ಈ Bollywood ಸ್ಟಾರ್ಸ್ ನಡುವೆ ಇನ್ನೆಂದಿಗೂ ಫ್ರೆಂಡ್‌ಶಿಪ್ ಸಾಧ್ಯವಿಲ್ಲ
ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ನಡುವೆ ಬಲವಾದ ಸ್ನೇಹ ಕಂಡುಬಂದರೆ, ಇನ್ನೂ ಕೆಲವರು ನಡುವೆ ವೈಮನಸ್ಸಿದೆ ಎಂದು ಹೇಳಲಾಗುತ್ತದೆ. ಕೆಲವು ತಾರೆಯರ ಸಂಬಂಧಗಳು ತುಂಬಾ ಹಳಸಿದ್ದು, ಅವರು ಪರಸ್ಪರ ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ತುಂಬಾ ಕಡಿಮೆ. ಇನ್ನೂ ಕೆಲವರು ಒಬ್ಬರ ಮುಖ ಒಬ್ಬರು ನೋಡು ಸಹ ಬಯಸುವುದಿಲ್ಲ. ಈ ಪಟ್ಟಿಯಲ್ಲಿ ಯಾರಾರು ಇದ್ದಾರೆ ನೋಡಿ.
ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಕೂಡ ಎಂದಿಗೂ ಸ್ನೇಹಿತರಾಗಲು ಸಾಧ್ಯವಿಲ್ಲ. ಐಶ್ವರ್ಯಾ ರೈ ವಿಚಾರದಲ್ಲಿ ಇಬ್ಬರ ನಡುವೆ ಅಂತರವಿತ್ತು. ಹಲವು ವರ್ಷಗಳ ಹಿಂದೆ ವಿವೇಕ್ ಒಬೆರಾಯ್ ಪತ್ರಿಕಾಗೋಷ್ಠಿ ಕರೆದು ಐಶ್ವರ್ಯಾ ರೈ ಬಗ್ಗೆ ಸಲ್ಮಾನ್ ಖಾನ್ ಬೆದರಿಕೆ ಹಾಕಿದ್ದರು ಎಂದು ಹೇಳಿಕೊಂಡಿದ್ದರು. ಆ ಸಮಯದ್ಲಲಿ ಸಲ್ಮಾನ್ ಮತ್ತು ಐಶ್ವರ್ಯ ಬ್ರೇಕಪ್ ಆಗಿತ್ತು.ಮತ್ತು ನಟಿ ವಿವೇಕ್ ಜೊತೆ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ.
ಪ್ರಿಯಾಂಕಾ ಮತ್ತು ಸಲ್ಮಾನ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.ಆದರೆ ಸಲ್ಮಾನ್ ಅಭಿನಯದ 'ಭಾರತ್' ಸಿನಿಮಾದಲ್ಲಿ ನಟಿಸಲು ನಟಿ ನಿರಾಕರಿಸಿದ್ದಾರೆ. ಇದು ಸಲ್ಮಾನ್ ಖಾನ್‌ಗೆ ಇಷ್ಟವಾಗಲಿಲ್ಲ. ಇಬ್ಬರ ನಡುವೆ ಸ್ಪಲ್ಪ ಮಾತಿನ ಜಟಾಪಟಿ ಆಗಿದೆ ಎಂದು ವರದಿಯಾಗಿದೆ.
ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ಸಂಬಂಧದ ಬಗ್ಗೆ ಯಾರಿಗೆ ತಿಳಿದಿಲ್ಲ. 2016 ರಲ್ಲಿ, ಕಂಗನಾ ಹೃತಿಕ್ ಮತ್ತು ತನಗೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದರು. ಅವರು ಕ್ರಿಶ್ 3 ರ ಭಾಗವಾಗಿದ್ದರು. ಹೃತಿಕ್ ಅವರ ಹಕ್ಕುಗಳನ್ನು ನಿರಾಕರಿಸಿದರು ಮತ್ತು ಅವರು ಪರಸ್ಪರರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು.
ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ನಡುವೆ ಎಂದಿಗೂ ಸ್ನೇಹ ಸಾಧ್ಯವಿಲ್ಲ. ಏಕೆಂದರೆ ಒಮ್ಮೆ ಇಬ್ಬರ ನಡುವೆ ಚಿತ್ರದ ಪರದೆಯ ಬಗ್ಗೆ ವಿವಾದವಿತ್ತು. 'ಸನ್ ಆಫ್ ಸರ್ದಾರ್' ಮತ್ತು 'ಜಬ್ ತಕ್ ಹೈ ಜಾನ್' ಒಂದೇ ಸಮಯದಲ್ಲಿಬಿಡುಗಡೆಯಾಗಬೇಕಿತ್ತು. ಸ್ಕ್ರೀನ್‌ಗಳ ಸಂಖ್ಯೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಈ ಅಂತರ ಇಂದಿಗೂ ಉಳಿದಿದೆ.ಶಾರುಖ್ ಅವರ ಉತ್ತಮ ಸ್ನೇಹಿತ ಎಂದು ಪರಿಗಣಿಸಲ್ಪಟ್ಟಿರುವ ಕಾಜೋಲ್ ಅಜಯ್-ಶಾರುಖ್ ಸ್ನೇಹಿತರಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸ್ವಜನಪಕ್ಷಪಾತದ ಬಗ್ಗೆ ಕಂಗನಾ ರಣಾವತ್, ಕರಣ್ ಜೋಹರ್ ಮೇಲೆ ಹಲವು ಬಾರಿ ದಾಳಿ ನಡೆಸಿದ್ದರು. ಕಾಫಿ ವಿತ್ ಕರಣ್ ಶೋನಲ್ಲಿ ಕಂಗನಾ ಕರಣ್ ಜೋಹರ್ ಅವರನ್ನು ಸ್ವಜನಪಕ್ಷಪಾತದ ಧ್ವಜಧಾರಿ ಎಂದು ಕರೆದರು. ನಂತರ ಅವರ ನಡುವಿನ ಅಂತರ ಹೆಚ್ಚಾಯಿತು. ಕರಣ್ ನಟಿಯೊಂದಿಗೆ ಎಂದಿಗೂ ಚಿತ್ರ ಮಾಡಲು ಸಾಧ್ಯವಿಲ್ಲ.
ಮಲ್ಲಿಕಾ ಶೆರಾವತ್ ಮತ್ತು ಇಮ್ರಾನ್ ಹಶ್ಮಿ 'ಮರ್ಡರ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸಖತ್ ಸುದ್ದಿ ಮಾಡಿದ್ದರು. ಆದರೆ ಈ ಸಿನಿಮಾದ ನಂತರ ಇಬ್ಬರ ನಡುವೆ ಏನೋ ಜಗಳವಾಗಿದೆ. ಕಾಫಿ ವಿತ್ ಕರಣ್ ಶೋನಲ್ಲಿ, ಇಮ್ರಾನ್ ಮಲ್ಲಿಕಾ ಅವರನ್ನು ತನ್ನ ಕೆಟ್ಟ ಆನ್-ಸ್ಕ್ರೀನ್ ಕಿಸ್ ಪಾರ್ಟನರ್ ಎಂದು ಕರೆದರು.