ಅಲಿಯಾ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಇನ್ನು ಎರಡೂವರೆ ತಿಂಗಳಾಗಿಲ್ಲ. ಅಷ್ಟರಲ್ಲೇ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಈ ನಡುವೆ ಅಲಿಯಾ ಮತ್ತು ರಣಬೀರ್ ಕಪೂರ್ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. 

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ (Alia Bhatt) ತಾಯಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್ ಗರ್ಭಿಣಿ ಆಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅಲಿಯಾ ಭಟ್ ಪತ್ನಿ ರಣಬೀರ್ ಕಪೂರ್ (Ranbir Kapoor) ಜೊತೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿರುವ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಆಗುತ್ತಿದೆ ಎಂದು ಬಹಿರಂಗ ಪಡಿಸಿದ್ದರು. ಅಲಿಯಾ ಭಟ್ ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿದ್ದಂತೆ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಅಲಿಯಾ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿರುವುದು ಅಚ್ಚರಿ ಮೂಡಿಸಿತ್ತು. 

ಇನ್ನು ಅಲಿಯಾ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಇನ್ನು ಎರಡೂವರೆ ತಿಂಗಳಾಗಿಲ್ಲ. ಅಷ್ಟರಲ್ಲೇ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಈ ನಡುವೆ ಅಲಿಯಾ ಮತ್ತು ರಣಬೀರ್ ಕಪೂರ್ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಅಲಿಯಾ ಮತ್ತು ರಣಬೀರ್ ಕಪೂರ್ ನಟನೆಯ ಹೊಸ ಸಿನಿಮಾ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರದ ಸ್ಟಂಟ್ ಎಂದು ಟ್ರೋಲ್ ಮಾಡಲಾಗುತ್ತಿದೆ. 

ಈ ಬಗ್ಗೆ ನಟ ರಣಬೀರ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ರಣಬೀರ್ ಕಪೂರ್ ಸದ್ಯ ತಮ್ಮ ಶಂಶೇರಾ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಂದರ್ಶನವೊಂದರಲ್ಲಿ, ರಣಬೀರ್ ಸಂತಸದ ಸುದ್ದಿಯನ್ನು ಚಲನಚಿತ್ರ ಪ್ರಚಾರದ ಸ್ಟಂಟ್ ಎಂದು ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿದರು. 'ಆಲಿಯಾ ಮತ್ತು ನಾನು, ವಿವಾಹಿತ ದಂಪತಿ, ಜಗತ್ತಿಗೆ ಹೇಳುವುದು ಸರಿ ಎಂದು ತೋರುತ್ತದೆ ಏಕೆಂದರೆ ಇದು ಸರಿಯಾದ ಸಮಯ ಎಂದು ನಾವು ಭಾವಿಸಿದ್ದೇವೆ. ನಾವು ಸಂತೋಷದ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿದ್ದೇವೆ ಮತ್ತು ಅದರಲ್ಲಿ ಬೇರೆ ಯಾವುದೇ ಆಲೋಚನೆ ಇಲ್ಲ' ಎಂದು ರಣಬೀರ್ ಹೇಳಿದರು.

ಹಾಲಿವುಡ್ ಸಿನಿಮಾ ಮುಗಿಸಿ ಕೊಟ್ಟ ಮಾತು ಉಳಿಸಿಕೊಂಡ ಗರ್ಭಿಣಿ ಅಲಿಯಾ

ರಣಬೀರ್ ಕಪೂರ್ ಮತ್ತು ಆಲಿಯಾ ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈನಲ್ಲಿ ಹಸೆಮಣೆ ಏರಿದರು. ಕಪೂರ್ ಕುಟುಂಬದ ಫ್ಲಾಟ್‌ನಲ್ಲಿಯೇ ಅಲಿಯಾ ಮತ್ತು ರಣಬೀರ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಜೋಡಿ ಈ ವರ್ಷ ಏಪ್ರಿಲ್ ನಲ್ಲಿ ಪತಿ-ಪತ್ನಿಯರಾದರು. ಸದ್ಯ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಪತಿ ರಣಬೀರ್‌ ಅವರ ಎಕ್ಸ್‌ ಗರ್ಲ್‌ಫ್ರೆಂಡ್ಸ್‌ ಜೊತೆ ಆಲಿಯಾ ಭಟ್‌ ಸಂಬಂಧ ಹೇಗಿದೆ ಗೊತ್ತಾ?

ಅಲಿಯಾ ಗರ್ಭಿಣಿ ಎಂದು ಗೊತ್ತಾಗುತ್ತಿದಂತೆ ಈಗಾಗಲೇ ಸಹಿ ಮಾಡಿದ ಸಿನಿಮಾಗಳ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ ಅಲಿಯಾ ಗರ್ಭಿಣಿ ಎಂದು ಬಹಿರಂಗ ಪಡಿಸಿದ ಬೆನ್ನಲ್ಲೇ ಶೂಟಿಂಗ್‌ಗೆ ಹಾಜರಾಗಿ ವೃತ್ತಿ ಪರತೆಮೆರೆದಿದ್ದರು. ಅಲಿಯಾ ಸದ್ಯ ಬಾಲಿವುಡ್‌ನ ಒಂದು ಸಿನಿಮಾ ಮತ್ತು ಹಾಲಿವುಡ್ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಸಹಿ ಮಾಡಿದ ಸಿನಿಮಾಗಳನ್ನು ಸಂಪೂರ್ಣ ಮಾಡುತ್ತಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸುವ ಮೂಲಕ ಅಲಿಯಾ ಮಗುವಾಗುವ ಮೊದಲೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.