ಮದುವೆ ಸ್ಥಳ ಫಿಕ್ಸ್ ಮಾಡೋಕೆ ಜೋಧ್ಪುರಕ್ಕೆ ಹಾರಿದ ಅಲಿಯಾ-ರಣಬೀರ್
- ಶೀಘ್ರದಲ್ಲೇ ಮದುವೆಯಾಗ್ತಾರಾ ರಣಬೀರ್ ಕಪೂರ್ - ಆಲಿಯಾ ಭಟ್
- ಜೋಧ್ಪುರಕ್ಕೆ ಮದುವೆ ಸ್ಥಳ ನಿಗದಿ ಮಾಡಲು ಹೋದ ಜೋಡಿ
Alia
ಬಾಲಿವುಡ್ನ ಪ್ರೇಮ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವಾರಾಂತ್ಯದಲ್ಲಿ ಜೋಧಪುರಕ್ಕೆ ಬಂದಿದ್ದಾರೆ. ಜೋಧ್ಪುರ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ದಂಪತಿಗಳ ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಇವು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ
![article_image2](https://static-ai.asianetnews.com/images/01fgjtc0sshgfqyx2dxt1s0tjr/ranbir-kapoor-2-jpg_300x169xt.jpg)
ಹಲವಾರು ವರದಿಗಳು ಮತ್ತು ಅಭಿಮಾನಿಗಳ ಕ್ಲಬ್ ಪೋಸ್ಟ್ಗಳ ಪ್ರಕಾರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ವಿವಾಹಕ್ಕಾಗಿ ಸ್ಥಳ ಪರಿಶೋಧನೆಗೆ ಜೋಧ್ಪುರಕ್ಕೆ ತೆರಳಿದ್ದಾರೆ.
ಜೋಧಪುರಕ್ಕೆ ಅವರ ಪ್ರವಾಸಕ್ಕೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕ್ಯಾಶುಯಲ್ ಧರಿಸಿದ್ದರು. ಅವರು ಕ್ಲಾಸಿಕ್ ಡೆನಿಮ್ ಮತ್ತು ವೈಟ್-ಟೀ ಲುಕ್ ನಲ್ಲಿದ್ದರೆ ರಣಬೀರ್ ಲೌಂಜ್ ಸೆಟ್ ಧರಿಸಿದ್ದರು.
ಆಲಿಯಾ ಮತ್ತು ರಣಬೀರ್ ಬೇಗನೆ ಕಾರಿನತ್ತ ಹೊರಟಿದ್ದಾರೆ. ಜೋಧಪುರ ವಿಮಾನ ನಿಲ್ದಾಣದಿಂದ ದಂಪತಿಗಳು ರಸ್ತೆ ಮೂಲಕ ಜವಾಯ್ ಬಂದ್ಗೆ ಹೊರಟರು ಎಂದು ವರದಿಯಾಗಿದೆ. ಜೋಧಪುರ ವಿಮಾನ ನಿಲ್ದಾಣದಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಫೋಟೋಸ್ ವೈರಲ್ ಆಗಿವೆ
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು 2019 ರಲ್ಲಿ ತಮ್ಮ ಸಂಬಂಧ ದೃಢಪಡಿಸಿದ ನಂತರ ಆಗಾಗ ಮದುವೆಯ ವದಂತಿಗಳಾಗುತ್ತಲೇ ಇತ್ತು. ಅವರು 2018 ರಲ್ಲಿ ಯಾವಾಗಲಾದರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
2019 ರಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಆಲಿಯಾ ಭಟ್ ವೇದಿಕೆಯಲ್ಲಿ ರಣಬೀರ್ ಮೇಲಿನ ಪ್ರೀತಿಯನ್ನು ಹೇಳಿಕೊಂಡರು. ರಣಬೀರ್ ಅವರ ತಾಯಿ ನೀತು ಕಪೂರ್ ಅವರ Instagram ಪೋಸ್ಟ್, ಆಕೆಯ ಅನುಮೋದನೆಯನ್ನು ದೃಢಪಡಿಸಿತ್ತು
ಕಳೆದ ಕೆಲವು ತಿಂಗಳಿಂದ ಆಲಿಯಾ ಮತ್ತು ರಣಬೀರ್ ತಮ್ಮ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ಬಿಡುಗಡೆಯ ನಂತರ ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತು . ಕಳೆದ ವರ್ಷ ಡಿಸೆಂಬರ್ ನಲ್ಲಿ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿ, ರಣಬೀರ್ ತನ್ನ ಮದುವೆಯ ಯೋಜನೆಗಳ ಬಗ್ಗೆ ಹೇಳಿದ್ದರು. ಕೊರೊನಾ ಬರದಿದ್ದರೆ ಈ ಜೋಡಿ ಈಗಾಗಲೇ ಮದುವೆಯಾಗಿರುತ್ತಿದ್ದರು ಎಂದೂ ಹೇಳಲಾಗುತ್ತಿದೆ.