MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 15 ವರ್ಷಗಳ ವೃತ್ತಿಜೀವನದಲ್ಲಿ ರಣಬೀರ್‌ ಕಪೂರ್‌ ನೀಡಿದ ಹಿಟ್‌ ಸಿನಮಾಗಳೆಷ್ಟು?

15 ವರ್ಷಗಳ ವೃತ್ತಿಜೀವನದಲ್ಲಿ ರಣಬೀರ್‌ ಕಪೂರ್‌ ನೀಡಿದ ಹಿಟ್‌ ಸಿನಮಾಗಳೆಷ್ಟು?

ರಣಬೀರ್ ಕಪೂರ್ (Ranbir Kapoor) ಅವರ ಚಿತ್ರ ಶಂಶೇರಾ (Shamshera) ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವು ಸಂಪೂರ್ಣ ಆಕ್ಷನ್ ಮತ್ತು ಥ್ರಿಲ್ಲರ್ ಆಗಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಚಿತ್ರವನ್ನು ಕರಣ್ ಮಲ್ಹೋತ್ರಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಣಬೀರ್ ಜೊತೆ ವಾಣಿ ಕಪೂರ್ (Vaani Kapoor) ಮತ್ತು ಸಂಜಯ್ ದತ್ (Sanjay Dutt) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಂಶೇರಾ ರಣಬೀರ್ ಅವರ ಕೆರಿಯರ್‌ನ 16 ನೇ ಚಿತ್ರ. ಸತತ 4 ವರ್ಷಗಳಿಂದ ಚಿತ್ರರಂಗದಿಂದ ನಾಪತ್ತೆಯಾಗಿದ್ದ ರಣಬೀರ್ ಈ ಚಿತ್ರದಿಂದ ಕಮ್ ಬ್ಯಾಕ್ ಮಾಡುತ್ತಿದ್ದಾರೆ.  ಸುಂದರ ಮತ್ತು ಡ್ಯಾಶಿಂಗ್ ಲುಕ್ ಹೊಂದಿರುವ ರಣಬೀರ್ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 15 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅದರಲ್ಲಿ 7 ಚಿತ್ರಗಳು ಮಾತ್ರ ಹಿಟ್ ಆಗಿವೆ. ರಣಬೀರ್ ಕಪೂರ್ ಅವರ ವೃತ್ತಿಜೀವನ ಮತ್ತು ಚಲನಚಿತ್ರಗಳಿಗೆ ಸಂಬಂಧಿಸಿದ  ಮಾಹಿತಿಯಲ್ಲಿ ಇಲ್ಲಿದೆ

2 Min read
Author : Suvarna News
| Updated : Jul 19 2022, 05:54 PM IST
Share this Photo Gallery
  • FB
  • TW
  • Linkdin
  • Whatsapp
19

ರಣಬೀರ್ ಕಪೂರ್ ಕೊನೆಯದಾಗಿ 2018 ರಲ್ಲಿ ತೆರೆಕಂಡ ಸಂಜು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಜಯ್ ದತ್ ಅವರ ಜೀವನಚರಿತ್ರೆಯಲ್ಲಿ ರಣಬೀರ್ ಸಂಜಯ್ ಪಾತ್ರವನ್ನು ನಿರ್ವಹಿಸಿದ್ದಾರೆ, ಸಿನಿಮಾ ಜನರಿಂದ ಮೆಚ್ಚುಗೆ ಗಳಿಸಿತು.

29

ಸಂಜು ಸಿನಿಮಾಗಿಂತ ಮೊದಲ ಚಿತ್ರ ಏ ದಿಲ್ ಹೈ ಮುಷ್ಕಿಲ್ ಅನ್ನು ಬಿಟ್ಟು, ಅವರು ಸತತ 5 ಫ್ಲಾಪ್‌ಗಳನ್ನು ನೀಡಿದರು. ಅವುಗಳೆಂದರೆ ಬೇಶರಂ, ರಾಯ್, ಬಾಂಬೆ ವೆಲ್ವೆಟ್, ತಮಾಶಾ ಮತ್ತು ಜಗ್ಗಾ ಜಾಸೂಸ್.

39

ಬಾಲಿವುಡ್‌ನ ಪವರ್‌ಫುಲ್‌ ಫ್ಯಾಮಿಲಿ  ಕಪೂರ್ ಕುಟುಂಬಕ್ಕೆ ಸೇರಿದ ರಣಬೀರ್  2007 ರಲ್ಲಿ ಬಂದ ಸಂಜಯ್ ಲೀಲಾ ಬನ್ಸಾಲಿಯವರ ಸಾವರಿಯಾ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಸೋನಂ ಕಪೂರ್ ಜೊತೆಗಿನ ಈ ಚಿತ್ರ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. 40 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ಗಳಿಸಿದ್ದು ಬರೋಬ್ಬರಿ 39 ಕೋಟಿ ಮಾತ್ರ.

49

2008 ರ ಚಲನಚಿತ್ರ ಬಚ್ನಾ ಹೈ ಹಸೀನೋ ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿಯಾಗಿತ್ತು. ಈ ಸಿದ್ಧಾರ್ಥ್ ಆನಂದ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಬಿಪಾಶಾ ಬಾಶು ಮತ್ತು ಮಿನಿಶಾ ಲಂಬಾ ಮುಖ್ಯ ಭೂಮಿಕೆಯಲ್ಲಿದ್ದರು. ಸುಮಾರು 2.5 ಕೋಟಿ ಬಜೆಟ್‌ನಲ್ಲಿ ಚಿತ್ರ 61 ಕೋಟಿ ಗಳಿಸಿದೆ.
 

59

2009 ರಲ್ಲಿ, ರಣಬೀರ್ ಕಪೂರ್ ವೇಕಪ್ ಸಿದ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಮತ್ತು ರಾಕೆಟ್ ಸಿಂಗ್ ಚಿತ್ರದಲ್ಲಿ ನಟಿಸಿದರು. ಈ ಪೈಕಿ ರಾಕೆಟ್ ಸಿಂಗ್‌ ಸಂಪೂರ್ಣ ನೆಲಕಚ್ಚಿತು. ಉಳಿದೆರಡು ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

69

ರಣಬೀರ್ ಕಪೂರ್ 2010 ರಲ್ಲಿ ರಾಜನೀತಿ ಮತ್ತು ಅಂಜನಾ ಅಂಜನಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ರಾಜನೀತಿ  ಉತ್ತಮವಾಗಿ ಗಳಿಸಿದರೆ, ಅಂಜನಾ ಅಂಜನಿ ಫ್ಲಾಪ್ ಎಂದು ಸಾಬೀತಾಯಿತು. 

79

2011ರಲ್ಲಿ ಬಂದ ರಾಕ್‌ಸ್ಟಾರ್ ಚಿತ್ರವನ್ನೂ ಅವರ ಸರಾಸರಿ ಚಿತ್ರಗಳ ಸಾಲಿಗೆ ಸೇರಿದೆ. 2012-13 ರಲ್ಲಿ ಬಿಡುಗಡೆಯಾದ ಬರ್ಫಿ ಮತ್ತು ಯೇ ಜವಾನಿ ಹೈ ದಿವಾನಿ ಚಿತ್ರಗಳು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಇವೆರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಬರ್ಫಿ 112 ಕೋಟಿ ಗಳಿಸಿದರೆ, ಯೇ ಜವಾನಿ ಹೈ ದಿವಾನಿ 188 ಕೋಟಿ ಗಳಿಸಿದೆ.


 

89

ಶಂಶೇರಾ ಹೊರತುಪಡಿಸಿ, ರಣಬೀರ್‌ ಕಪೂರ್ ಅವರು ಪತ್ನಿ ಆಲಿಯಾ ಭಟ್ ಅವರೊಂದಿಗೆ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಲವ್ ರಂಜನ್ ಅವರ ಹೆಸರಿಡದ ಚಿತ್ರದಲ್ಲಿ ಶ್ರದ್ಧಾ ಕಪೂರ್ ಎದುರು ಮತ್ತು ಅನಿಮಲ್ ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಳ್ಳಲಿದ್ದಾರೆ.


 

99

ಯಶ್ ರಾಜ್ ಬ್ಯಾನರ್‌ನಲ್ಲಿ ತಯಾರಾದ ಜಯೇಶ್‌ಭಾಯ್ ಜೋರ್ದಾರ್ ಮತ್ತು ಸಾಮ್ರಾಟ್ ಪೃಥ್ವಿರಾಜ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿವೆ . ಈಗ ಶಂಶೇರಾ ಚಿತ್ರದಿಂದ ಬ್ಯಾನರ್ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. 150 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ರಣಬೀರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ರಣಬೀರ್ ಕಪೂರ್

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved