MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?

'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?

"ನನ್ನ ಬಗ್ಗೆ ಬರೆದಿರುವ ಇಷ್ಟು ಸುಂದರವಾದ ಬರಹವನ್ನು ಓದಿ ನಾನು ತುಂಬಾ ಭಾವುಕಳಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಕಾಡುವ ಬರಹವನ್ನು ನಾನು ಓದಿರಲಿಲ್ಲ. ನನಗೆ ಹೇಳಲು ತುಂಬಾ ವಿಷಯಗಳಿವೆ, ಆದರೆ ಪದಗಳು ಸಾಲುತ್ತಿಲ್ಲ." ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

3 Min read
Author : Shriram Bhat
| Updated : Mar 11 2026, 02:53 PM IST
Share this Photo Gallery
  • FB
  • TW
  • Linkdin
  • Whatsapp
17
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ಸ್ಯಾಂಡಲ್‌ವುಡ್‌ನಿಂದ ಸಿನಿಮಾ ಮೂಲಕ ನಟಿಯಾಗಿ ಆ ಬಳಿಕ ಬಾಲಿವುಡ್‌ ಸಿನಿಮಾಗಳಲ್ಲೂ ಅಭಿನಯಿಸಿ 'ನ್ಯಾಷನಲ್ ಕ್ರಶ್' ಪಟ್ಟ ಪಡೆದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್‌ನ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ (Vijay Deverakonda) ನಡುವಿನ ಕೆಮಿಸ್ಟ್ರಿ ಬಗ್ಗೆ ಜಗತ್ತಿಗೇ ಗೊತ್ತು. ತೆರೆಯ ಮೇಲೆ 'ಗೀತಾ ಗೋವಿಂದಂ' ಆಗಿ ಮಿಂಚಿದ ಈ ಜೋಡಿ, ತೆರೆಯ ಹಿಂದೆ ಕೂಡ ಸಖತ್ ಆಪ್ತವಾಗಿದ್ದಾರೆ ಎಂಬ ಮಾತುಗಳು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇವೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಮತ್ತು ವಿಜಯ್ ನಡುವಿನ ಆ ಸುಂದರ ಬಂಧದ ಬಗ್ಗೆ ರಶ್ಮಿಕಾ ಮಂದಣ್ಣ ಅತ್ಯಂತ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ!

27
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ಅಷ್ಟಕ್ಕೂ ನಡೆದಿದ್ದೇನು?

ಎಲ್ಲದಕ್ಕೂ ಕಾರಣವಾಗಿದ್ದು 'ದಾಮಿನಿ' ಎಂಬುವವರು 'ಟೇಲ್ಸ್ ವಿತ್ ತಾರಾ' (Tales with Tara) ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಒಂದು ಮನಮಿಡಿಯುವ ಬರಹಕ್ಕೆ ಸಂಬಂಧಿಸಿ ಬರೆದ ಬರಹ. ಈ ಬರಹದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ನಿಗೂಢ ಹಾಗೂ ಸುಂದರವಾದ ಸಂಬಂಧವನ್ನು ಅತ್ಯಂತ ಕಾವ್ಯಾತ್ಮಕವಾಗಿ ವಿವರಿಸಲಾಗಿತ್ತು.

