MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಬೇರೆಯವರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಈ ನಟ ಪ್ರೀತಿ ಮತ್ತು ಬ್ರೇಕಪ್‌ಗೆ ಫೇಮಸ್‌!

ಬೇರೆಯವರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಈ ನಟ ಪ್ರೀತಿ ಮತ್ತು ಬ್ರೇಕಪ್‌ಗೆ ಫೇಮಸ್‌!

ಬಾಲಿವುಡ್‌ ನಟ ರಣಬೀರ್ ಕಪೂರ್ (Ranbir Kapoor) ಅವರಿಗೆ 39 ವರ್ಷಗಳ ಸಂಭ್ರಮ. ಸೆಪ್ಟೆಂಬರ್ 28,1982 ರಂದು ಮುಂಬೈನಲ್ಲಿ ಜನಿಸಿದ ರಣಬೀರ್ ಸಿನಿಮಾಗಳ ಜೊತೆ ಅವರ ವೈಯಕ್ತಿಕ ಜೀವನದಿಂದಲೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಹೆಸರು ಅನೇಕ ನಟಿಯರೊಂದಿಗೆ ಕೇಳಿಬಂದಿದೆ, ಪ್ರಸ್ತುತ ಅವರು ಆಲಿಯಾ ಭಟ್ ( Alia Bhatt)ಜೊತೆ ಡೇಟಿಂಗ್ (dating) ಮಾಡುತ್ತಿದ್ದಾರೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ (Married Life) ಕಾಲಿಡಲಿದ್ದಾರೆ ಎಂಬ ವರದಿಗಳಿವೆ. ದೀಪಿಕಾ ಪಡುಕೋಣೆಯೊಂದಿಗಿನ (Deepika Padukone) ನಟನ ಸಂಬಂಧವು ಹೆಚ್ಚು ಚರ್ಚೆಯಲ್ಲಿತ್ತು. ರಣಬೀರ್ ರನ್ನುದೀಪಿಕಾ, ರಣಬೀರ್  ಬೇರೆಯವರೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಾಗ ಆಘಾತಕ್ಕೊಳಗಾಗಿದ್ದರು. ರಣಬೀರ್ ಕಪೂರ್ ಅವರ ಪ್ರೀತಿ (Love), ವಂಚನೆ (Cheating) ಮತ್ತು ಜೀವನಕ್ಕೆ (life) ಸಂಬಂಧಿಸಿದ ಇನ್ನೂ ಕೆಲವು ವಿಷಯಗಳಿಗಾಗಿ ಕೆಳಗೆ ಓದಿ.

2 Min read
Suvarna News | Asianet News
Published : Sep 30 2021, 11:16 AM IST
Share this Photo Gallery
  • FB
  • TW
  • Linkdin
  • Whatsapp
110

ಪ್ರಸಿದ್ಧ ಕಪೂರ್ ಕುಟುಂಬದ ಉತ್ತರಾಧಿಕಾರಿ ರಣಬೀರ್ ಕಪೂರ್ ತನ್ನ 17ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯ ಸಿನಿಮಾ ಆ ಅಬ್‌ ಲೌಟ್‌ ಚಲೇ ಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ 2007 ರಲ್ಲಿ ಸಾವರಿಯಾ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.ಅವರ ಮೊದಲ ಚಿತ್ರ ಸೂಪರ್ ಫ್ಲಾಪ್ ಆಗಿತ್ತು.

210

ರಾಕ್‌ಸ್ಟಾರ್, ಯೆ ಜವಾನಿ ಹೈ ದಿವಾನಿ, ಬರ್ಫಿ (Burfy), ಸಂಜು ಮುಂತಾದ ಸೂಪರ್‌ಹಿಟ್ (SuperHit) ಚಿತ್ರಗಳನ್ನು ನೀಡಿರುವ ರಣಬೀರ್, ತಮ್ಮ ಪ್ರೊಫೆಷನಲ್‌ (Professional)  ಮತ್ತು ಪರ್ಸನಲ್‌ ಲೈಫ್‌ನಿಂದ (Personal Life) ಯಾವಾಗಲೂ ಚರ್ಚೆಯಲ್ಲಿರುತ್ತಾರೆ.  ತಂದೆ ರಿಷಿ ಕಪೂರ್ (Rishi Kapoor) ಜೊತೆ ಮಗ ರಣಬೀರ್‌ ಸಂಬಂಧ ದೀರ್ಘಕಾಲದವರೆಗೆ ಚೆನ್ನಾಗಿರಲಿಲ್ಲ ಎಂದು ಹೇಳಲಾಗಿದೆ.

310

ಅವಂತಿಕಾ ಮಲಿಕ್, ಸೋನಮ್ ಕಪೂರ್ (Sonam Kapoor), ದೀಪಿಕಾ ಪಡುಕೋಣೆ (Deepika Padukkone), ಕತ್ರಿನಾ ಕೈಫ್ (Katrina Kaif), ನರ್ಗಿಸ್ ಫಕ್ರಿ, ಮಹಿರಾ ಖಾನ್ ಮುಂತಾದವರ ಜೊತೆಯ ರಣಬೀರ್ ಕಪೂರ್ ರಿಲೆಷನ್‌ಶಿಪ್‌ (Relatinship) ಸಾಕಷ್ಟು ಸದ್ದು ಮಾಡಿದ್ದವು.

410

ಅಂದಹಾಗೆ, ದೀಪಿಕಾ ಪಡುಕೋಣೆ ಜೊತೆಗಿನ ರಣಬೀರ್ ಕಪೂರ್ ಸಂಬಂಧವು ಹೆಚ್ಚು ಸುದ್ದಿಯಲ್ಲಿತ್ತು. 2007 ರಲ್ಲಿ ಬಚ್ನಾ-ಇ-ಹಸೀನೊ ಚಿತ್ರದ ಸಮಯದಲ್ಲಿ  ಇಬ್ಬರೂ ಹತ್ತಿರವಾಗಿದ್ದರು ಮತ್ತು ಹಲವು ವರ್ಷಗಳ ರಿಲೆಷನ್‌ಶಿಪ್‌ದಲ್ಲಿದ್ದರು ಈ ಕಪಲ್‌.

https://kannada.asianetnews.com/gallery/cine-world/alia-wanted-to-steal-this-thing-from-ranbir-ex-deepika-qzb4d4

510

ವರದಿಗಳ ಪ್ರಕಾರ, ದೀಪಿಕಾ  ರಣಬೀರ್ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.  ಆದಾಗ್ಯೂ, 2010 ರ ಹೊತ್ತಿಗೆ, ಇಬ್ಬರೂ
ಬೇರ್ಪಟ್ಟರು. ಈಬ್ರೇಕಪ್‌ಗೆ  ಕಾರಣವನ್ನು ದೀಪಿಕಾ ಸ್ವತಃ ಫ್ಯಾಷನ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದರು ಮತ್ತು  ನೋವನ್ನು ವ್ಯಕ್ತಪಡಿಸಿದ್ದರು. 

https://kannada.asianetnews.com/gallery/cine-world/when-ranbir-kapoor-was-asked-who-is-more-beautiful-deepika-padukone-or-katrina-kaif-qz99jb

610

'ನಾನು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ. ಮತ್ತು ಎಲ್ಲಾ ಭಾವನೆಗಳನ್ನು ಮರೆಯುವ ಸಮಯ ಇದು, ನಾನು ಅವನಿಂದ ಬೇರೆಯಾಗಲು ನಿರ್ಧರಿಸಿದೆ. ನಾನು ಸಂಬಂಧದಲ್ಲಿದ್ದಾಗ, ಅವನು ನಿಮಗೆ ಮೋಸ ಮಾಡುತ್ತಿದ್ದಾನೆ ಎಂದು ನನಗೆ ಅನೇಕ ಜನ ಹೇಳಿದ್ದರು. ನನಗೆ ಇದು ತಿಳಿದಿತ್ತು, ಆದರೆ ಬೇರೆಯಾಗಬಾರದೆಂದು ಅವನು ನನ್ನನ್ನು ಬೇಡಿಕೊಂಡನು, ಹಾಗಾಗಿ ನಾನು ಅವನಿಗೆ ಎರಡನೇ ಅವಕಾಶವನ್ನು ನೀಡಿದೆ' ಎಂದು ದೀಪಿಕಾ ಹೇಳಿದ್ದರು.

https://kannada.asianetnews.com/gallery/cine-world/ranbir-kapoor-used-to-stare-at-his-teacher-legs-qz7gb8

710

'ಆತ ಮೊದಲ ಬಾರಿಗೆ ನನಗೆ ಮೋಸ ಮಾಡಿದಾಗ, ನಮ್ಮ ಸಂಬಂಧದಲ್ಲಿ  ಏನೋ ಕೊರತೆಯಿದೆ ಅದ್ದರಿಂದ ಹೀಗೆ ಆಗಿದೆ ಎಂದು ನಾನು ಭಾವಿಸಿದೆ. ಆದರೆ ಯಾವಾಗ ಮೋಸ ಮಾಡುವುದು ಅಭ್ಯಾಸವಾಗುತ್ತದೆಯೋ, ಆಗ ನೀವು ಸಂಬಂಧದಲ್ಲಿ ಎಲ್ಲವನ್ನೂ ನೀಡಿದ ನಂತರವೂ ಕಳೆದುಕೊಳ್ಳುತ್ತೀರಿ. ನಾನು ಸಂಬಂಧದಲ್ಲಿರುವುದರ ಮೂಲಕ ಎಲ್ಲವನ್ನೂ ನೀಡಿದ್ದೇನೆ ಆದರೆ ಅದನ್ನು ಮರಳಿ ಪಡೆಯುವ ನಿರೀಕ್ಷೆ ಇರಲಿಲ್ಲ' ಎಂದು ದೀಪಿಕಾ ಇನ್ನಷ್ಟು ಹೇಳಿಕೊಂಡಿದ್ದರು.
 

810

'ಹೌದು ನಾನು ದೀಪಿಕಾಗೆ ಮೋಸ ಮಾಡಿದ್ದೇನೆ. ಏಕೆಂದರೆ ಆಗ ನಾನು ಇಮ್ಯೂಚೇರ್‌ ಆಗಿದೆ. ಆದರೆ ನೀವು ದೊಡ್ಡವರಾದಾಗ ಯಾಕೆ ಪ್ರೀತಿಯಲ್ಲಿರಬೇಕು ಎಂಬುದರ ಮೌಲ್ಯವನ್ನು ಅರ್ಥಮಾಡಿಕೊಂಡಾಗ ಈ ಎಲ್ಲಾ ವಿಷಯಗಳನ್ನು ನೀವು ಅರಿತುಕೊಳ್ಳುತ್ತೀರಿ' ಎಂದು ರಣಬೀರ್ ಹೇಳಿದ್ದರು.

910

ಪ್ರಸ್ತುತ  ರಣಬೀರ್ ಕಪೂರ್ ಆಲಿಯಾ ಭಟ್ ( Alia Bahtt ) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ಲಾನ್‌ ಮಾಡುತ್ತಿದ್ದಾರೆ ಎಂಬ ವರದಿಗಳಿವೆ.  

https://kannada.asianetnews.com/gallery/cine-world/alia-bhatt-and-ranbir-kapoor-spotted-in-jodhpur-fans-say-couple-scouting-for-a-wedding-venue-dpl-r0382h

1010

ಕೆಲಸದ ಮುಂಭಾಗದಲ್ಲಿ, ರಣಬೀರ್ ಕಪೂರ್ ಶೀಘ್ರದಲ್ಲೇ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ, ಅವರು ಶಂಶೇರಾ, ಎನಿಮಲ್‌,ಡೆವಿಲ್‌, ಅಂದಾಜ್ ಅಪ್ನಾ ಅಪ್ನಾ 2 ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved