ನಟಿ ಮುಂದೆಯೇ ಆಕೆಯ ಗಂಡನ ಬಳಿ ಸ್ಪರ್ಮ್ ಕೇಳಿದ ರಾಖಿ ಸಾವಂತ್
ಬಿಗ್‌ಬಾಸ್ ಸೀಸನ್ 14ರಲ್ಲಿ ರಾಖಿ ಸಾವಂತ್, ಅಭಿನವ್ ಶುಕ್ಲಾ ಅವರ ಬಳಿ ವೀರ್ಯಾಣು ಕೇಳಿದ್ದರು. ಈ ಮನವಿ ಕೇಳಿ ಅಭಿನವ್ ಶಾಕ್ ಆಗಿದ್ದರು. ರಾಖಿ ಸಾವಂತ್ ಹಲವು ಸಂದರ್ಶನಗಳಲ್ಲಿ ಎಗ್ ಫ್ರೀಜ್ ಮಾಡಿರೋದಾಗಿ ತಿಳಿಸಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಡ್ರಾಮಾ ಕ್ವೀನ್ ಅಂತಾನೇ ಫೇಮಸ್ ಆಗಿರುವ ನಟಿ ರಾಖಿ ಸಾವಂತ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬಂದಿದೆ. ಖ್ಯಾತ ಕಿರುತೆರೆ ನಟಿ ಮುಂದೆಯೇ ಆಕೆಯ ಗಂಡನ ಬಳಿ ವೀರ್ಯಾಣು ಕೇಳಿದ್ದರು. ರಾಖಿ ಸಾವಂತ್ ಮನವಿ ಕೇಳಿ ನಟಿ ಮತ್ತು ಆಕೆಯ ಗಂಡ ಶಾಕ್ ಆಗಿದ್ದರು.
ಹೌದು, ಕಿರುತೆರೆಯ ಜನಪ್ರಿಯ ರಿಯಾಲಟಿ ಶೋ ಬಿಗ್‌ಬಾಸ್ ಸೀಸನ್ 14ರಲ್ಲಿ ರಾಖಿ ಸಾವಂತ್ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದರು. ಈ ಸೀಸನ್‌ನಲ್ಲಿ ಕಿರುತೆರೆ ನಟಿಯೊಬ್ಬರು ಪತಿಯೊಂದಿಗೆ ಬಿಗ್‌ಬಾಸ್‌ಗೆ ಬಂದಿದ್ದರು. ಬಿಗ್‌ಬಾಸ್‌ಗೂ ಬರುವ ಮುನ್ನ ಜೋಡಿಯಲ್ಲಿ ಮನಸ್ತಾಪ ಉಂಟಾಗಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಈ ಹಿನ್ನೆಲೆ ಇಬ್ಬರನ್ನೂ ಬಿಗ್‌ಬಾಸ್ ಶೋಗೆ ಕರೆಸಲಾಗಿತ್ತು.
ಕಿರುತೆರೆ ನಟಿ ರುಬಿನಾ ದಿಲಾಯಕ್ ಮತ್ತು ನಟ ಅಭಿನವ್ ಶುಕ್ಲಾ ದಂಪತಿಯಾಗಿದ್ದು, ಬಿಗ್‌ಬಾಸ್ ಸೀಸನ್ 14ರಲ್ಲಿ ಕಾಣಿಸಿಕೊಂಡಿದ್ದರು. ರುಬಿನಾ ದಿಲಾಯಾಕ್ ಅವರೇ ಶೋನ ವಿನ್ನರ್ ಅಗಿದ್ದರು. ಇದೇ ಸೀಸನ್‌ನಲ್ಲಿಯೇ ರಾಖಿ ಸಾವಂತ್ ಸಹ ಸ್ಪರ್ಧಿಯಾಗಿದ್ದರು.
ಅಭಿನವ್ ಶುಕ್ಲಾ ಮೇಲೆ ತಾನು ಆಕರ್ಷಿತಳಾಗಿದ್ದೇನೆ ಎಂದು ರಾಖಿ ಸಾವಂತ್ ಹಲವು ಬಾರಿ ಹೇಳಿಕೊಂಡಿದ್ದರು. ನನಗೆ ಅಭಿನವ್ ಶುಕ್ಲಾ ಅಂತಹ ಮಕ್ಕಳು ಬೇಕೆಂದು ಹೇಳಿಕೊಂಡಿದ್ದ ರಾಖಿ ಸಾವಂತ್, ಶೋನಲ್ಲಿ ವೀರ್ಯ ದಾನ ಮಾಡುವಂತೆ ಕೇಳಿಕೊಂಡಿದ್ದರು. ಹಲವು ಸಂದರ್ಶನಗಲ್ಲಿ ಎಗ್ ಫ್ರೀಜ್ ಮಾಡಿರೋದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Biggboss ವಿನ್ನರ್‌ಗೆ ಮಂಗಳಮುಖಿ ಆಶಿರ್ವಾದ: ಸೀರೆ ಗಿಫ್ಟ್ ಕೊಟ್ಟ ರುಬೀನಾ
ನಾನಾ ಕಾರಣಗಳಿಂದ ದೂರವಾಗಲು ನಿರ್ಧರಿಸಿದ್ದ ರುಬಿನಾ ಮತ್ತು ಅಭಿನವ್ ಶುಕ್ಲಾ ಅವರನ್ನು ಬಿಗ್‌ಬಾಸ್ ಒಂದು ಮಾಡಿತ್ತು. ಶೋನಿಂದ ಹೊರಬಂದ ಬಳಿಕ ಜೊತೆಯಾಗಿರಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ರುಬಿನಾ-ಅಭಿನವ್ ಶುಕ್ಲಾ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದಾರೆ.
ಇದನ್ನೂ ಓದಿ: ಕಿರುತೆರೆ ನಟಿ Rubina Dilaik ಬೋಲ್ಡ್ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ!