ಕಿರುತೆರೆ ನಟಿ Rubina Dilaik ಬೋಲ್ಡ್ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ!
ಕಿರು ತೆರೆಯ ಬೋಲ್ಡ್ ನಟಿ ಎಂದು ಜನಪ್ರಿಯವಾಗಿರುವ ರುಬಿನಾ ದಿಲಾಯಕ್ (Rubina Dilaik) ಯಾವಾಗಲೂ ತನ್ನ ಬೋಲ್ಡ್ ಮತ್ತು ಸೆಕ್ಸಿ ಪೋಟೋಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರ Instagram ಪೇಜ್ ಬೋಲ್ಡ್, ಮಾದಕ ಮತ್ತು ಮನಮೋಹಕ ಫೋಟೋಗಳಿಂದ ತುಂಬಿದೆ. ಅದೇ ಸಮಯದಲ್ಲಿ, ರುಬಿನಾ ಮತ್ತೊಮ್ಮೆ ಗಮನಕ್ಕೆ ಬಂದಿದ್ದಾರೆ. ಇತ್ತೀಚೆಗಷ್ಟೇ ಆಕೆ ಇಂಥದ್ದೊಂದು ಫೋಟೋಶೂಟ್ (Photoshoot) ಮಾಡಿದ್ದು, ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಕಿರು ತೆರೆಯ ನಟಿ ರುಬಿನಾ ದಿಲಾಯಕ್ ಅವರು ಈ ಹಿಂದೆ ಅನೇಕ ಮನಮೋಹಕ ಫೋಟೋಶೂಟ್‌ಗಳನ್ನು ಮಾಡಿದ್ದಾರೆ, ಆದರೆ ಈ ಬಾರಿಯ ಫೋಟೋಶೂಟ್ ವಿಭಿನ್ನವಾಗಿದ್ದು ಸಖತ್ ವೈರಲ್ ಆಗಿವೆ.
ರುಬಿನಾ ದಿಲಾಯಕ್ ಅವರು ತಮ್ಮ ಇತ್ತೀಚಿನ ಚಿತ್ರೀಕರಣದ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ರುಬಿನಾ ದೊಡ್ಡ ಗುಲಾಬಿ ಹೂವಿನ ಡ್ರೆಸ್ ತೊಟ್ಟಿರುವುದನ್ನು ಫೋಟೋಗಳಲ್ಲಿ ಕಾಣಬಹುದು.
ಡಾರ್ಕ್ ಮತ್ತು ಬೇಬಿ ಪಿಂಕ್ ಕಾಂಬಿನೇಷನ್ ಇರುವ ಈ ಡ್ರೆಸ್ ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಫೋಟೋಶೂಟ್‌ನ ಪ್ರತಿಯೊಂದು ಭಂಗಿಯಲ್ಲೂ ರುಬಿನಾ ದಿಲಾಯಕ್ ಕಿಲ್ಲರ್ ಲುಕ್ ತೋರಿಸಿದ್ದಾರೆ.
ರುಬಿನಾ ಅವರ ಈ ಉಡುಪನ್ನು ಬಾಲಿವುಡ್ ಫ್ಯಾಷನ್ ಡಿಸೈನರ್ (Fashion Designer) ಸುಮನ್ ಗುಹಾ ವಿನ್ಯಾಸಗೊಳಿಸಿದ್ದಾರೆ ಮತ್ತು ಆಕೆಯನ್ನು ಆಶ್ನಾ ಮಖಿಜಾನಿ ಸ್ಟೈಲ್ ಮಾಡಿದ್ದಾರೆ. ಅದೇ ಸಮಯದಲ್ಲಿ, ಆಕೆಯ ಮೇಕ್ಅಪ್ ಕೂಡ ಉಡುಗೆಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.
ರುಬಿನಾ ದಿಲಾಯಕ್‌ನ ಫೋಟೋಗಳಿಗೆ ಫ್ಯಾನ್ಸ್ ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ರಾಣಿ ಎಂದು ಒಬ್ಬರು ಬರೆದರು. ಸಿಜ್ಲಿಂಗ್ ಎಂದು ಇನ್ನೊಬ್ಬರು ಹೇಳಿದ್ದಾರೆ. ತುಂಬಾ ಗಾರ್ಜಿಯಸ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ದಯವಿಟ್ಟು ನಿಮ್ಮ ಕೆಲಸಗಳೊಂದಿಗೆ ತಾಪಮಾನವನ್ನು ಇನ್ನಷ್ಟು ಹೆಚ್ಚಿಸಬೇಡಿ ರೂಬಿ ಎಂದು ರುಬಿನಾ ದಿಲೈಕ್ ಅವರನ್ನು ಒಬ್ಬ ಫ್ಯಾನ್ ವಿನಂತಿಕೊಡಿದ್ದಾರೆ. ಗುಲಾಬಿಯ ಅವಶ್ಯಕತೆ ಏನು, ನೀವೇ ಗುಲಾಬಿ ಎಂದು ಇನ್ನೊಬ್ಬರು ಬರೆದಿದ್ದಾರೆ.
ರುಬಿನಾ ದಿಲಾಯಕ್ ಒಬ್ಬ ಅದ್ಭುತ ಟಿವಿ ನಟಿ (TV Actress). ಅವರು ಅನೇಕ ಶೋಗಳಲ್ಲಿ ಕೆಲಸ ಮಾಡಿದರೂ, ಛೋಟೊ ಬಹು ಸೀರಿಯಲ್ ಮೂಲಕ ಅವರು ಮನ್ನಣೆ ಪಡೆದರು. ಬಿಗ್ ಬಾಸ್ 14 ರ ವಿನ್ನರ್ ಕೂಡ ಆಗಿದ್ದಾರೆ.