ಟೀಚರ್ ಮೇಲೆ ರಣಬೀರ್ ಕ್ರಶ್: ಅವರ ಕಾಲನ್ನೇ ನೋಡುತ್ತಿದ್ದರಂತೆ ನಟ!
ಬಾಲಿವುಡ್ನ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ ಕಾರ್ಯಕ್ರಮವೊಂದರಲ್ಲಿ ತನ್ನ ಬಾಲ್ಯದ ಕ್ರಶ್ ಕುರಿತು ಮಾತನಾಡಿದ್ದಾರೆ. ನಟ ತಾನು ಶಾಲೆಯಲ್ಲಿ ತನ್ನ ಟೀಚರ್ ಕಾಲುಗಳನ್ನು ದಿಟ್ಟಿಸಿ ನೋಡುತ್ತಿದ್ದರು ಎಂದು ಹೇಳಿದ್ದರು. ರಣಬೀರ್ ಕಪೂರ್ ಅವರ ಈ ಸಂಭಾಷಣೆ ಸಕ್ಕತ್ ವೈರಲ್ ಆಗಿದೆ. ಇಲ್ಲಿದೆ ಪೂರ್ತಿ ವಿವರ.
ಬಾಲಿವುಡ್ನ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ ಅವರ ಮುಂದಿನ ಬಾಲಿವುಡ್ ಬಿಗ್ ರಿಲೀಸ್ಗಳಾದ ಶಂಶೇರಾ ಮತ್ತು ಬರ್ಮಾಸ್ತ್ರ ಸಜ್ಜಾಗಿದ್ದಾರೆ. ರಣಬೀರ್ ಕಪೂರ್ ಅವರು ಇವೆಂಟ್ವೊಂದರಲ್ಲಿ ತಮ್ಮ ಬಾಲ್ಯದ ಕ್ರಶ್ ಬಗ್ಗೆ ಮಾತನಾಡಿದ್ದಾರೆ
ರಣಬೀರ್ ಕಪೂರ್ ಬಹಳ ಕಾಲದಿಂದ ನಟಿ ಆಲಿಯಾ ಭಟ್ ಜೊತೆ ಸಂಬಂಧದಲ್ಲಿದ್ದಾರೆ. ಈ ವರ್ಷಾಂತ್ಯದಲ್ಲಿ ರಣಬೀರ್ ಆಲಿಯಾ ಭಟ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹಲವು ವರದಿಗಳು ಬಂದಿವೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಬಹಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ, ರಣಬೀರ್ ತನ್ನ ಬಾಲ್ಯದ ಬಗ್ಗೆ ಮತ್ತು ಅವನ ಶಾಲೆಯ ಕ್ರಶ್ ಬಗ್ಗೆ ಮಾತನಾಡಿದರು. ಅವರು ಶಾಲೆಯಲ್ಲಿ ತಮ್ಮ ಟೀಚರ್ ಕಾಲುಗಳನ್ನು ನೋಡುತ್ತಿದ್ದರು ಎಂದು ಅವರು ಬಹಿರಂಗಪಡಿಸಿದರು.
ಅವರು 2 ನೇ ತರಗತಿಯಲ್ಲಿದ್ದಾಗ, ತನ್ನ ಇಂಗ್ಲಿಷ್ ಶಿಕ್ಷಕಿ ಶ್ರೀಮತಿ ಜಾನ್ ಮೇಲೆ ಕ್ರಶ್ ಇತ್ತು ಮತ್ತು ನಟ ಅವರ ಕಾಲುಗಳನ್ನು ದಿಟ್ಟಿಸಿದರು. ಶಾಲೆಯಲ್ಲಿ ಆ ಸಮಯದಲ್ಲಿ, ಎಲ್ಲಾ ಶಿಕ್ಷಕಿಯರು ಸೀರೆಯುಟ್ಟು ಬರುತ್ತಿದ್ದರು. ಆದರೆ ಶ್ರೀಮತಿ ಜಾನ್ ಸ್ಕರ್ಟ್ ಧರಿಸುತ್ತಿದ್ದರು ಎಂದು ರಣಬೀರ್ ರಿವೀಲ್ ಮಾಡಿದ್ದರು
ನಾನು 2 ನೇ ತರಗತಿಯಲ್ಲಿದ್ದೆ, ನನ್ನ ಇಂಗ್ಲಿಷ್ ಶಿಕ್ಷಕರು ಸ್ಕರ್ಟ್ ಧರಿಸುತ್ತಿದ್ದರು. ನಾನು ಅವರ ಕಾಲುಗಳನ್ನು ನೋಡಲು ಮೇಜಿನ ಕೆಳಗೆ ಹೋಗುತ್ತಿದ್ದೆ. ಅಂದಿನಿಂದ ನಾನು ಅವರನ್ನು ಪ್ರೀತಿಸುತ್ತಿದ್ದೆ. ಅವರ ಹೆಸರು ಶ್ರೀಮತಿ ಜಾನ್, ನಾನು ಇನ್ನೂ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿರುವ ರಣಬೀರ್ ವಿಡಿಯೋ ವೈರಲ್ ಆಗಿದೆ.
ರಣಬೀರ್ ಅವರ ಈ ವರ್ತನೆ ಶಿಕ್ಷಕಿಗೆ ಮುಜುಗರಕ್ಕೀಡು ಮಾಡಿತು. ನಟನಿಗೆ ಶಿಕ್ಷೆ ಕೊಡಲಿ ಅವರ ತಾಯಿಯನ್ನು ಶಾಲೆಗೆ ಕರೆಸಿದ್ದರು. ರಣಬೀರ್ ನಡುವಳಿಕೆ ತಿದ್ದಲು ಪ್ರಯತ್ನಿಸಿದರೂ, ಅವರು ಏನನ್ನೂ ಕಲಿತಂತೆ ಕಾಣಲಿಲ್ಲ ಎಂದು ಹೇಳಿದರು.
ಅಂತಿಮವಾಗಿ, ಟೀಚರ್ ರಣಬೀರ್ ಕಡೆ ಮನ ಕೊಡುವುದನ್ನು ಬಿಟ್ಟರು. ರಣಬೀರ್ ಶಾಲಾ ಸಮಯದಲ್ಲಿ ತುಂಬಾ ಹಠಮಾರಿ ಮತ್ತು ತುಂಟರಾಗಿದ್ದರು ಹೇಳಲಾಗುತ್ತಿತ್ತು ಮತ್ತು ಈಗಲೂ ಆತ ತನ್ನ ಸಹನಟರು ಮತ್ತು ಸ್ನೇಹಿತರ ಮೇಲೆ ಪ್ರಾಂಕ್ ಮಾಡುವುದನ್ನು ಕಾಣಬಹುದು.