ದುಡ್ಡಿಗಾಗಿ ಪರದಾಡುತ್ತಿದ್ದ ದಿನಗಳ ಬಗ್ಗೆ ಬಾಯಿಬಿಟ್ಟ ಕರೀನಾ ಕಪೂರ್ ತಂದೆ!
70ರ ದಶಕದ ನಟ ಹಾಗೂ ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಅವರ ಅವರ ಹಳೆಯ ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ಈ ಸಮಯದಲ್ಲಿ, ಅವರು ತಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡಿ, ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
2014ರಲ್ಲಿ ರೆಡಿಫ್ ಜೊತೆಯ ಮಾತುಕತೆ ಸಮಯದಲ್ಲಿ, ರಣಧೀರ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದರು. ಅರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಮತ್ತು ಖರ್ಚುಗಳನ್ನು ನಿರ್ವಹಿಸಲು ಕಷ್ಟಪಟ್ಟ ದಿನಗಳ ಬಗ್ಗೆ ಮಾತನಾಡಿದ್ದರು ಕರೀನಾ ಕಪೂರ್ ತಂದೆ.
ರಣಧೀರ್ ಕಪೂರ್ 1971ರಲ್ಲಿ ಕಲ್ ಆಜ್ ಔರ್ ಕಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಾಯಕ ನಟನ ಜೊತೆಯಲ್ಲಿ ಅವರು ಈ ಚಿತ್ರದ ನಿರ್ದೇಶಕರಾಗಿದ್ದರು. ಈ ಚಿತ್ರದಲ್ಲಿ ಅವರು ತಮ್ಮ ಪತ್ನಿ ಬಬಿತಾ ಜೊತೆ ತೆರೆ ಹಂಚಿಕೊಂಡರು.
ಚಿತ್ರದಲ್ಲಿ, ಅವರು ತಮ್ಮ ತಂದೆ ರಾಜ್ ಕಪೂರ್ ಮತ್ತು ಅಜ್ಜ ಪೃಥ್ವಿರಾಜ್ ಕಪೂರ್ ಜೊತೆ ಕಾಣಿಸಿಕೊಂಡರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು .2014 ರಲ್ಲಿ, ಅವರು ತಮ್ಮ ಸಂದರ್ಶನವೊಂದರಲ್ಲಿ ತಮ್ಮ ಮನೆಯ ಆರ್ಥಿಕ ಸ್ಥಿತಿ ಮತ್ತು ವೆಚ್ಚಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಇಂದಿನ ಪೀಳಿಗೆ ಸಾಕಷ್ಟು ಹಣವನ್ನು ಗಳಿಸುತ್ತಿದೆ. ಆದರೆ ಅವರ ಸಮಯದಲ್ಲಿ ಹೀಗೆ ಇರಲಿಲ್ಲ. ಅವರು ಕುಟುಂಬವನ್ನು ಬೆಳೆಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು ಎಂದು ಸಂದರ್ಶನದಲ್ಲಿ ತಮ್ಮ ಹಳೆ ದಿನಗಳನ್ನು ನೆನಪು ಮಾಡಿಕೊಂಡಿದ್ದರು.
ಅವರ ಇಬ್ಬರು ಮಕ್ಕಳು ಕರೀಷ್ಮಾ-ಕರೀನಾರ ಶಾಲಾ ಫೀಸ್, ಮನೆಯ ವಿದ್ಯುತ್ ಬಿಲ್, ಪತ್ನಿ ಬಬಿತಾ ಅವರ ಖರ್ಚು ಮತ್ತು ಅವರ ಸ್ವಂತ ಸ್ಕಾಚ್‌ಗಾಗಿ ಹಣವನ್ನು ಹೊಂದಿಸಿಲು ಹಗಲಿರುಳು ಶ್ರಮಿಸಬೇಕಾಗಿತ್ತು. ಆ ಸಮಯದಲ್ಲಿ ಚಲನಚಿತ್ರಗಳು ಮಾತ್ರ ಅವರ ಗಳಿಕೆಯ ಸಾಧನವಾಗಿತ್ತು ಎಂದು ರಣಧೀರ್ ಕಪೂರ್ ಹೇಳಿದ್ದರು.
ಇಂದು ನಾನು ಚಿಕ್ಕವನಾಗಿರಬೇಕಾಗಿತ್ತು ಎಂದು ಬಯಸುತ್ತೇನೆ. ಇಂದಿನ ನಟರು ಎಷ್ಟು ಹಣ ಗಳಿಸುತ್ತಾರೆ. ಇಂದಿನ ನಟ ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ. ಅವರು ಅನುಮೋದನೆಗಳು, ಇವೆಂಟ್ಸ್ ಮತ್ತು ಹಲವು ಇತರ ಮೂಲಗಳಿಂದ ಹಣವನ್ನು ಗಳಿಸುತ್ತಾರೆ. ಆದರೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ನಮ್ಮನ್ನು ಮತ್ತು ನಮ್ಮ ಕುಟುಂಬ ಸದಸ್ಯರನ್ನು ಬೆಂಬಲಿಸಲು ನಾವು ಒಂದು ವರ್ಷದಲ್ಲಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಏಕೆಂದರೆ ಆ ಸಮಯದಲ್ಲಿ ಅದು ಒಂದೇ ದಾರಿ ಇತ್ತು, ಎಂದು ಹೇಳಿದ್ದರು.
ರಣಧೀರ್ ಅವರನ್ನು ಮದುವೆಯಾಗಲು ಬಬಿತಾರಿಗೆ ಸಿನಿಮಾ ಕೆರಿಯರ್ ತೊರೆಯಬೇಕು ಎಂದು ಷರತ್ತನ್ನು ಹಾಕಿದ್ದರು. ಅದರಂತೆ ಪ್ರೀತಿಗಾಗಿ, ಬಬಿತಾ ಚಲನಚಿತ್ರಗಳಿಂದ ದೂರವಾದರು. ಇಬ್ಬರೂ 1971ರಲ್ಲಿ ವಿವಾಹವಾದರು.
ಮದುವೆ ನಂತರ, ರಣಧೀರ್ ಮತ್ತು ಬಬಿತಾ ಪ್ರತ್ಯೇಕ ಫ್ಲಾಟ್‌ನಲ್ಲಿ ವಾಸಿಸಲು ಆರಂಭಿಸಿದರು. ಕರಿಷ್ಮಾ 1974ರಲ್ಲಿ ಮತ್ತು ಕರೀನಾ 1980 ರಲ್ಲಿ ಜನಿಸಿದರು. ಬಬಿತಾ ತಮ್ಮ ಚಲನಚಿತ್ರ ವೃತ್ತಿ ಜೀವನವನ್ನು ತೊರೆದರು. ಆದರೆ ಅವರು ತಮ್ಮ ಹೆಣ್ಣು ಮಕ್ಕಳನ್ನು ನಟಿಯಾಗಿ ಮಾಡಲು ಬಯಸಿದ್ದರು.
ತನ್ನ ಕುಡಿಯುವ ಅಭ್ಯಾಸ ಬಬಿತಾರಿಗೆ ಇಷ್ಟವಾಗುತ್ತಿರಲ್ಲಿಲ್ಲ. ಅವರು ಪತಿ ಕುಡಿಯುವುದನ್ನು ವಿರೋಧಿಸಿದರು. ಈ ಕಾರಣದಿಂದಾಗಿ ಇಬ್ಬರ ನಡುವಿನ ಅಂತರವು ಹೆಚ್ಚುತ್ತಲೇ ಇತ್ತು ಎಂದು ಸಂದರ್ಶನವೊಂದರಲ್ಲಿ, ರಣಧೀರ್ ಬಹಿರಂಗಪಡಿಸಿದ್ದರು.
ನಾನು ತುಂಬಾ ಕುಡಿದು ತಡವಾಗಿ ಮನೆಗೆ ಬರುತ್ತಿದ್ದ ಒಬ್ಬ ಭಯಂಕರ ವ್ಯಕ್ತಿ ಎಂದು ಅವಳು ಭಾವಿಸಿದ್ದಳು. ಅವಳು ಅದನ್ನು ಇಷ್ಟಪಡಲಿಲ್ಲ. ಅವಳು ಈ ರೀತಿ ಬದುಕಲು ಬಯಸಲಿಲ್ಲ. ಅವಳು ಬಯಸಿದ ರೀತಿಯಲ್ಲಿ ಬದುಕಲು ನಾನು ಬಯಸಲಿಲಲ್ಲ ಎಂದು ಹೇಳಿದ್ದರು ರಣಧೀರ್.
ನಾವು ಪ್ರೇಮ ವಿವಾಹವಾಗಿದ್ದೆವು. ಆದರೂ ಅವಳು ನಾನು ಇರುವ ಹಾಗೇ ನನ್ನನ್ನು ಸ್ವೀಕರಿಸಲಿಲ್ಲ, ಎಂದು ಹೇಳಿದ ರಣಧೀರ್ ಕಪೂರ್‌ಗೆ ಅವರ ವಿಚ್ಛೇದನದ ಬಗ್ಗೆ ಕೇಳಿದಾಗ - ಏಕೆ ವಿಚ್ಛೇದನ? ನಾವೇಕೆ ವಿಚ್ಛೇದನ ಪಡೆಯಬೇಕು? ನನಗೂ ಮತ್ತೆ ಮದುವೆಯಾಗಲು ಇಷ್ಟವಿರಲಿಲ್ಲ ಮತ್ತು ಅವಳಿಗೂ ಸಹ ಎಂದು ಹೇಳಿದ್ದರು.