ಬಾಲಿವುಡ್ ಗೆ ಕಪೂರ್ ಕುಟುಂಬದ (Kapoor Family) ಕೊಡುಗೆ ದೊಡ್ಡದಿದೆ. ಸುಮಾರು ನಾಲ್ಕು ತಲೆಮಾರಿನಿಂದ ಬಾಲಿವುಡ್ ನ ಭಾಗವಾಗಿರುವ ಕಪೂರ್ ಕುಟುಂಬ ನಿರ್ಮಾಣ, ನಿರ್ದೇಶನ, ನಟನೆ ಸೇರಿದಂತೆ ಸಿನಿಮಾರಂಗದ ಎಲ್ಲಾ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದಾರೆ. ಬಣ್ಣದ ಲೋಕದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಕಪೂರ್ ಕುಟುಂಬ ಶಿಕ್ಷಣದ ವಿಚಾರಕ್ಕೆ ಬಂದರೆ ಹೇಳಿಕೊಳ್ಳುವಷ್ಟು ಸಾಧನೆ ಮಾಡಿಲ್ಲ. 

ಬಾಲಿವುಡ್ ಗೆ ಕಪೂರ್ ಕುಟುಂಬದ (Kapoor Family) ಕೊಡುಗೆ ದೊಡ್ಡದಿದೆ. ಸುಮಾರು ನಾಲ್ಕು ತಲೆಮಾರಿನಿಂದ ಬಾಲಿವುಡ್ ನ ಭಾಗವಾಗಿರುವ ಕಪೂರ್ ಕುಟುಂಬ ನಿರ್ಮಾಣ, ನಿರ್ದೇಶನ, ನಟನೆ ಸೇರಿದಂತೆ ಸಿನಿಮಾರಂಗದ ಎಲ್ಲಾ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದಾರೆ. ಬಣ್ಣದ ಲೋಕದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಕಪೂರ್ ಕುಟುಂಬ ಶಿಕ್ಷಣದ ವಿಚಾರಕ್ಕೆ ಬಂದರೆ ಹೇಳಿಕೊಳ್ಳುವಷ್ಟು ಸಾಧನೆ ಮಾಡಿಲ್ಲ. ಈ ಬಗ್ಗೆ ಸ್ವತಃ ರಣಬೀರ್ ಕಪೂರ್ (Ranbir Kapoor) ಬಹಿರಂಗ ಪಡಿಸಿದ್ದಾರೆ.

ಕಪೂರ್ ಕುಟುಂಬದಲ್ಲಿ ಸಾಕಷ್ಟು ಮಂದಿ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅನೇಕರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ರಣಬೀರ್ ಅವರ ಮುತ್ತಜ್ಜ ಪೃಥ್ವಿರಾಜ್ ಕಪೂರ್, ಅಜ್ಜ ರಾಜ್ ಕಪೂರ್, ತಂದೆ ರಿಷಿ ಕಪೂರ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅನೇಕರು ನಟರಾಗಿದ್ದರು. ಆದರೆ ಕಪೂರ್ ಕುಟುಂಬದಲ್ಲಿ 10ನೇ ತರಗತಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗ ರಣಬೀರ್ ಎನ್ನುವ ಅಚ್ಚರಿಕರ ಮಾಹಿತಿಯನ್ನು ಬಹಿರಂಗಪಡಿಸಿದರು. ಜೊತೆಗೆ ತಾನು ಓದಿನಲ್ಲಿ ತುಂಬಾ ಹಿಂದೆ ಎನ್ನುವುದನ್ನು ರಣಬೀರ್ ಕಪೂರ್ ಹೇಳಿದ್ದಾರೆ. 

ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ರಣಬೀರ್ ಸದ್ಯ ಶಂಶೇರಾ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತನ್ನ ಕುಟುಂಬದ 10ನೇ ತರಗತಿಯ ಇತಿಹಾಸವನ್ನು ತೆರೆದಿಟ್ಟರು. ನಿರೂಪಕ ರಣಬೀರ್ ಬಳಿ 10ನೇ ತರಗತಿಯಲ್ಲಿ ಪಡೆದ ಅಂಕದ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಣಬೀರ್ ಶೇ. 53.4 ಬಂದಿತ್ತು ಎಂದು ಹೇಳಿದರು. '10ನೇ ತರಗತಿ ಫಲಿತಾಂಶ ಬಂದಾಗ ನನ್ನ ಕುಟುಂಬಕ್ಕೆ ತುಂಬಾ ಸಂತೋಷವಾಗಿತ್ತು. ಅವರು ನನಗಾಗಿ ದೊಡ್ಡ ಪಾರ್ಟಿ ಮಾಡಿದ್ದರು. ಅವರಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. ನನ್ನ ಕುಟುಂಬದಲ್ಲಿ 10ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗ ನಾನು' ಎಂದು ಹೇಳಿದರು. ಇದಕ್ಕೆ ನಿರೂಪಕ ಕಪೂರ್ ಕುಟುಂಬದ ರಹಸ್ಯ ಎಂದರೆ ಓದಿನಲ್ಲಿ ತುಂಬಾ ದುರ್ಬಲ. ಆದರೆ ನಟನೆಯಲ್ಲಿ ಅದ್ಭುತ ಎಂದು ಹೇಳಿದರು. ಇದಕ್ಕೆ ರಣಬೀರ್ 'ಅದು ನನಗೆ ತಿಳಿದಿಲ್ಲ ಆದರೆ ಧನ್ಯವಾದಗಳು' ಎಂದು ರಣಬೀರ್ ಹೇಳಿದರು. 

ಅಲಿಯಾ ಭಟ್ ಪ್ರೆಗ್ನೆನ್ಸಿ ಟ್ರೋಲ್; ರಣಬೀರ್ ಕಪೂರ್ ರಿಯಾಕ್ಷನ್

ಈ ಹಿಂದೆ 2017 ರಲ್ಲಿ ಪಿಟಿಐನಲ್ಲಿ ನಡೆದ ಸಂಭಾಷಣೆಯಲ್ಲಿ, ರಣಬೀರ್ ತನ್ನ ಕುಟುಂಬದ್ಲಿ ಅತ್ಯಂತ ವಿದ್ಯಾವಂತ ತಾನು ಎಂದು ಹೇಳಿದ್ದರು. 'ನನ್ನ ಕುಟುಂಬದ ಇತಿಹಾಸವು ಚೆನ್ನಾಗಿಲ್ಲ. ನನ್ನ ತಂದೆ 8 ನೇ ತರಗತಿಯಲ್ಲಿ, ನನ್ನ ಚಿಕ್ಕಪ್ಪ 9 ನೇ ತರಗತಿಯಲ್ಲಿ ಮತ್ತು ನನ್ನ ಅಜ್ಜ 6 ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. ನಾನು ನಿಜವಾಗಿಯೂ ನನ್ನ ಕುಟುಂಬದ ಅತ್ಯಂತ ವಿದ್ಯಾವಂತ ಸದಸ್ಯ' ಎಂದಿದ್ದರು. ಓದು ಮುಗಿಸಿದ ಬಳಿಕ ರಣಬೀರ್ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಮೊದಲು 2007 ರಲ್ಲಿ ವಿದೇಶದಲ್ಲಿ ನಟನೆ ಮತ್ತು ಚಲನಚಿತ್ರ ನಿರ್ಮಾಣ ತರಭೇತಿಯನ್ನು ತೆಗೆದುಕೊಂಡಿದ್ದರು. ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಣಬೀರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. 

ರಣಬೀರ್‌ ಕಪೂರ್‌ನ ಏರ್‌ಪೋರ್ಟ್‌ ಪಾರ್ಕಿಂಗ್‌ನಲ್ಲಿ ತಬ್ಬಿಕೊಂಡು ಮುದ್ದಾಡಿದ ಆಲಿಯಾ!

ರಣಬೀರ್ ಸದ್ಯ ಶಂಶೇರಾ ಸಿನಿಮಾದ ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಮತ್ತು ವಾಣಿ ಕಪೂರ್ ಸಹ ನಟಿಸಿದ್ದರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 22ರಂದು ರಿಲೀಸ್ ಆಗುತ್ತಿದೆ. ಹಿಂದಿ ಸೇರಿದಂತೆ ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.