌ಗೆ ಹೋಗಲಾರಂಭಿಸಿದರು. ಇದರ ನಂತರ ಎಲ್ಲರೂ ಈ ಹುಡುಗಿಯರು ಯಾರು ಎಂದು ಕೇಳಲು ಪ್ರಾರಂಭಿಸಿದ ನಂತರ ನಿಧಾನವಾಗಿ ನಾನು ಅವರ ಬಗ್ಗೆ ಜನರಿಗೆ ಹೇಳಲು ಪ್ರಾರಂಭಿಸಿದೆ. ಆಗ ಎಲ್ಲದಕ್ಕೂ ತುಂಬಾ ಭಯವಿತ್ತು, ಏನಾದ್ರೂ ಹೇಳಿದರೆ ಜನ ಏನು ಗಾಸಿಪ್‌ ಮಾಡುತ್ತಾರೋ ಗೊತ್ತಿಲ್ಲ. ಪತ್ರಿಕೆಯವರು ಗುಟ್ಟಾಗಿ ಮಗು ಹೆತ್ತಿದ್ದಾರೆಂದು ಹೇಳುತ್ತಾರೆ ಎಂಬ ಭಯವಿತ್ತು  .

48

ರವೀನಾ ಟಂಡನ್ ಪ್ರಕಾರ, ನನ್ನ ಬಗ್ಗೆ ಜನರ ಗಾಸಿಪ್‌ಗಳನ್ನು ತಪ್ಪಿಸಲು ನಾನು ಈ ವಿಷಯವನ್ನು ಬಹಳ ಸಮಯದಿಂದ ಮರೆಮಾಡಿದ್ದೇನೆ. ಈಗ ರವೀನಾ ಟಂಡನ್ ಅವರ ಪುತ್ರಿಯರಾದ ಪೂಜಾ ಮತ್ತು ಛಾಯಾ ಇಬ್ಬರೂ ಮದುವೆಯಾಗಿದ್ದಾರೆ . ಇಬ್ಬರು ಹೆಣ್ಣುಮಕ್ಕಳೂ ಈಗ ತಾಯಿ  ಆಗಿದ್ದಾರೆ. ರವೀನಾ ಪ್ರಕಾರ, ಅವರ ಇಬ್ಬರ ಹೆಣ್ಣುಮಕ್ಕಳು ಒಳ್ಳೆಯ ಸ್ನೇಹಿತರಂತೆ.

58

ರವೀನಾ ಟಂಡನ್ ಪ್ರಕಾರ, ನಾನು ಮದುವೆಯಾದಾಗ, ಇಬ್ಬರೂ ನನ್ನೊಂದಿಗೆ ಕಾರಿನಲ್ಲಿ ಕುಳಿತಿದ್ದರು. ನನ್ನ ಇಬ್ಬರು ಹೆಣ್ಣುಮಕ್ಕಳು ನನ್ನನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿದ್ದರು. ಅವರು  ತನ್ನ ಹಿರಿಯ ಮಗಳು ಛಾಯಾಗಿಂತ ಕೇವಲ 11 ವರ್ಷ ದೊಡ್ಡವರು. ನಾನು ನನ್ನ ಹುಡುಗಿಯರನ್ನು ಕರೆತಂದಾಗ, ನನಗೆ 22 ವರ್ಷ ಮತ್ತು ನನ್ನ ಹಿರಿಯ ಮಗಳು ಛಾಯಾಗೆ 11 ವರ್ಷ. ಹಾಗಾಗಿ ಅವಳು ನನಗೆ ಸ್ನೇಹಿತೆಯಂತೆ. ಸಂಬಂಧದಲ್ಲಿ, ನಾನು ಅವಳ ತಾಯಿ ಮತ್ತು ಅವಳ ಮಕ್ಕಳ ತಾಯಿ ಅಜ್ಜಿ ಎಂದು ರವೀನಾ ಹೇಳಿದ್ದಾರೆ.

 

68
'आशा सदन एक अनाथालय है। जब उनके कजिन की डेथ हुई तो उन्होंने पाया कि बच्‍च‍ियों के गार्जियन उनका ठीक से खयाल नहीं रख रहे थे। वो दोनों को अपने साथ घर ले आईं। उन्होंने तब ज्‍यादा नहीं सोचा। यह नैचुरली था। वो पूजा और छाया को वो जिंदगी देना चाहती थीं, जो उनका हक है। वो कोई करोड़पति नहीं थीं, लेकिन उन्हें इतना पता था कि रवीना इन बच्‍च‍ियों को बेहतर भविष्‍य दे सकती हैं।'

'आशा सदन एक अनाथालय है। जब उनके कजिन की डेथ हुई तो उन्होंने पाया कि बच्‍च‍ियों के गार्जियन उनका ठीक से खयाल नहीं रख रहे थे। वो दोनों को अपने साथ घर ले आईं। उन्होंने तब ज्‍यादा नहीं सोचा। यह नैचुरली था। वो पूजा और छाया को वो जिंदगी देना चाहती थीं, जो उनका हक है। वो कोई करोड़पति नहीं थीं, लेकिन उन्हें इतना पता था कि रवीना इन बच्‍च‍ियों को बेहतर भविष्‍य दे सकती हैं।'

ಇದಕ್ಕೂ ಮುನ್ನ ಮತ್ತೊಂದು ಸಂದರ್ಶನದಲ್ಲಿ ಪೂಜಾ ಮತ್ತು ಛಾಯಾಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ನನ್ನದೇ ಎಂದು ರವೀನಾ ಹೇಳಿದ್ದರು. 1994ರಲ್ಲಿ ತಮ್ಮ 'ಮೊಹ್ರಾ' ಚಿತ್ರ ಬಿಡುಗಡೆಯಾಗದೇ ಇದ್ದಾಗಲೇ ಈ ನಿರ್ಧಾರವನ್ನು ಪರಿಗಣಿಸಲು ಆರಂಭಿಸಿದ್ದೆ ಎನ್ನುತ್ತಾರೆ ರವೀನಾ. ವಾರಾಂತ್ಯದಲ್ಲಿ ತಾಯಿ ಮತ್ತು ಆಶಾ ಸದನಕ್ಕೆ ಆಗಾಗ ಹೋಗುತ್ತಿದ್ದೆವು ಎಂದು ಅವರು ಹೇಳಿದ್ದರು.


 

78

ಆಶಾ ಸದನ ಒಂದು ಅನಾಥಾಶ್ರಮ. ತನ್ನ ಕಸಿನ್‌ ಸತ್ತಾಗ, ಹುಡುಗಿಯರ ಗಾರ್ಡಿಯನ್‌ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅವರಿಗೆ ತಳಿಯಿತು. ಇದಾದ ನಂತರ ಛಾಯಾ ಮತ್ತು ಪೂಜಾಳನ್ನು ಮನೆಗೆ ಕರೆದುಕೊಂಡು ಬಂದರು. ಆಗ ನಟಿ  ಹೆಚ್ಚು ಯೋಚಿಸಲಿಲ್ಲ. ರವೀನಾ ಟಂಡನ್ ಪ್ರಕಾರ, ನಾನು ಪೂಜಾ ಮತ್ತು ಛಾಯಾ ಅವರಿಗೆ ಅರ್ಹವಾದ ಜೀವನವನ್ನು ನೀಡಲು ಬಯಸುತ್ತೇನೆ. ನಾನು ಮಿಲಿಯನೇರ್ ಅಲ್ಲ, ಆದರೆ ನಾನು ಈ ಹುಡುಗಿಯರಿಗೆ ಸಾಕಷ್ಟು ಉತ್ತಮ ಭವಿಷ್ಯವನ್ನು ನೀಡಬಲ್ಲೆ ಎಂದು ತಿಳಿದಿತ್ತು.

88

ರವೀನಾ ಟಂಡನ್ ಪ್ರಕಾರ, ಆಗ ಅನೇಕರು ನಕಾರಾತ್ಮಕವಾಗಿ ಮಾತನಾಡಿದ್ದರು. ಮದುವೆಯಾದ್ಮೇಲೆ ಏನಾಗುತ್ತೋ ಗೊತ್ತಿಲ್ಲ ಅಂತ ಜನ ಹೇಳುತ್ತಿದ್ದರು. ಅವರ ಜೊತೆ ಈ ಇಬ್ಬರು ಹೆಣ್ಣುಮಕ್ಕಳು ತಮ್ಮ ಸಂಗಾತಿಗೆ ಹೊರೆಯಾಗುತ್ತಾರೆ ಎಂಬ ಕಾರಣಕ್ಕೆ ನನ್ನನ್ನು ಯಾರೂ ಮದುವೆಯಾಗುವುದಿಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ, ನಾನು ಯಾರ ಮಾತನ್ನೂ ಕೇಳಲಿಲ್ಲ. ನನ್ನ ಗಂಡ ಮತ್ತು ಅತ್ತೆಯಂದಿರು ಕೂಡ ಪೂಜಾ ಮತ್ತು ಛಾಯಾ ಅವರಿಗೆ ನಾನು ನೀಡುವಷ್ಟು ಪ್ರೀತಿಯನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ.

About the Author

SN
Suvarna News
ಬಾಲಿವುಡ್
ಮಕ್ಕಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved