ಲಿಪ್ ಲಾಕ್ ಮಾಡುವ ಮೂಲಕ ಪತ್ನಿ Deepika Padukone ಕೆಲಸ ಹೊಗಳಿದ ರಣವೀರ್
ದೀಪಿಕಾ ಪಡುಕೋಣೆ (Deepika Padukone) ನಟಿಸಿರುವ 'ಗೆಹ್ರಾಯಿಯಾ' (Gehraiyaan) ಸಿನಿಮಾ ಇಂದು ಅಂದರೆ ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಪತಿ ರಣವೀರ್ ಸಿಂಗ್ (Ranveer Singh) ತಮ್ಮ ಪಾರ್ಟನರ್ ದೀಪಿಕಾರ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ರಣವೀರ್ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡು ಪತ್ನಿಯನ್ನು ಹೊಗಳಿದ್ದಾರೆ.
ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತ್ಯಂತ ರೋಮ್ಯಾಂಟಿಕ್ ಜೋಡಿಗಳಲ್ಲಿ ಒಬ್ಬರು. ಅವರು ಯಾವಾಗಲೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಿದ್ಧರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಾಗಲಿ ಅಥವಾ ಸಾರ್ವಜನಿಕ ಸ್ಥಳಗಳಾಗಲಿ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಅಷ್ಟೇ ಅಲ್ಲ ಒಬ್ಬರನ್ನೊಬ್ಬರು ಹೊಗಳಿಕೊಳ್ಳುವುದೂ ಕಂಡು ಬರುತ್ತದೆ.
ದೀಪಿಕಾ ಪಡುಕೋಣೆ ಅಭಿನಯದ 'ಗಹ್ರೇಯಾನ್' ಚಿತ್ರ ಇಂದು ಅಂದರೆ ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ರಣವೀರ್ ತಮ್ಮ ಪಾರ್ಟನರ್ ದೀಪಿಕಾ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತುಂಬಾ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡು ದೀಪಿಕಾರನ್ನು ಹೊಗಳಿದ್ದಾರೆ.
ಬೀಚ್‌ನಲ್ಲಿ ದೀಪಿಕಾ ಲಿಪ್ ಲಾಕ್ ಮಾಡುತ್ತಿರುವ ಚಿತ್ರವನ್ನು ರಣವೀರ್ ಸಿಂಗ್ ಹಂಚಿಕೊಂಡಿದ್ದಾರೆ. ಫೋಟೋ ನೋಡಿದರೆ ಇಬ್ಬರೂ ಸಮುದ್ರ ಸ್ನಾನ ಮುಗಿಸಿ ಪರಸ್ಪರ ರೊಮ್ಯಾಂಟಿಕ್ ಆಗಿ ಲಿಪ್ ಲಾಕ್ ಮಾಡಿಕೊಂಡಿದ್ದಾರೆ ಅನ್ನಿಸುತ್ತದೆ. ನಟ ತುಂಬಾ ಸಿಜ್ಲಿಂಗ್ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಶೀರ್ಷಿಕೆಯಲ್ಲಿ ಬರೆದಿದ್ದಾರೆ,
'ದುಬೆ ಹೂ ದುಬೆ ಏಕ್ ದುಜೆಮೇ ಯಹಾ... ಅಸಾಧಾರಣ, ಅತ್ಯುನ್ನತ ಮತ್ತು ಉತ್ತಮ. ಎಂತಹ ಅದ್ಭುತ ಪ್ರದರ್ಶನ ಬೇಬಿ.. ಸಂಪೂರ್ಣವಾಗಿ ಅತ್ಯುತ್ತಮ, ಸೂಕ್ಷ್ಮ ಮತ್ತು ಹೃದಯ ಸ್ಪರ್ಶಿಸುವ. ಅತ್ಯಂತ ಪರಿಣಾಮಕಾರಿ ಮತ್ತು ಅಸಾಧಾರಣ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ಸಿನಿಮಾದಲ್ಲಿನ ದೀಪಿಕಾ ಅವರ ಅಮೋಘ ಅಭಿನಯವನ್ನು ಶ್ಲಾಘಿಸಿದ್ದಾರೆ ರಣವೀರ್ ಸಿಂಗ್.
ನಟನ ಈ ಫೋಟೋವನ್ನು ನೋಡಿ, ಬಾಲಿವುಡ್ ಗಣ್ಯರು ಸೇರಿದಂತೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋವನ್ನು ನೋಡಿದ ನಂತರ ಅನೇಕ ಸೆಲೆಬ್ರಿಟಿಗಳು ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, 'ನಿಮ್ಮಿಬ್ಬರನ್ನೂ ಹೀಗೆ ನೋಡಿ ನಾನು ಮುಳುಗುತ್ತೇನೆ' ಎಂದು ಬರೆದಿದ್ದಾರೆ.
ಈ ಸಿನಿಮಾವು ಗೊಂದಲಮಯ ಸಂಬಂಧದ ಕಥೆಯಾಗಿದೆ. ಆದರೆ, ಚಿತ್ರದ ವೇಗ ತುಂಬಾ ನಿಧಾನ ಮತ್ತು ನೀರಸವಾಗಿದೆ. ಅದೇ ಸಮಯದಲ್ಲಿ, ದೀಪಿಕಾ ಮರಳುವಿಕೆಯಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೀಪಿಕಾ ಪಡುಕೋಣೆ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ ದೀಪಿಕಾ ಹೊರತುಪಡಿಸಿ ಸಿದ್ಧಾಂತ್ ಚತುರ್ವೇದಿ ಅಥವಾ ಅನನ್ಯ ಪಾಂಡೆ ಅಥವಾ ಧೈರ್ಯ ಕರ್ವ ಜೀವಂತವಾಗಿಲ್ಲ ಎಂದು ವಿಮರ್ಶಕರು ಮತ್ತು ಪ್ರೇಕ್ಷಕರು ಹೇಳುತ್ತಾರೆ. ಇದು ಶಕುನ್ ಬಾತ್ರಾ ಅವರ ಮೂರನೇ ಚಿತ್ರ. ಆದರೆ ಈ ಸಿನಿಮಾದ ಮೂಲಕ ಪ್ರೇಕ್ಷಕರಲ್ಲಿ ಛಾಪು ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