ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಸಕ್ಸಸ್ ಕಂಡಷ್ಟು ಬಾಲಿವುಡ್ ಸಿನಿಮಾಗಳು ದಕ್ಷಿಣದಲ್ಲಿ ಭರ್ಜರಿ ಯಶಸ್ಸು ಕಂಡಿದ್ದು ಕಡಿಮೆ. ಈ ಬಗ್ಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದ ಅನೇಕ ಸಿನಿಮಾಗಳು ಬಾಲಿವುಡ್ ನಲ್ಲಿಯೂ ಸೂಪರ್ ಹಿಟ್ ಆಗಿವೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿವೆ. ಇತ್ತೀಚಿಗೆ ಬಿಡುಗಡೆಯಾದ ಆರ್ ಆರ್ ಆರ್ ಸಿನಿಮಾಗೂ ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಕೋಟಿ ಕೋಟಿ ಬಾಚಿಕೊಂಡಿದೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಸಕ್ಸಸ್ ಕಂಡಷ್ಟು ಬಾಲಿವುಡ್ ಸಿನಿಮಾಗಳು ದಕ್ಷಿಣದಲ್ಲಿ ಭರ್ಜರಿ ಯಶಸ್ಸು ಕಂಡಿದ್ದು ಕಡಿಮೆ. ಈ ಬಗ್ಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಸಲ್ಮಾನ್ ಖಾನ್ ಮುಂಬೈನಲ್ಲಿ ನಡೆದ IIFA ಅವಾರ್ಡ್ಸ ಪತ್ರಿಕಾಗೋಷ್ಠಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ, ತೆಲುಗು ಮೆಗಾಸ್ಟಾರ್ ಚಿರಂಜೀವಿ(Chiranjeevi) ಅವರ ಗಾಡ್ ಫಾದರ್(Godfather) ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಚೊಚ್ಚಲ ತೆಲೆಗು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಚಿರಂಜೀವಿ ಜೊತೆ ಗಾಡ್ ಫಾದರ್ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸಲ್ಮಾನ್ ಮಾಹಿತಿ ಹಂಚಿಕೊಂಡಿದ್ದಾರೆ. 'ಚಿರಂಜೀವಿ ಜೊತೆ ಕೆಲಸ ಮಾಡಿದ್ದು, ಅದ್ಭುತ ಅನುಭವ ಎಂದಿದ್ದಾರೆ. ಚಿರು ಅವರು ಬಹಳ ಸಮಯದಿಂದ ಗೊತ್ತು. ಸ್ನೇಹಿತನೂ ಆಗಿದ್ದಾರೆ. ಜೊತೆಗೆ ಅವರ ಮಗ ರಾಮ್ ಚರಣ್ ಕೂಡ ನನಗೆ ಉತ್ತಮ ಸ್ನೇಹಿತರು. ಆರ್ ಆರ್ ಆರ್ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಜನ್ಮದಿನಕ್ಕೆ ಮತ್ತು ಅವರ ಸಿನಿಮಾ ಸಕ್ಸಸ್ ಗೆ ನಾನು ಶುಭಕೋರುತ್ತೇನೆ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ' ಎಂದಿದ್ದಾರೆ.

ಮಾತು ಮುಂದುವರೆಸಿದ ಸಲ್ಮಾನ್ ಖಾನ್ 'ನಮ್ಮ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಯಾಕೆ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ನಾನು ತುಂಬಾ ಆಶ್ಚರ್ಯ ಪಡುತ್ತೇನೆ. ದಕ್ಷಿಣದ ಸಿನಿಮಾಗಳು ಇಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ' ಎಂದು ಹೇಳಿದ್ದಾರೆ.

ಚಿರಂಜೀವಿ 'ಗಾಡ್ ಫಾದರ್' ಚಿತ್ರೀಕರಣ ಮುಗಿಸಿದ ಸಲ್ಮಾನ್ ಖಾನ್; ಧನ್ಯವಾದ ತಿಳಿಸಿದ ನಿರ್ದೇಶಕ

ಇದೇ ಸಮಯದಲ್ಲಿ ಸಲ್ಮಾನ್ ಹಿಂದಿಯಲ್ಲಿ ಹೀರೋಯಿಸಂ ಚಿತ್ರಗಳನ್ನು ಮಾಡುವ ಅಗತ್ಯದ ಬಗ್ಗೆಯೂ ಒತ್ತಿ ಹೇಳಿದರು. 'ಅವರು(ದಕ್ಷಿಣ ಭಾರತದ ಚಲನಚಿತ್ರೋದ್ಯಮ) ಯಾವಾಗಲು ಹೀರೋಯಿಸಂ ಅನ್ನು ನಂಬುತ್ತಾರೆ. ಚಿತ್ರಮಂದಿರದಿಂದ ಹೊರಬಂದಾಗ ಹೀರೋಯಿಸಂ ಬೇಕು. ಇಲ್ಲಿ ಒಂದಿಬ್ಬರು ಬಿಟ್ಟು ನಾವು ಹೀರೋಯಿಸಂ ಸಿನಿಮಾ ಮಾಡುತ್ತಿಲ್ಲ. ಇಲ್ಲಿ ದೊಡ್ಡದಾದ ಹೀರೋಯಿಸಂ ಸಿನಿಮಾಗಳನ್ನು ಪ್ರಾರಂಭ ಮಾಡಬೇಕು. ನಾನು ಮಾತ್ರ ಮಾಡುತ್ತಿದ್ದೇನೆ' ಎಂದು ಹೇಳಿದರು.

ಹೀರೋಯಿಸಂ ಯಾವಾಗಲು ಕೆಲಸ ಮಾಡುತ್ತದೆ. ಸಿನಿಪ್ರಿಯರಿಗೆ ಬಹಳ ಮುಖ್ಯವಾಗುತ್ತದೆ. ನಾವು ಸಲೀಂ-ಜಾವೇದ್ ಅವರ ಕಾಲದಿಂದನೂ ಹೊಂದಿದ್ದೇವೆ. ಆದರೆ ದಕ್ಷಿಣದವರು ಅದನ್ನು ಮುಂದಿನ ಹಂಚಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಫ್ಯಾನ್ ಫಾಲೋವರ್ಸ್ ಜಾಸ್ತಿ ಇದ್ದಾರೆ. ಇದೀಗ ನಾನು ಚಿರು ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿನ ಬರಹಗಾರರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಸುಂದರವಾದ ಪರಿಕಲ್ಪನೆಗಳ ಮೇಲೆ ಸಿನಿಮಾ ಮಾಡುತ್ತಾರೆ. ಸಣ್ಣ ಸಿನಿಮಾ ಆದರೂ ಜನ ನೋಡುತ್ತಾರೆ ಎಂದಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಿ ಆನಂದ ಪಡುತ್ತೇನೆ ಎಂದು ಸಲ್ಮಾನ್ ಹೇಳಿದ್ದಾರೆ. ಇದುವರೆಗೂ ದಕ್ಷಿಣ ಭಾರತ ಸಿನಿಮಾರಂಗದಿಂದ ಆಫರ್ ಬಂದಿಲ್ಲ. ಬಂದರೂ ಹಿಂದಿ ಚಿತ್ರಕ್ಕಾಗಿ ನನ್ನ ಬಳಿ ಬರುತ್ತಾರೆ ಎಂದು ಸಲ್ಮಾನ್ ಖಾನ್ ಬಹಿರಂಗ ಪಡಿಸಿದ್ದಾರೆ.

ಪತ್ರಕರ್ತನಿಗೆ ಬೆದರಿಕೆ; ನಟ ಸಲ್ಮಾನ್ ಖಾನ್ ಗೆ ಸಮನ್ಸ್ ಜಾರಿಮಾಡಿದ ಕೋರ್ಟ್

ಸಲ್ಮಾನ್ ಖಾನ್ ಸದ್ಯ ಟೈಗರ್-3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಗೆ ನಾಯಕಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಚಿರಂಜೀವಿ ಅವರ ಗಾಡ್ ಫಾದರ್ ಮತ್ತು ಸಲ್ಮಾನ್ ಖಾನ್ ಅವರ ಪಠಾಣ್ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.