Raveena Tandon About politics: ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ಕೆಜಿಎಫ್ ಚೆಲುವೆ ? ಏನಂತಾರೆ ರವೀನಾ
KGF ಚೆಲುವೆ ರವೀನಾ ಟಂಡನ್ ರಾಜಕಾರಣಿ ಪಾತ್ರದ ಫಸ್ಟ್ ಲುಕ್ ನೆನಪಿದೆಯಾ ? ಅವರೇನಾದರೂ ನಿಜಕ್ಕೂ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟರೆ ಹೇಗಿರಬಹುದು ? ಏನಂತಾರೆ ನಟಿ ?
ರವೀನಾ ಟಂಡನ್ ಬಾಲಿವುಡ್‌ನ ಕೂಲ್ ನಟಿ. ಹೆಂಡತಿಯಾಗಿ, ತಾಯಿಯಾಗಿ, ಮಗಳಾಗಿ, ಮತ್ತು ಸಹಜವಾಗಿ, ಪ್ರಸಿದ್ಧ ನಟಿಯಾಗಿ ಬ್ಯಾಲೆನ್ಸ್ಡ್ ಲೈಪ್ ಲೀಡ್ ಮಾಡುತ್ತಾರೆ ರವೀನಾ ಟಂಡನ್. ತಮ್ಮ ಕುಟುಂಬ ಮತ್ತು ಸ್ನೇಹಿತರು ಅವರನ್ನು ಟೆನ್ಷನ್ ಮುಕ್ತವಾಗಿಡುತ್ತಾರೆ ಎಂದು ನಟಿ ಹೇಳಿದ್ದಾರೆ.
रवीना काफी समय से फिल्मों से दूर हैं। हालांकि वे इन दिनों टीवी रिएलिटी शो 'नच बलिए9' में बतौर जज नजर आ रही हैं।
ಭಾರತದಲ್ಲಿ, ನಾವು ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ಮೇಲೆ ಆತ್ಮೀಯರಾಗಿದ್ದೇವೆ. ಕೆಲವೊಮ್ಮೆ, ನಾವು ಕುಟುಂಬಕ್ಕೆ ಹತ್ತಿರವಾಗದಿದ್ದರೆ, ನಾವು ಸ್ನೇಹಿತರನ್ನು ತಲುಪುತ್ತೇವೆ. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸ್ನೇಹಿತರಲ್ಲಿ ಸ್ಥಿರವಾದ ವಾತಾವರಣವನ್ನು ಹೊಂದುವುದು ಮುಖ್ಯವಾಗಿದೆ. ನಿಮ್ಮ ಒತ್ತಡದಿಂದ ನಿಮ್ಮನ್ನು ಹೊರತರಲು ನೀವು ಅವರಲ್ಲಿ ಯಾರನ್ನಾದರೂ ಸಮೀಪಿಸಬಹುದು ಎಂದಿದ್ದಾರೆ ಕೆಜಿಎಫ್ ನಟಿ.
ತುಂಬಾ ಟೆನ್ಶನ್ ಆದರೆ ಕಾಡಿಗೆ ಹೋಗುತ್ತೇನೆ. ಅದು ನನ್ನ ಝೆನ್ ವಲಯ. ನನಗೆ ಮುಂಬೈನಲ್ಲಿ ಉಸಿರುಕಟ್ಟಿದಂತಾರೆ, ನಾನ್ಯಾವುದಾದರೂ ಕಾಡಿಗೆ ಓಡಿಬಿಡುತ್ತೇನೆ. ಸಂಪೂರ್ಣವಾಗಿ ರಿಫ್ರೆಶ್ ಆಗಿ ಹಿಂತಿರುಗಿ, ರೀಚಾರ್ಜ್ ಮಾಡಿ, ಮತ್ತೆ ಶುರು ಹಚ್ಚಿಕೊಳ್ಳುತ್ತೇನೆ ಎಂದಿದ್ದಾರೆ.
ಪಾಲಿಟಿಕ್ಸ್ ಎಂಟ್ರಿ ಬಗ್ಗೆ ಮಾತನಾಡಿದ ನಟಿ, ಖಂಡಿತಾ ಎಂದಿಗೂ ಇಲ್ಲ. ನಾನು ಇದರಲ್ಲಿ ಗಂಭೀರವಾಗಿ ಯೋಚಿಸುತ್ತಿದ್ದ ಒಂದು ಅಂಶವಿತ್ತು. ನನಗೆ ಭಾರತ-ಪಶ್ಚಿಮ ಬಂಗಾಳ, ಪಂಜಾಬ್ ಮುಂಬೈನಲ್ಲಿ ಸೀಟುಗಳನ್ನು ನೀಡಲಾಗಿದೆ. ಆದರೆ ದುರದೃಷ್ಟವಶಾತ್ ನಾನು ಆ ಸಮಯದಲ್ಲಿ ಇಲ್ಲ ಎಂದು ಹೇಳಬೇಕಾಗಿತ್ತು. ಏಕೆಂದರೆ ಸ್ವಲ್ಪ ಮಟ್ಟಿಗೆ ರಾಜಕೀಯಕ್ಕೆ ಸಿದ್ಧವಾಗಿರಲಿಲ್ಲ ಎಂದಿದ್ದಾರೆ.
ನಾನು ಸುಮ್ಮನೇ ಬ್ಲೈಂಡ್ ಆಗಿ ಅನುಸರಿಸಬಹುದಾದ ಸಿದ್ಧಾಂತವನ್ನು ಹೊಂದಿರುವ ಯಾವುದೇ ರಾಜಕೀಯ ಪಕ್ಷದಿಂದ ಪ್ರಭಾವಿತಳಾಗಿಲ್ಲ. ನಾನು ಅನೇಕ ವಿಷಯಗಳನ್ನು ಒಪ್ಪುವುದಿಲ್ಲ, ಕೆಲವೊಮ್ಮೆ ಈ ಭಿನ್ನಾಭಿಪ್ರಾಯಗಳಿಂದಾಗಿ ನಾನು ಭಯಪಡುತ್ತೇನೆ ಎಂದಿದ್ದಾರೆ.
ನಾನು ಹೋದರೆ ಬದಲಾವಣೆ ಮಾಡಬೇಕು. ಹಾಗೆ ಸಾಧ್ಯವಾಗದಿದ್ದರೆ ರಾಜಕೀಯಕ್ಕೆ ಹೋಗಬೇಕಾಗಿಲ್ಲ. ನಾನು ರಾಜಕೀಯಕ್ಕೆ ಹೋಗುವುದಿಲ್ಲ ಎಂದು ಈಗ ಹೇಳಲಾರೆ, ಆದರೆ ಮತ್ತೆ ನಾನು ಹೋಗುತ್ತೇನೆ ಎಂದು ಹೇಳುವುದಿಲ್ಲ ಎಂದಿದ್ದಾರೆ.