- Home
- Entertainment
- Cine World
- ರಣಬೀರ್ ಎಕ್ಸ್ ಗರ್ಲ್‌ಫ್ರೆಂಡ್ ದೀಪಿಕಾರಿಂದ ಆಲಿಯಾ ಇದನ್ನು ಕದಿಯಲು ಇಷ್ಟ ಪಡುತ್ತಾರಂತೆ!
ರಣಬೀರ್ ಎಕ್ಸ್ ಗರ್ಲ್‌ಫ್ರೆಂಡ್ ದೀಪಿಕಾರಿಂದ ಆಲಿಯಾ ಇದನ್ನು ಕದಿಯಲು ಇಷ್ಟ ಪಡುತ್ತಾರಂತೆ!
ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಇಬ್ಬರೂ ರಣಬೀರ್ ಕಪೂರ್ ಲವ್ ಲೈಫ್‌ನ ಪ್ರಮುಖ ವ್ಯಕ್ತಿಗಳು. ದೀಪಿಕಾ ರಣಬೀರ್ ಎಕ್ಸ್ ಗರ್ಲ್‌ಫ್ರೆಂಡ್ ಆದರೆ, ಆಲಿಯಾ ನಟನ ಪ್ರೆಸೆಂಟ್ ಲವ್. ಒಮ್ಮೆ ದೀಪಿಕಾ ಪಡುಕೋಣೆ ಅವರಿಂದ ಇದನ್ನು ಕದಿಯುವ ಬಯಕೆಯನ್ನು ಆಲಿಯಾ ಭಟ್ ಒಮ್ಮೆ ವ್ಯಕ್ತಪಡಿಸಿದರು. ಏನದು? ಇಲ್ಲಿದೆ ವಿವರ.

ಬಾಲಿವುಡ್ ನಟ ರಣಬೀರ್ ಕಪೂರ್ ಸಾಲುಸಾಲು ಗರ್ಲ್‌ಫ್ರೆಂಡ್ಸ್ ಹೊಂದಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ರಣಬೀರ್ ತನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಮತ್ತು ನಂತರ ಅವರಿಗೆ ಮೋಸ ಮಾಡಿದರು ಮತ್ತು ಕತ್ರಿನಾ ಕೈಫ್ ಜೊತೆ ಸಂಬಂಧ ಹೊಂದಿದ್ದರು.
ವರ್ಷಗಳ ನಂತರ, ರಣಬೀರ್ ಕತ್ರಿನಾ ಜೊತೆಗಿನ ಸಂಬಂಧದ ನಡುವೆ ಬಿರುಕು ಶುರುವಾಯಿತು ಮತ್ತು ಈ ಜೋಡಿ ಸಂಬಂಧಕ್ಕೆ ಮುಕ್ತಾಯ ಹೇಳಿದರು. ನಂತರ ರಣಬೀರ್ ಕಪೂರ್ ಅವರ ಅಭಿಮಾನಿ ಕಮ್ ಬಾಲಿವುಡ್ ನಟಿ ಆಲಿಯಾ ಭಟ್ ಜೊತೆ ಡೇಟಿಂಗ್ ಆರಂಭಿಸಿದರು.
ಒಮ್ಮೆ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಕಾಫಿ ವಿತ್ ಕರಣ್ ಶೋಗೆ ಅಲಂಕರಿಸಿದರು. ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್‌ನೊಂದಿಗೆ ಈ ಜೋಡಿ ತಮಾಷೆಯ ಸಂಭಾಷಣೆಯಲ್ಲಿ ತೊಡಗಿತು ಮತ್ತು ರಣಬೀರ್ ಕಪೂರ್ ಬಗ್ಗೆಯೂ ಮಾತನಾಡಿದರು.
ದೀಪಿಕಾ ಪಡುಕೋಣೆಯಿಂದ ಏನನ್ನು ಕದಿಯಲು ಬಯಸುತ್ತೀರಿ ಎಂದು ಆಲಿಯಾರನ್ನು ಕೇಳಲಾಯಿತು. ದೀಪಿಕಾ ಏರ್‌ಪೋರ್ಟ್‌ನಿಂದ ಹೊರಗೆ ಬರುವಾಗ ಯಾವಾಗಲೂ ಪರ್ಫೆಕ್ಟ್ ಕಾಣುತ್ತಾರೆ. ಆವಳಂತೆ ಪ್ಯಾಪ್ಡ್ ಫೇಸ್ ಹೊಂದಲು ಆಲಿಯಾ ಬಯಸುತ್ತಾರಂತೆ.
ದೀಪಿಕಾ ಯಾವಾಗಲೂ ನಗುತ್ತಿರುತ್ತಾಳೆ, ಅವಳ ಕೂದಲು ಹಾರುತ್ತಿರುತ್ತಿದೆ. ಆದರ ಸ್ವತಃ ಆಲಿಯಾ ತುಂಬಾ ಸುಂದರವಾಗಿ ಕಾಣುವುದಿಲ್ಲ. ಆದ್ದರಿಂದ ಆಲಿಯಾ ದೀಪಿಕಾರ ಮುಖವನ್ನು ಕದಿಯಲು ಬಯಸುತ್ತಾರೆ ಎಂದು ಅವಳು ವಿವರಿಸಿದರು .
ಪ್ರಸ್ತುತ ಈ ಹಿರೋಯಿನ್‌ಗಳು ಅನೇಕ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಣಬೀರ್ ಕಪೂರ್, ಆರ್‌ಆರ್‌ಆರ್, ಗಂಗೂಬಾಯಿ ಕಾಠಿಯಾವಾಡಿ, ಜೀ ಲೆ ಜರಾ, ಡಾರ್ಲಿಂಗ್ಸ್, ಬ್ರಹ್ಮಾಸ್ತ್ರ ಮತ್ತು ಇನ್ನೂ ಕೆಲವು ಸಿನಿಮಾಗಳಲ್ಲಿ ಆಲಿಯಾ ನಟಿಸಲಿದ್ದಾರೆ. ಮತ್ತೊಂದೆಡೆ, ಶಕುನ್ ಬಾತ್ರಾ ಅವರ ಮುಂದಿನ ಪ್ರಾಜೆಕ್ಟ್ ಜೊತೆಗೆ 83, ಪಠಾಣ್ ಮತ್ತು ಇನ್ನೂ ಕೆಲವು ದೊಡ್ಡ ಫಿಲ್ಮ್‌ಗಳಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.