MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Kareena Kapoor ತಂದೆ ರಣಧೀರ್‌ ಕಪೂರ್‌ ಬಗ್ಗೆ ಗೊತ್ತಿರದ ವಿಷ್ಯಗಳಿವು!

Kareena Kapoor ತಂದೆ ರಣಧೀರ್‌ ಕಪೂರ್‌ ಬಗ್ಗೆ ಗೊತ್ತಿರದ ವಿಷ್ಯಗಳಿವು!

ಕರೀನಾ ಕಪೂರ್ (Kareena Kapoor) ಅವರ ತಂದೆ ರಣಧೀರ್ ಕಪೂರ್ (Randhir Kapoor) 75 ವರ್ಷಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 15, 1947 ರಂದು ಮುಂಬೈನಲ್ಲಿ ಜನಿಸಿದ ರಣಧೀರ್  ಕೇವಲ 8ನೇ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅವರು ಶ್ರೀ 420 ಮತ್ತು ದೋ ಉಸ್ತಾದ್ ಸೇರಿ ಕೆಲವು ಚಿತ್ರಗಳಲ್ಲಿ ಬಾಲ ಕಲಾವಿದರಾಗಿಯೂ ಕೆಲಸ ಮಾಡಿದರು. ಅವರು ಕಲ್ ಆಜ್ ಔರ್ ಕಲ್ ಚಿತ್ರಗಳ ಮೂಲಕ ನಾಯಕ ನಟನಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರವೂ ಅವರು ಚಲನಚಿತ್ರಗಳಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಕುಟುಂಬ ಸದಸ್ಯರೊಂದಿಗೆ ಜಗಳವಾಡಿ 1971ರಲ್ಲಿ ಬಬಿತಾ ಅವರನ್ನು ವಿವಾಹವಾದರು. ಆದರೆ,  ಮದುವೆಯಾದ ಕೆಲವು ವರ್ಷಗಳ ನಂತರ ಹೆಂಡತಿಯಿಂದ ಬೇರ್ಪಟ್ಟರು. ಬೇರೆ ಬೇರೆಯಾಗಿ ವರ್ಷಗಳೇ ಕಳೆದರೂ, ಈ ಜೋಡಿ ಇನ್ನೂ ವಿಚ್ಛೇದನ ಪಡೆದಿಲ್ಲ. ರಣಧೀರ್ ಕಪೂರ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌  ವಿಷಯಗಳನ್ನು ಕೆಳಗೆ ಓದಿ.

2 Min read
Author : Suvarna News
Published : Feb 15 2022, 06:08 PM IST
Share this Photo Gallery
  • FB
  • TW
  • Linkdin
  • Whatsapp
19

ಕರೀನಾ ಕಪೂರ್ ತಮ್ಮ ತಂದೆ ರಣಧೀರ್ ಕಪೂರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅವರು ತಂದೆ ತಾಯಿ ಫೋಟೋವನ್ನು ಹಂಚಿಕೊಂಡು, 'ವಿಶ್ವದ ಅತ್ಯುತ್ತಮ ವ್ಯಕ್ತಿಗೆ ಜನ್ಮ ದಿನದ ಶುಭಾಶಯಗಳು. ಅಪ್ಪಾ... ನನ್ನ ತಂದೆ, ನನ್ನ ಪ್ರೀತಿಯ ತಂದೆ, ಸಾಮು, ಕಿಯು, ಟಿಮ್ ಟಿಮ್ ಮತ್ತು ಜೆಹ್ ಬಾಬಾ ಪರವಾಗಿ ಶುಭಾಶಯಗಳು'.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ರಣಧೀರ್ ಮತ್ತು ಬಬಿತಾ ತಮ್ಮ ಮೊದಲ ಸಿನಿಮಾ ಕಲ್ ಆಜ್ ಔರ್ ಕಲ್‌ನಲ್ಲಿ ಒಟ್ಟಿಗೆ ಮಾಡಿದರು. ಮೊದಲ ಚಿತ್ರದಿಂದಲೇ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ರಣಧೀರ್ ಪಂಜಾಬಿ ಮತ್ತು ಬಬಿತಾ ಸಿಂಧಿ ಕುಟುಂಬದವರು. ಇವರಿಬ್ಬರೂ ಸಂಸಾರದಲ್ಲಿ ಮದುವೆ ವಿಚಾರವಾಗಿ ಮಾತನಾಡಿದಾಗ ಎಲ್ಲರೂ ಅವರ ವಿರುದ್ಧ ತಿರುಗಿಬಿದ್ದರು.

 
 

39

ಕಪೂರ್ ಕುಟುಂಬದ ಹುಡುಗಿಯರು ಆ ಸಮಯದಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರಲಿಲ್ಲ ಅಥವಾ ಕುಟುಂಬದ ಸದಸ್ಯರು ನಟಿಯನ್ನು ಮದುವೆಯಾಗಿರಲಿಲ್ಲ. ಬಬಿತಾ ಅವರ ಆಜ್ಞೆಯ ಮೇರೆಗೆ ರಣಧೀರ್ ತಂದೆ ರಾಜ್ ಕಪೂರ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದರು. ಬಬಿತಾರನ್ನು ತನ್ನ ಮನೆಯ ಸೊಸೆಯಾಗಿಸಲು ರಾಜ್ ಕಪೂರ್ ತಯಾರಿರಲಿಲ್ಲ.

 


 

49

ಮನೆಯವರು ವಿರೋಧಿಸಿದರೂ ರಣಧೀರ್ ಮತ್ತು ಬಬಿತಾ ನಡುವೆ ಪ್ರೀತಿ ಬೆಳೆಯುತ್ತಲೇ ಇತ್ತು. ಮದುವೆಯಾಗಲು, ರಣಧೀರ್ ಬಬಿತಾರಿಗೆ ಚಲನಚಿತ್ರ ವೃತ್ತಿ ಜೀವನವನ್ನು ತೊರೆಯಬೇಕು ಎಂದು ಷರತ್ತು ವಿಧಿಸಿದರು.ಪ್ರೀತಿಗಾಗಿ ಬಬಿತಾ ಸಿನಿಮಾಗಳಿಂದ ದೂರವಾದರು. ಇಬ್ಬರೂ 1971ರಲ್ಲಿ ವಿವಾಹವಾದರು.

59

ರಣಧೀರ್ ಮತ್ತು ಬಬಿತಾ ಅವರ ಮದುವೆಯಲ್ಲಿ ಕುಟುಂಬ ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಮದುವೆಯ ನಂತರ ರಣಧೀರ್ ಮತ್ತು ಬಬಿತಾ ಪ್ರತ್ಯೇಕ ಫ್ಲಾಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಕರಿಷ್ಮಾ 1974 ರಲ್ಲಿ ಮತ್ತು ಕರೀನಾ 1980 ರಲ್ಲಿ ಜನಿಸಿದರು. ಮದುವೆಯ ನಂತರ ಬಬಿತಾ ತನ್ನ ಚಲನಚಿತ್ರ ವೃತ್ತಿ ಜೀವನವನ್ನು ತೊರೆದರು ಆದರೆ ಅವರು ತಮ್ಮ ಹೆಣ್ಣು ಮಕ್ಕಳನ್ನು ನಟಿಯರನ್ನಾಗಿಸಲು ಬಯಸಿದ್ದರು.

 

69

ಸ್ವಲ್ಪ ಸಮಯದ ನಂತರ, ಬಬಿತಾ ಮತ್ತು ರಣಧೀರ್ ನಡುವೆ ಟೆನ್ಷನ್ ಹೆಚ್ಚಾಗ ತೊಡಗಿತು.ರಣಧೀರ್ ಯಾವುದೇ ಕೆಲಸ ಮಾಡದ ಕಾರಣ ಬಬಿತಾ ಬೇಸರಗೊಂಡಿದ್ದರು. ನಂತರ ಬಬಿತಾ ಕಪೂರ್ ಕುಟುಂಬವನ್ನು ತೊರೆದು ಪ್ರತ್ಯೇಕವಾಗಿ ವಾಸಿಸುವ ಸಮಯ ಬಂದಿತು. ಬಬಿತಾ ತನ್ನ ಪುತ್ರಿಯರಾದ ಕರಿಷ್ಮಾ ಮತ್ತು ಕರೀನಾ ಅವರ ವೃತ್ತಿ ಜೀವನದ ಮೇಲೆ ಕೇಂದ್ರೀಕರಿಸಿದರು. ಕಪೂರ್ ಕುಟುಂಬದ ವಿರೋಧದ ನಡುವೆಯೂ ಅವರು ಚಿತ್ರರಂಗದಲ್ಲಿ  ಕೆಲಸ ಮಾಡಲು ಪ್ರಾರಂಭಿಸಿದರು.
 

79

ಹಲವು ವರ್ಷಗಳಿಂದ  ರಣಧೀರ್ ಮತ್ತು ಬಬಿತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಇನ್ನೂ ವಿಚ್ಛೇದನ (Divorce) ಪಡೆದಿಲ್ಲ. ಇಬ್ಬರೂ ಕಪೂರ್ ಕುಟುಂಬಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಾರಂಭ, ಆಚರಣೆಗಳಲ್ಲಿ ಸಂತೋಷದಿಂದ ಭಾಗಿಯಾಗುತ್ತಾರೆ ಮತ್ತು ಭೇಟಿಯಾಗುತ್ತಾರೆ 

89

ರಣಧೀರ್ ಮತ್ತು ಬಬಿತಾ ಅವರ ಪುತ್ರಿಯರಿಬ್ಬರಿಗೂ ವಿವಾಹವಾಗಿದೆ. ಕರಿಷ್ಮಾ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು ಆದರೆ ಇಬ್ಬರೂ ವಿಚ್ಛೇದನ ಪಡೆದರು. ಕರಿಷ್ಮಾಗೆ ಅದಾರ ಮತ್ತು ಕಿಯಾನ್ ಎಂಬ ಇಬ್ಬರು
ಮಕ್ಕಳಿದ್ದಾರೆ. ಅದೇ ಸಮಯದಲ್ಲಿ ಕರೀನಾ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿವೆ.

 


 

99

ರಣಧೀರ್ ಕಪೂರ್ ರಿಕ್ಷಾವಾಲಾ, ಹಾಥ್ ಕಿ ಸಫಾಯಿ, ದಿಲ್ ದೀವಾನಾ, ಲಫಾಂಗೆ, ಧರಮ್ ಕರಮ್, ಆಜ್ ಕಾ ಮಹಾತ್ಮ, ಚಾಚಾ ಭತೀಜಾ, ಕಸ್ಮೆ ವಾಡೆ, ಹೀರಾಲಾಲ್ ಪನ್ನಾಲಾಲ್, ಬಿವಿ ಓ ಬೀವಿ, ಜಾನೆ ಕೊ ದಿಕ್ನಾ ಹೈ, ಹೌಸ್‌ಫುಲ್, ಸೂಪರ್ ನಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕರೀನಾ ಕಪೂರ್
ಬಾಲಿವುಡ್
ಹುಟ್ಟುಹಬ್ಬ
ತಂದೆ
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
Recommended image2
ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ: 'ನಟ ಸಾರ್ವಭೌಮ' ನಟಿ ಭಾವುಕ!
Recommended image3
ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ ಕೆಜಿಎಫ್ ನಟಿ: ಹೊಸ ಪಾತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved