- Home
- Entertainment
- Cine World
- National Crush: ಕೊಡಗು ಜಿಲ್ಲೆಗೇ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ.. ಇಷ್ಟೊಂದು ಕಟ್ಟಿದ್ದಾರೆ ನೋಡಿ..!
National Crush: ಕೊಡಗು ಜಿಲ್ಲೆಗೇ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ.. ಇಷ್ಟೊಂದು ಕಟ್ಟಿದ್ದಾರೆ ನೋಡಿ..!
ರಶ್ಮಿಕಾ ಮಂದಣ್ಣಾ ಅವರು 'ಬಾಕ್ಸ್ ಆಫೀಸ್ ಕ್ವೀನ್' ಎಂಬ ಬಿರುದನ್ನೂ ಪಡೆದಿದ್ದಾರೆ. ಅವರ ನಟನೆಯ ಆಲ್‌ಮೋಸ್ಟ್ ಆಲ್ ಸಿನಿಮಾಗಳು ಸಕ್ಸಸ್ ದಾಖಲಿಸಿವೆ. ಸಿನಿಮಾರಂಗದಲ್ಲಿ ಮಾತ್ರವಲ್ಲ, ಇದೀಗ ಬೇರೆ ಒಂದು ಸಂಗತಿಯಲ್ಲೂ ನಟಿ ರಶ್ಮಿಕಾ ಮಂದಣ್ಣ ಅವರು ಟಾಪ್ ಸೆಲೆಬ್ರೆಟಿ ಎನ್ನಿಸಿದ್ದಾರೆ. ಏನದು ನ್ಯೂಸ್ ನೋಡಿ..!

ಕನ್ನಡತಿ, 'ನ್ಯಾಷನಲ್ ಕ್ರಶ್' ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಂತಿಂಥವರಲ್ಲ ಎಂಬುದು ಈಗಾಗಲೇ ಪ್ರೂವ್ ಆಗಿರೋ ಸಂಗತಿ.
ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಟಿಯಾಗಿ ಛಾಪು ಮೂಡಿಸಿದ ರಶ್ಮಿಕಾ ಮಂದಣ್ಣ ಅವರು ಈಗ ಬಾಲಿವುಡ್‌ನಲ್ಲೂ ಮಿಂಚುತ್ತಿರುವ ಭಾರತದ ನಂಬರ್ ಒನ್ ನಟಿ.
ಇಂಥ ನಟಿ ರಶ್ಮಿಕಾ ಮಂದಣ್ಣಾ ಅವರು 'ಬಾಕ್ಸ್ ಆಫೀಸ್ ಕ್ವೀನ್' ಎಂಬ ಬಿರುದನ್ನೂ ಪಡೆದಿದ್ದಾರೆ. ಅವರ ನಟನೆಯ ಆಲ್‌ಮೋಸ್ಟ್ ಆಲ್ ಸಿನಿಮಾಗಳು ಸಕ್ಸಸ್ ದಾಖಲಿಸಿವೆ.
ಸಿನಿಮಾರಂಗದಲ್ಲಿ ಮಾತ್ರವಲ್ಲ, ಇದೀಗ ಬೇರೆ ಒಂದು ಸಂಗತಿಯಲ್ಲೂ ನಟಿ ರಶ್ಮಿಕಾ ಮಂದಣ್ಣ ಅವರು ಟಾಪ್ ಸೆಲೆಬ್ರೆಟಿ ಎನ್ನಿಸಿದ್ದಾರೆ.
ಹೌದು, ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗು ಜಿಲ್ಲೆಯವರು. ಕೊಡಗಿನ ವಿರಾಜಪೇಟೆಯವರು. ಈ ಜಿಲ್ಲೆಯಲ್ಲಿನ ಅನೇಕ ಸಿನಿಮಾ ತಾರೆಯರು, ರಾಜಕೀಯ ನಾಯಕರು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಸದ್ಯ ಚಾಲ್ತಿಯಲ್ಲಿದ್ದಾರೆ.
ಆದರೆ, ಅಚ್ಚರಿ ಎಂಬಂತೆ, ನಟಿ ರಶ್ಮಿಕಾ ಮಂದಣ್ಣ ಅವರು ಎಲ್ಲರನ್ನೂ ಮೀರಿಸಿದ ಸಾಧನೆಯನ್ನು ಇದೀಗ ಮಾಡಿದ್ದಾರೆ. ಆ ಜಿಲ್ಲೆಯ, ಅಂದರೆ ಕೊಡಗು ಜಿಲ್ಲೆಯ ಜನರು ಖುಷಿ ಪಡುವ, ನಮ್ಮೂರಿನ ನಟಿ ಎಂದು ಹೆಮ್ಮೆ ಪಡುವ ಕೆಲಸವೊಂದನ್ನು ಮಾಡಿದ್ದಾರೆ. ಅದೇನು ಗೊತ್ತಾ? ಈ ಸ್ಟೋರಿ ನೋಡಿ..
ಹೌದು, ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗು ಜಿಲ್ಲೆಗೇ ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಅದೇ, ಬಾಲಿವುಡ್ ಕೂಡ ಆಳುತ್ತಿರುವ ರಶ್ಮಿಕಾ ಭಾರತದ ನಂಬರ್ ಒನ್ ನಟಿ ಆಗಿರುವಾಗ ಇನ್ನು ಕೊಡಗಿಗೆ ನಂಬರ್ 2 ಆಗೋದು ಹೇಗೆ ಅಂತೀರಾ? ಅದಲ್ಲ ವಿಷ್ಯ..
ಅವರು ನಟಿಯಾಗಿ ಅಲ್ಲ, ಬದಲಿಗೆ ಕೊಡಗು ಜಿಲ್ಲೆಯ ಬಹುದೊಡ್ಡ ಟ್ಯಾಕ್ಸ್ ಪೇಯರ್ ಅಗಿ ಹೊರಹೊಮ್ಮಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಈವರೆಗೆ ನಟಿ ರಶ್ಮಿಕಾ ಮಂದಣ್ಣ ಅವರು 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ 3 ಅವಧಿಯಲ್ಲಿ ತೆರಿಗೆ ಪಾವತಿ ಮಾಡಲಾಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಮಾರ್ಚ್ ತಿಂಗಳವರೆಗೆ 4ನೇ ತ್ರೈಮಾಸಿಕ ತೆರಿಗೆ ಪಾವತಿಸಲಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಬಲವಾಗಿದೆ. ವಿಜಯ್ ದೇವರಕೊಂಡ ಜೊತೆ ಅವರು ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 26ಕ್ಕೆ ಉದಯಪುರದಲ್ಲಿ ಮದುವೆ ಎನ್ನಲಾಗಿದೆ. ಆದರೆ, ಈ ಸುದ್ದಿಯನ್ನು ನಟಿ ರಶ್ಮಿಕಾ ಆಗಲೀ ಅಥವಾ ನಟ ವಿಜಯ್ ದೇವರಕೊಂಡ ಆಗಲೀ ಅಧಿಕೃತವಾಗಿ ಹೇಳಿಲ್ಲ ಹಾಗೂ ಹಬ್ಬಿರುವ ಸುದ್ದಿ ಒಪ್ಪಿಕೊಂಡಿಲ್ಲ. ಮುಂದೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ!
ಒಟ್ಟಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಭಾರತ ಸೇರಿದಂತೆ ಇಡೀ ವಿಶ್ವವೇ ಅವರತ್ತ ನೋಡುವಷ್ಟು, ಅವರ ಬಗ್ಗೆ ಮಾತನ್ನಾಡುವಷ್ಟು ಬೆಳೆದಿದೆ. ರಶ್ಮಿಕಾ ಮಂದಣ್ಣ ಮದುವೆ ಕೂಡ ಜಗತ್ತಿಗೇ ದೊಡ್ಡ ಸುದ್ದಿಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

