ದೀಪಿಕಾ ಪಡುಕೋಣೆ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಗೆಹ್ರಾಯಿಯಾನ್ ಸಿನಿಮಾದ ಹಾಟ್ ಲುಕ್ ಒಂದು ಕಾರಣ ಆದ್ರೆ, ಈ ಸಿನಿಮಾದ ಪ್ರೊಮೋಶನ್‌ಗೆ ಹಾಕ್ಕೊಂಡು ಬಂದ 90 ಸಾವಿರ ಬೆಲೆಬಾಳೋ ಡ್ರೆಸ್ ಇನ್ನೊಂದು ಕಾರಣ. ಅದನ್ನು ನೋಡಿ ನೆಟಿಜನ್ಸ್ ಏ, ದೀಪಿಕಾ, ಇದೇನು ರಣವೀರ್ ಸಿಂಗ್ ಡ್ರೆಸ್ ಹಾಕ್ಕೊಂಡು ಬಂದ್ರಿ ಅಂತ ಕಾಲೆಳೆಯುತ್ತಿದ್ದಾರೆ.

ದೀಪಿಕಾ ಪಡುಕೋಣೆ (Deepika Padukone) ನಿಂತ್ರೂ ಸುದ್ದಿ, ಕೂತ್ರೂ ಸುದ್ದಿ ಅನ್ನೋ ಹಾಗಾಗಿದೆ. ಅದ್ಕೆಲ್ಲ ಕಾರಣ ಅವರ ಗೆಹ್ರಾಯಿಯಾನ್ (Gehraiyan) ಸಿನಿಮಾನಾ ಅಥವಾ ಸದ್ಯ ದೀಪಿಕಾ ಗ್ರಹಚಾರವೇ ಹಾಗಿದ್ಯಾ ಗೊತ್ತಿಲ್ಲ, ಮೊನ್ನೆ ಮೊನ್ನೆ ದೀಪಿಕಾ ಮತ್ತು ಗೆಹ್ರಾಯಿಯಾನ್ ಸಿನಿಮಾದ ಹೀರೋ ಸಿದ್ಧಾಂತ್ ಚತುರ್ವೇದಿ ಅವರ ರೊಮ್ಯಾಂಟಿಕ್ (Romantic) ಸೀನ್‌ಗಳು, ಹಾಟ್‌ ಕಿಸ್‌ಗಳು (hot kiss) ಸೋಷಿಯಲ್‌ ಮೀಡಿಯಾದಲ್ಲಿ (Social media) ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದವು.

View post on Instagram

ಇದಕ್ಕೆ ದೀಪಿಕಾನೂ ಪ್ರತಿಕ್ರಿಯೆ ನೀಡಿದ್ದರು. 'ನನ್ನ ಈವರೆಗಿನ ಸಿನಿಮಾ ಲೈಫಲ್ಲೇ ಇಂಥದ್ದೊಂದು ಪಾತ್ರ ಮಾಡಿಲ್ಲ. ಅದರಲ್ಲೂ ರೊಮ್ಯಾಂಟಿಕ್‌ ಸೀನ್‌ಗಳಲ್ಲಿ ಕಂಫರ್ಟೇಬಲ್ ಆಗಿ ಆಕ್ಟ್ ಮಾಡೋದಕ್ಕೆ ಬಹಳ ಸರ್ಕಸ್ ಮಾಡಿದೆ. ಕೊನೆಗೂ ಅದು ಸಾಧ್ಯವಾಗಿದೆಯಾ ಇಲ್ವಾ ಗೊತ್ತಿಲ್ಲ' ಅಂದ್ರು. ಅಷ್ಟೇ ಅಲ್ಲ, ಮತ್ತೊಂದು ಮಾತು ಹೇಳಿದ್ದೂ ನೆಟಿಜನ್ಸ್ (Netizens) ಹುಬ್ಬೇರೋ ಹಾಗೆ ಮಾಡಿತು. ಅದು ಮತ್ತೇನೂ ಅಲ್ಲ, 'ಹೆಚ್ಚಾಗಿ ನಾನು ಒಂದು ಅಥವಾ ಎರಡು ಟೇಕ್‌ನಲ್ಲೇ ಸೀನ್ ಮುಗಿಸ್ತೀನಿ. ಪದೇ ಪದೇ ಟೇಕ್ ತಗೊಳ್ಳೋ ಜಾಯಮಾನ ನನ್ನದಲ್ಲ. ಆದರೆ ಈ ಸಿನಿಮಾದ ರೊಮ್ಯಾಂಟಿಕ್ ಸೀನ್‌ಗಳಿಗೆ ಬರೋಬ್ಬರಿ 48 ಟೇಕ್ ತಗೊಂಡೆ!' ಅಂದುಬಿಟ್ಟರು. ಕೆಲವು ಸಭ್ಯಸ್ಥರು, 'ಬಹುಶಃ ನೀವೀಗ ಸಂಸಾರಿ. ರಣವೀರ್ (Ranaveer Singh) ಜೊತೆಗೆ ದಾಂಪತ್ಯದಲ್ಲಿರುವ ಕಾರಣ ಇನ್ನೊಬ್ಬ ಗಂಡಸಿನ ಜೊತೆಗೆ ರೊಮ್ಯಾಂಟಿಕ್ ಆಗಿ ಆಕ್ಟ್ ಮಾಡುವಾಗ ಹೀಗಾಗಿರಬಹುದು' ಅಂತ ಹೇಳಿದ್ರು. ಆದರೆ ಪಡ್ಡೆಗಳೆಲ್ಲ ಇದನ್ನ ಬೇರೆ ಅರ್ಥದಲ್ಲೇ ಟ್ರೋಲ್ ಮಾಡ್ತಿದ್ದಾರೆ.

Raveena Tondon About Kargil War: ಕಾರ್ಗಿಲ್ ಸಂದರ್ಭ ಬಾಲಿವುಡ್ ನಟಿ ಹೆಸರಲ್ಲಿ ಪಾಕ್ ಪ್ರಧಾನಿಗೆ ಹೋಗಿತ್ತು ಬಾಂಬ್..!

ಇದೆಲ್ಲ ನಿನ್ನೆ ಮೊನ್ನೆಯ ಕಥೆ. ಇವತ್ತೀಗ ದೀಪಿಕಾ ಟ್ರೋಲ್‌ಗೆ (Troll) ಒಳಗಾಗಿರೋದು ಅವರು ಧರಿಸಿರೋ ಶರ್ಟ್ ಡ್ರೆಸ್‌ ಕಾರಣಕ್ಕೆ. ಇದರ ಬೆಲೆ ಬರೋಬ್ಬರಿ 90 ಸಾವಿರ ರೂಪಾಯಿಗಳು. 'ಏನ್ ತಾಯೀ, ಶರ್ಟ್ ಹಾಕ್ಕೊಳ್ಳೋ ಮುಂಚೆ ಸ್ವಲ್ಪ ನೋಡೋದಲ್ವಾ, ರಣವೀರ್ ಸಿಂಗ್ ಡ್ರೆಸ್‌ಅನ್ನೇ ಹಾಕ್ಕೊಂಡು ಬಂದಿದ್ದೀಯಾ' ಅಂತ ಒಂದಿಷ್ಟು ಜನ ಬೆಳಗ್ಗಿನಿಂದಲೇ ದೀಪಿಕಾ ಕಾಲೆಳೆಯುತ್ತಿದ್ದಾರೆ. ಇದಕ್ಕೆ ಸಖತ್ ಫನ್ನಿ ಕಮೆಂಟ್‌ಗಳೂ ಬರುತ್ತಿವೆ.

ಒಂದು ಕಡೆ ನೆಟಿಜನ್ಸ್ ತಮ್ಮ ಯೂಶ್ಯುವಲ್ ಮೈಂಡ್‌ಸೆಟ್‌ನಲ್ಲಿ ಗೇಲಿ ಮಾಡಿ ನಕ್ಕರೆ ಇನ್ನೊಂದು ಕಡೆ ಫ್ಯಾಶನ್ (Fashion) ಜಗತ್ತಿನಲ್ಲಿ ದೀಪಿಕಾ ಧರಿಸಿರೋ ಈ ಡ್ರೆಸ್‌ಗೆ ತುಂಬು ಶ್ಲಾಘನೆ ವ್ಯಕ್ತವಾಗುತ್ತಿದೆ. ಅಲ್ಟ್ರಾ ಗ್ಲಾಮರ್ ಲುಕ್‌ ಇರುವ ಈ ಬಾಡಿಕಾನ್‌ ಎಸ್ಸೆಂಬಲ್ಸ್‌ ಸಖತ್‌ ಜಾಯ್‌ಫುಲ್‌ ಲುಕ್‌ನಲ್ಲಿದೆ. ಹಾಲಿನ ಬಿಳುಪು ಬ್ರಾಗ್ರೌಂಡ್‌ನಲ್ಲಿ ಕಪ್ಪು ದಪ್ಪ ಗೆರೆಗಳಿರೋ ಈ ಮೊನೋಕ್ರೋಸ್‌ ಡ್ರೆಸ್‌ನಲ್ಲಿ ದೀಪಿಕಾ ಸ್ಟೈಲ್‌ ಐಕಾನ್‌ ರೀತಿ ಕಂಡಿದ್ದಾರೆ. ಈ ಡ್ರೆಸ್‌ನಲ್ಲಿ ದೀಪಿಕಾ ಅವರನ್ನು ನೋಡಿದ ಇಂಟರ್‌ನ್ಯಾಶನಲ್‌ ಲೆವೆಲ್‌ ಫ್ಯಾಶನ್‌ ಡಿಸೈನರ್ಸ್, 'ದಿ ಅನ್‌ಸ್ಟಾಪೆಬಲ್‌ ಕ್ವೀನ್‌ ಆಫ್‌ ಫ್ಯಾಶನ್' ಅಂತ ಹಾಡಿ ಹೊಗಳಿದ್ದಾರೆ.

ಕೆನ್ನೆಗೆ ಮುತ್ತಿಕ್ಕಿಸಿಕೊಂಡ 15 ವರ್ಷ ಹಳೆ ಕೇಸಲ್ಲಿ ಶಿಲ್ಪಾಶೆಟ್ಟಿಗೆ ಕ್ಲೀನ್‌ಚಿಟ್‌

ಈ ಕಾಲಕ್ಕೆ ಸಿಲ್ಲೋಟ್ ಡಿಸೈನ್‌ನ ಈ ಥರದ ಉಡುಗೆಗಳು ಚೆನ್ನಾಗಿ ಕಾಣುತ್ತವೆ ಅನ್ನೋದು ಫ್ಯಾಶನ್‌ ಲೋಕದ ಪಂಟರ ಮಾತು. ಜಿಯೊಮೆಟ್ರಿಕ್‌ ವೈಟ್‌ ಮತ್ತು ಬ್ಲಾಕ್‌ ಪ್ರಿಂಟ್‌ನ ಈ ಡ್ರೆಸ್‌ ಮಿನಿ ಲೆನ್ತ್‌ನದು. ಉದ್ದದ ಸ್ಲೀವ್ಸ್‌, ಅಗಲದ ಕಾಲರ್, ವಿ ಶೇಪ್ ಡೀಪ್‌ ನೆಕ್‌ ದೀಪಿಕಾ ಅನ್ನೋ ಸುಂದರಿಯ ಸೌಂದರ್ಯವನ್ನು ಬಹಳ ಅಂದವಾಗಿ ತೋರಿಸಿರೋದು ವಿಶೇಷ. 60ರ ದಶಕದಲ್ಲಿ ಈ ಥರದ ಡ್ರೆಸ್‌ಗಳಿದ್ದವು. ಸೋ, ಇದೀಗ ಇಂಥಾ ಸ್ಟೈಲ್‌ ಮಾಡೋ ಮೂಲಕ ದೀಪಿಕಾ ತಮ್ಮ ವಾರ್ಡ್ ರೋಬ್‌ನೊಳಗೆ ರೆಟ್ರೋ ಡ್ರೆಸ್‌ಗಳಿಗೂ ಜಾಗ ಕೊಟ್ಟಿದ್ದಾರೆ.

ಅಂದಹಾಗೆ ಈ ಡ್ರೆಸ್‌ಗೆ ಜಿಯೊಮೆಟ್ರಿಕ್‌ ಜಾಕ್ವರ್ಡ್ ಜಾಕೆಟ್‌ ಅಂತ ಹೆಸರು. ಇದಕ್ಕೆ ಕಾಂಬಿನೇಶನ್‌ ಆಗಿ ಹೈ ಹೀಲ್ಸ್‌ High heel) ಇರುವ ಬ್ಲಾಕ್‌ ಥೈ ಹೈ ಬೂಟ್ಸ್‌ ಧರಿಸಿದ್ದಾರೆ. ಮಿನಿಮಲ್‌ ಜ್ಯುವೆಲ್ಲರಿ (Jewellery) ಇದೆ. ಅಂದರೆ ಚಿನ್ನದ ಸ್ಟೈಲಿಶ್‌ ಯಿಯರ್ ರಿಂಗ್‌ (ear ring) ಧರಿಸಿದ್ದಾರೆ. ಜೊತೆಗೆ ವಾರೆ ಬೈತಲೆ ತೆಗೆದು ಒಂದು ಸೈಡ್‌ ಪೋನಿಟೈಲ್ ಹಾಕ್ಕೊಂಡಿದ್ದಾರೆ.

Katrina Kaif Bikini Look: ಸಮುದ್ರದ ವೇಸ್ಟ್‌ನಿಂದ ಮಾಡಿದ ಬಿಕಿನಿಯಲ್ಲಿ ಕತ್ರೀನಾ

ಈಗ ಈ ಡ್ರೆಸ್‌ಗೆ ಯಾಕಪ್ಪಾ ಅಷ್ಟು ದುಡ್ಡು ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು. ಟ್ರೋಲ್ ಮಾಡೋ ಪಡ್ಡೆ ಹೈಕ್ಳೂ ಇಂಥಾ ಡೀಟೇಲ್ಸ್‌ ಕಡೆ ಸ್ವಲ್ಪ ಕಣ್ಣಾಡಿಸಿದ್ರೆ ದೀಪಿಕಾ ಮಾಡಿರೋ ಸ್ಟೈಲ್‌ಗೂ ಒಂದು ಘನತೆ ಬರೋದು. ಸೋ, ಟ್ರೋಲ್ ಮಾಡೋ ಮುಂಚೆ ಫ್ಯಾಕ್ಟ್‌ ಚೆಕ್‌ ಮಾಡೋದು ಮರೀಬೇಡಿ ಅನ್ನೋದು ಫ್ಯಾಶನ್‌ ಲೋಕದವರ ಸದ್ಯದ ರಿಕ್ವೆಸ್ಟು.