ಚಿತ್ರ ಬಿಡಿಸಿ ಗಂಡನ ಹಿಂಭಾಗವೇ ನನಗಿಷ್ಟ ಎಂದು ಬಿಗ್‌ಬಾಸ್ ಸ್ಪರ್ಧಿ, ಕಿರುತೆರೆ ನಟಿ
ಜನಪ್ರಿಯ ಕಿರುತೆರೆ ನಟಿ ತಮ್ಮ ಗಂಡನ ಹಿಂಭಾಗ ಇಷ್ಟ ಎಂಬ ಬೋಲ್ಡ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಟಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಟೀಕಿಸಿದ್ದಾರೆ.

ಸೀರಿಯಲ್ ನಟಿಯ ಬೋಲ್ಡ್ ಹೇಳಿಕೆ
ನನಗೆ ಗಂಡನ ಹಿಂಭಾಗವೇ ಇಷ್ಟವೆಂದು ಬಿಗ್‌ಬಾಸ್ ಸ್ಪರ್ಧಿ ಮತ್ತು ಕಿರುತೆರೆ ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವೇಳೆ ನಟಿ ಪಕ್ಕವೇ ಆಕೆ ಪತಿ ಕುಳಿತಿದ್ದರು. ಪತ್ನಿಯ ಮಾತುಗಳನ್ನು ಕೇಳಿದ ಗಂಡ ಕ್ಯಾಮೆರಾಗಳಿಗೆ ಸ್ಮೈಲ್ ನೀಡಿದರು. ಸದ್ಯ ನಟಿಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ರೀತಿ ಹೇಳಲು ಧೈರ್ಯ ಬೇಕೆಂದು ನೆಟ್ಟಿಗರು ಕಮೆಂಟ್ ಮಾಡಿದ್ರೆ, ಇದೆಂಥಾ ಹೇಳಿಕೆ ಎಂದು ಕೆಲವರು ಕಿಡಿಕಾರಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಭಾಗಿ
ಬಿಗ್‌ಬಾಸ್ ಸೀಸನ್ 14ರಲ್ಲಿ ಕಿರುತೆರೆ ನಟಿ ಭಾಗಿಯಾಗಿದ್ದರು. ಈ ಶೋನ ವಿನ್ನರ್ ಸಹ ಆಗಿದ್ದರು. ಇದೇ ಸಮಯದಲ್ಲಿ ನಟಿಯಮ ಪತಿ ಕೂಡ ಬಿಗ್‌ಬಾಸ್ ಶೋನ ಸ್ಪರ್ಧಿಯಾಗಿದ್ದರು. ಗಂಡನನ್ನು ಹಿಂದಿಕ್ಕಿ ಬಿಗ್‌ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಖಾಸಗಿ ವಾಹಿನಿಯ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸದ್ಯ ನಟಿಯ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಗಂಡನ Ass ನನಗಿಷ್ಟ
ನಟಿ ರುಬಿನಾ ದಲಾಯಕ್ ತಮಗೆ ಗಂಡ ಅಭಿನವ್ ಶುಕ್ಲಾ ಹಿಂಭಾಗ ಇಷ್ಟ. ನಾನು ಬಾಟಮ್ ಲವರ್ ಎಂದು ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪತಿ, ಪತ್ನಿ ಔರ್ ಪಂಗಾ ಶೋನಲ್ಲಿ ರುಬಿನಾ ಮತ್ತು ಅಭಿನವ್ ಜೊತೆಯಾಗಿ ಭಾಗಿಯಾಗಿದ್ದಾರೆ. ಈ ಶೋ ಪ್ರಸಾರಕ್ಕೂ ಮುನ್ನ ವಾಹಿನಿ ದಂಪತಿಯ ಸಂದರ್ಶನ ನಡೆಸಿತ್ತು. ಈ ವೇಳೆ ಪ್ಲೇಟ್ ಮೇಲೆ ಹಾರ್ಟ್ ಚಿತ್ರ ಬಿಡಿಸಿ, ಗಂಡನ Ass ನನಗಿಷ್ಟ ಬೋಲ್ಡ್ ಹೇಳಿಕೆಯನ್ನು ನಟಿ ರುಬಿನಾ ದಲಾಯಕ್ ನೀಡಿದ್ದಾರೆ.
ಬೇರೆಯಾಗಿದ್ದ ಜೋಡಿಯನ್ನು ಒಂದು ಮಾಡಿತ್ತು ಬಿಗ್‌ಬಾಸ್
ರುಬಿನಾ ಮತ್ತು ಅಭಿನವ್ 21ನೇ ಜೂನ್ 2018ರಂದು ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ದೂರವಾಗುತ್ತಿರೋದಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಈ ವೇಳೆ ಬಿಗ್‌ಬಾಸ್ ಶೋಗೆ ಏಕಕಾಲದಲ್ಲಿ ಸ್ಪರ್ಧಿಗಳಾಗಿ ಬಂದಿದ್ದರು. ಶೋ ಮುಗಿದ ಬಳಿಕ ಮತ್ತೆ ತಾವು ಒಂದಾಗಿ ಜೀವನ ನಡೆಸೋದಾಗಿ ಹೇಳಿದ್ದರು. ಸದ್ಯ ಜೋಡಿ ಅವಳಿ ಮಕ್ಕಳ ಪೋಷಕರಾಗಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿ
ಹಿಂದಿ ಕಿರುತೆರೆಯ ಜನಪ್ರಿಯ ನಟಿಯಾಗಿರುವ ರುಬಿನಾ ದಲಾಯಕ್ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಚೋಟಿ ಬಹು ಸೀರಿಯಲ್ ರುಬಿನಾ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಸೀರಿಯಲ್ ಜೊತೆ ಅರ್ಧ್ ಸಿನಿಮಾದಲ್ಲಿಯೂ ರುಬಿನಾ ನಟಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿ ಇವರಾಗಿದ್ದಾರೆ.
ಪತಿ, ಪತ್ನಿ ಔರ್ ಪಂಗಾ ಶೋ
ಚೋಟಿ ಬಹು , ಪುನರ್ ವಿವಾಹ್ - ಏಕ್ ನಯಿ ಉಮೀದ್ , ಜೀನಿ ಔರ್ ಜುಜು ಮತ್ತು ಶಕ್ತಿ - ಆಸ್ತಿತ್ವಾ ಕೆ ಎಹ್ಸಾಸ್ ಕಿ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಹಾಸ್ಯ ಕಲಾವಿದೆ ಭಾರತಿ ಸಿಂಗ್ ನಡೆಸಿಕೊಡುತ್ತಿದ್ದ 'ಲಾಫ್ಟರ್ ಶೆಫ್' ಶೋನಲ್ಲಿಯೂ ರುಬಿನಾ ದಲಾಯಕ್ ಸ್ಪರ್ಧಿಯಾಗಿದ್ದರು. ಈ ಶೋ ಮುಕ್ತಾಯಗೊಳ್ಳುತ್ತಿದ್ದಂತೆ ಪತಿ, ಪತ್ನಿ ಔರ್ ಪಂಗಾ ಶೋಗೆ ಗಂಡ ಅಭಿನವ್ ಶುಕ್ಲಾ ಜೊತೆ ಎಂಟ್ರಿ ಕೊಟ್ಟಿದ್ದಾರೆ.