Related Articles

Related image1
ನಟಿ ಭವ್ಯಾ ವಿಷ ಕುಡಿದು ಒದ್ದಾಡುತ್ತಿದ್ದ ಟೈಮಲ್ಲಿ ಡಾ ರಾಜ್‌ಕುಮಾರ್ ಬಂದ್ರು.. ಮುಂದೆ ಆಗಿದ್ದೇನು?
Related image2
ಹುಟ್ಟುಹಬ್ಬದ ದಿನ ಡಾ ರಾಜ್‌ಕುಮಾರ್ ಏನ್ ತಿಂತಾ ಇದ್ರು..? ಅಂದು ಪಾರ್ವತಮ್ಮ ಹೇಳಿದ್ದ ಸೀಕ್ರೆಟ್ ಈಗ ವೈರಲ್
37
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ಲೇಖಕಿ ತಾರಾ ಅವರು ರಶ್ಮಿಕಾ ಅವರ ಭಾವನೆಗಳನ್ನು ಹೀಗೆ ಬಣ್ಣಿಸಿದ್ದರು: "ವರ್ಷಗಳಿಂದ ನಾನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಆ ಮರ್ಮದ ಬಂಧವನ್ನು ಗಮನಿಸುತ್ತಿದ್ದೇನೆ. ನಾನು ಅದನ್ನು ದೂರದಿಂದಲೇ ನೋಡಿ ಆನಂದಿಸುತ್ತಿದ್ದೆ. ರಶ್ಮಿಕಾ ಅವರು ವಿಜಯ್ ಅವರನ್ನು ನೋಡುವ ಆ ರೀತಿಗೆ ಒಂದು ವಿಶೇಷವಾದ ಅರ್ಥವಿದೆ. ಯಾರು ಪ್ರೀತಿಯನ್ನು ಅಥವಾ ಅಭಿಮಾನವನ್ನು ಆಳವಾಗಿ ಅನುಭವಿಸಿರುತ್ತಾರೋ, ಅವರಿಗೆ ಮಾತ್ರ ಆ ನೋಟದ ಬೆಲೆ ತಿಳಿಯುತ್ತದೆ. ರಶ್ಮಿಕಾ ಅವರ ಕಣ್ಣುಗಳಲ್ಲಿ ವಿಜಯ್ ಬಗ್ಗೆ ಇರುವ ಆ ಪ್ರೀತಿ, ಕಾಳಜಿ ಮತ್ತು ಅಪಾರವಾದ ಅಭಿಮಾನ ಯಾವುದೇ ಭಾಷೆಗೂ ನಿಲುಕದ್ದು. ಅದು ಕೇವಲ ಒಬ್ಬ ವ್ಯಕ್ತಿಯನ್ನು ನೋಡುವ ದೃಷ್ಟಿಯಲ್ಲ, ಅದು ಅವರ ಸಂಪೂರ್ಣ ಅಸ್ತಿತ್ವವನ್ನು ಪ್ರೀತಿಸುವ ಪರಿ."

47
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ರಶ್ಮಿಕಾ ಮಂದಣ್ಣ ಭಾವುಕ ಪ್ರತಿಕ್ರಿಯೆ:

ತನ್ನ ಬಗ್ಗೆ ಮತ್ತು ತನ್ನ ಜೀವನದ ಅತ್ಯಂತ ಆಪ್ತ ವ್ಯಕ್ತಿಯ ಬಗ್ಗೆ ಇಷ್ಟು ಸುಂದರವಾಗಿ ಬರೆದಿದ್ದನ್ನು ನೋಡಿ ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಿದ್ದಾರೆ ಎನ್ನಬಹುದು. ಅವರು ಈ ಪೋಸ್ಟ್ ಅನ್ನು ಮರು ಹಂಚಿಕೊಂಡು ಅತ್ಯಂತ ಭಾವುಕರಾಗಿ ಹೀಗೆ ಬರೆದಿದ್ದಾರೆ: "ನನ್ನ ಬಗ್ಗೆ ಬರೆದಿರುವ ಇಷ್ಟು ಸುಂದರವಾದ ಬರಹವನ್ನು ಓದಿ ನಾನು ತುಂಬಾ ಭಾವುಕಳಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಕಾಡುವ ಬರಹವನ್ನು ನಾನು ಓದಿರಲಿಲ್ಲ. ನನಗೆ ಹೇಳಲು ತುಂಬಾ ವಿಷಯಗಳಿವೆ, ಆದರೆ ಪದಗಳು ಸಾಲುತ್ತಿಲ್ಲ."

25.02.26 

It was the Pradhanam and Mehendi evening. It was too perfect but it went off too fast.. ❤️

What a stunning piece you have created!!! @toraniofficial thank you for making it so special for us 🫶🏻 pic.twitter.com/czlU4qo2Ye

— Rashmika Mandanna (@iamRashmika) March 10, 2026

57
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ಮುಂದುವರಿದು ಅವರು ತಮ್ಮ ಜೀವನದ ಪಯಣದ ಬಗ್ಗೆ ಮಾತನಾಡುತ್ತಾ, "ನನ್ನದೇ ಆದ ಒಂದು ಸ್ಥಾನವನ್ನು ನಾನು ಕಂಡುಕೊಳ್ಳುತ್ತಿದ್ದೇನೆ ಮತ್ತು ಆ ಪಯಣಕ್ಕಾಗಿ ನಾನು ಸದಾ ಕೃತಜ್ಞಳು. ನನ್ನ ಒಳಗಿನ ಭಾವನೆಗಳನ್ನು ಗುರುತಿಸಿ, ಅದನ್ನು ಇಷ್ಟು ಸುಂದರವಾಗಿ ಪದಗಳಲ್ಲಿ ಹಿಡಿದಿಟ್ಟಿದ್ದಕ್ಕೆ ಧನ್ಯವಾದಗಳು" ಎಂದು ಹೃದಯದ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ.

67
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ಪ್ರೀತಿಯ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಸಿನಿಮಾ ಅಭಿಮಾನಿಗಳ ನಿದ್ದೆ ಗೆಡಿಸಿರುವ ವಿಷಯವೆಂದರೆ ರಶ್ಮಿಕಾ ಅವರು ಪ್ರೀತಿಯ ಬಗ್ಗೆ ನೀಡಿರುವ ಆ ಒಂದು ಸಾಲಿನ ಸಂದೇಶ. "ನಿಮಗೆ ಬಿಡುಗಡೆ ನೀಡುವಂತಹ ಪ್ರೀತಿಯನ್ನು ಕಂಡುಕೊಳ್ಳಿ" (Find a love that liberates you) ಎಂದು ರಶ್ಮಿಕಾ ಬರೆದಿದ್ದಾರೆ. ಈ ಮಾತು ಈಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವಿನ ಪ್ರೀತಿ ಅಧಿಕೃತ ಎಂಬ ಮುದ್ರೆಯನ್ನು ಒತ್ತಿದಂತಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

77
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ
Image Credit : Instagram

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ

ಒಟ್ಟಿನಲ್ಲಿ, ಲೇಖಕಿ ದಾಮಿನಿ, ತಾರಾ ಅವರ ಬರಹ ಮತ್ತು ರಶ್ಮಿಕಾ ಅವರ ಈ 'ಲವ್ ಕನ್ಫೆಷನ್' ಶೈಲಿಯ ಪೋಸ್ಟ್ ಸದ್ಯ ಗಾಂಧಿನಗರದಿಂದ ಹೈದರಾಬಾದ್‌ವರೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಶ್ಮಿಕಾ ಅವರ ಈ ಹೊಸ ಅವತಾರ ಮತ್ತು ಅವರ ಮನದಾಳದ ಮಾತುಗಳು ಅವರ ಅಭಿಮಾನಿಗಳಿಗೆ ನಿಜಕ್ಕೂ ದೊಡ್ಡ ಸರ್ಪ್ರೈಸ್ ನೀಡಿದೆ. ರಶ್ಮಿಕಾ-ವಿಜಯ್ ಜೋಡಿಯ ಲವ್, ಮದುವೆ ಎಲ್ಲವೂ ಈಗ ದೇಶ ಹಾಗು ಜಗತ್ತಿನ ಗಮನ ಸೆಳೆದಿದ್ದು, 'ಟಾಕ್ ಆಫ್ ದಿ ವರ್ಲ್ಡ್' ಎಂಬಂತಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮದುವೆ
ಮನರಂಜನಾ ಸುದ್ದಿ
ಸಂಬಂಧಗಳು
Latest Videos
Recommended Stories
Recommended image1
ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ
Recommended image2
Mahesh Babu: ನಟನೆ ಬಿಡಲು ನಮ್ರತಾ ಹಾಕಿದ್ದ ಆ ಒಂದು ಕಂಡೀಷನ್: ಮಹೇಶ್ ಬಳಿ ಹೆದರಿಕೆಯಿಂದಲೇ ಕೇಳಿದ್ದರಂತೆ
Recommended image3
Taapsee Pannu: ಬಡವಳಾಗಿ ಸಾಯ್ತೀನಿ, ಬಡವಳಾಗಿ ಬದುಕಲ್ಲ: ಕುಟುಂಬವನ್ನೇ ತಮಾಷೆ ಮಾಡಿದ ನಟಿ ತಾಪ್ಸಿ!
Related Stories
Recommended image1
ನಟಿ ಭವ್ಯಾ ವಿಷ ಕುಡಿದು ಒದ್ದಾಡುತ್ತಿದ್ದ ಟೈಮಲ್ಲಿ ಡಾ ರಾಜ್‌ಕುಮಾರ್ ಬಂದ್ರು.. ಮುಂದೆ ಆಗಿದ್ದೇನು?
Recommended image2
ಹುಟ್ಟುಹಬ್ಬದ ದಿನ ಡಾ ರಾಜ್‌ಕುಮಾರ್ ಏನ್ ತಿಂತಾ ಇದ್ರು..? ಅಂದು ಪಾರ್ವತಮ್ಮ ಹೇಳಿದ್ದ ಸೀಕ್ರೆಟ್ ಈಗ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved