MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ!

ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ!

ಪ್ರಭಾಸ್ ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಅವರಿಗೆ ಇಷ್ಟವಾದ ಜಾನರ್ ಆ್ಯಕ್ಷನ್ ಅಲ್ವಂತೆ. ಹಾಗಾದ್ರೆ ಯಾವುದು? ಜೊತೆಗೆ, ತಾವು ನಟಿಸಿದ ಚಿತ್ರಗಳಲ್ಲಿ ಫೇವರಿಟ್ ಯಾವುದು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.

2 Min read
Author : Naveen Kodase
Published : Feb 21 2026, 09:31 AM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದ ಅತಿದೊಡ್ಡ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಭಾಸ್
Image Credit : Prabhas\Instagram

ಭಾರತದ ಅತಿದೊಡ್ಡ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಭಾಸ್

ಪ್ರಭಾಸ್ ಸದ್ಯ ಭಾರತದ ಅತಿದೊಡ್ಡ ಪ್ಯಾನ್ ಇಂಡಿಯಾ ಹೀರೋ. ಅವರ ಹೆಸರಿನಲ್ಲಿ ಸುಮಾರು ಆರರಿಂದ ಏಳು ಸಾವಿರ ಕೋಟಿ ರೂಪಾಯಿಗಳ ಬ್ಯುಸಿನೆಸ್ ನಡೆಯುತ್ತಿದೆ. ಅವರ ಒಂದು ಸಿನಿಮಾ ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತದೆ. ಮುಂಬರುವ ಆ್ಯಕ್ಷನ್, ಪೌರಾಣಿಕ ಮತ್ತು ಫಿಕ್ಷನ್ ಚಿತ್ರಗಳು ಅವರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲಿವೆ.

26
ಆ್ಯಕ್ಷನ್‌ ಸಿನಿಮಾಗಳಿಗೆ ಕೇರಾಫ್ ಪ್ರಭಾಸ್‌
Image Credit : Asianet News

ಆ್ಯಕ್ಷನ್‌ ಸಿನಿಮಾಗಳಿಗೆ ಕೇರಾಫ್ ಪ್ರಭಾಸ್‌

ಪ್ರಭಾಸ್ ಇತ್ತೀಚೆಗೆ ಸತತವಾಗಿ ಆ್ಯಕ್ಷನ್ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. 'ದಿ ರಾಜಾ ಸಾಬ್' ಎಂಬ ರೊಮ್ಯಾಂಟಿಕ್ ಕಾಮಿಡಿ ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಈಗ 'ಫೌಜಿ' ಆ್ಯಕ್ಷನ್ ಲವ್ ಸ್ಟೋರಿ, 'ಕಲ್ಕಿ 2' ಮತ್ತು 'ಸಲಾರ್ 2' ಕೂಡ ಆ್ಯಕ್ಷನ್ ಚಿತ್ರಗಳೇ. ಅಭಿಮಾನಿಗಳು ಅವರನ್ನು ಆ್ಯಕ್ಷನ್ ಹೀರೋ ಆಗಿಯೇ ನೋಡುತ್ತಾರೆ. ಹಾಗಾದರೆ ಪ್ರಭಾಸ್‌ಗೆ ಇಷ್ಟವಾದ ಜಾನರ್ ಮತ್ತು ನಿರ್ದೇಶಕ ಯಾರು?

Related Articles

Related image1
ಪ್ರಭಾಸ್ ಒಂದು ದಿನದ ಊಟದ ಖರ್ಚು ಎಷ್ಟು ಗೊತ್ತಾ? ಬಾಹುಬಲಿ ಸ್ಟಾರ್ ಲಂಚ್ ಮೆನುವಿನಲ್ಲಿ ಏನಿರುತ್ತೆ?
Related image2
ಅನುಷ್ಕಾ ಶೆಟ್ಟಿ ಸೇರಿ ಪ್ರಭಾಸ್ ಹೀರೋಯಿನ್ಸ್ ಮೇಕಪ್ ಇಲ್ದೇ ನೋಡಿ ಹೇಗ್ ಕಾಣ್ತಾರೆ?
36
ಪ್ರಭಾಸ್‌ಗೆ ಇಷ್ಟವಾದ ನಿರ್ದೇಶಕ ಮತ್ತು ಸಿನಿಮಾ
Image Credit : stockPhoto

ಪ್ರಭಾಸ್‌ಗೆ ಇಷ್ಟವಾದ ನಿರ್ದೇಶಕ ಮತ್ತು ಸಿನಿಮಾ

ಪ್ರಭಾಸ್ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ತಮಗೆ ಇಷ್ಟವಾದ ನಿರ್ದೇಶಕ ಮಣಿರತ್ನಂ ಎಂದು ತಿಳಿಸಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿಗಳು ತಮ್ಮ ನೆಚ್ಚಿನ ಜಾನರ್ ಎಂದಿದ್ದಾರೆ. ಆದರೆ ಬಾಹುಬಲಿಯಂತಹ ಬ್ಲಾಕ್‌ಬಸ್ಟರ್ ಹಿಟ್ ನಿರ್ದೇಶಕ ರಾಜಮೌಳಿಯನ್ನು ಪ್ರಬಾಸ್ ಮರೆತಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

46
'ಗೀತಾಂಜಲಿ' ಪ್ರಭಾಸ್ ಇಷ್ಟದ ಸಿನಿಮಾ
Image Credit : Instagram

'ಗೀತಾಂಜಲಿ' ಪ್ರಭಾಸ್ ಇಷ್ಟದ ಸಿನಿಮಾ

ಮಣಿರತ್ನಂ ನಿರ್ದೇಶನದ 'ಗೀತಾಂಜಲಿ' ಚಿತ್ರ ತಮಗೆ ತುಂಬಾ ಇಷ್ಟ, ಅದು ತಮ್ಮ ಫೇವರಿಟ್ ಎಂದು ಹೇಳಿದ್ದಾರೆ. 'ಕಪಲ್ ಫ್ರೆಂಡ್ಲಿ' ಚಿತ್ರತಂಡದ ಜೊತೆಗಿನ ಚಿಟ್‌ಚಾಟ್‌ನಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

56
ಪುರಿ ಜಗನ್ನಾಥ್‌ ಅವರಂತಹ ನಿರ್ದೇಶಕ ಮತ್ತೊಬ್ಬರಿಲ್ಲ
Image Credit : facebook/@PuriJagannadh

ಪುರಿ ಜಗನ್ನಾಥ್‌ ಅವರಂತಹ ನಿರ್ದೇಶಕ ಮತ್ತೊಬ್ಬರಿಲ್ಲ

ತಮ್ಮ ಸಿನಿಮಾಗಳಲ್ಲಿ 'ಏಕ್ ನಿರಂಜನ್' ಅಚ್ಚುಮೆಚ್ಚಿನ ಚಿತ್ರ ಎಂದು ಪ್ರಭಾಸ್ ತಿಳಿಸಿದ್ದಾರೆ. ಅವರು ಪುರಿ ಜಗನ್ನಾಥ್ ಅವರನ್ನು ಹಾಡಿ ಹೊಗಳಿದ್ದಾರೆ. 'ಪುರಿ ಅವರಂತೆ ಹೀರೋ ಪಾತ್ರವನ್ನು ಬರೆಯಬಲ್ಲ ನಿರ್ದೇಶಕ ಭಾರತದಲ್ಲಿ ಯಾರೂ ಇಲ್ಲ. ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ 'ಬುಜ್ಜಿಗಾಡು'. ಆ ಪಾತ್ರವನ್ನು ಹೇಗೆ ಮಾಡಬೇಕೆಂದು ಮೊದಲು ಭಯಪಟ್ಟಿದ್ದೆ. 'ಏಕ್ ನಿರಂಜನ್' ಕೂಡ ಅಷ್ಟೇ ವಿಭಿನ್ನವಾಗಿದೆ' ಎಂದು ಪ್ರಭಾಸ್ ಸ್ಪಷ್ಟಪಡಿಸಿದ್ದಾರೆ. 

66
ಪ್ರಭಾಸ್‌ ಸಿನಿಮಾಗಳು
Image Credit : Film Scene

ಪ್ರಭಾಸ್‌ ಸಿನಿಮಾಗಳು

ಪ್ರಸ್ತುತ ಪ್ರಭಾಸ್, ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಯುದ್ಧದ ಹಿನ್ನೆಲೆಯುಳ್ಳ ಪ್ರೇಮಕಥೆಯಾಗಿದ್ದು, ಇದರಲ್ಲಿ ಪ್ರಭಾಸ್ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಮಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರವನ್ನೂ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಡಿಮ್ರಿ ತೃಪ್ತಿ ನಾಯಕಿಯಾಗಿದ್ದಾರೆ. ಇದರಲ್ಲಿ ದೊಡ್ಡ ತಾರಾಗಣ ಇರಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಪ್ರಭಾಸ್
ಎಸ್. ಎಸ್. ರಾಜಮೌಳಿ
ಟಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ
Recommended image2
'ಬದುಕಿನ ಸತ್ಯ ಇದೊಂದೆ..' ಜೀವನದ ಬಹುದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ಶಕೀಲಾ!
Recommended image3
Akshay Kumar: ಯಾರ ಮುಖ ನೋಡಿ ಗೇಲಿ ಮಾಡುತ್ತೇವೆಯೋ, ಅವರೇ ದೇಶದ ಗಡಿಯಲ್ಲಿ ನಮಗಾಗಿ ಪ್ರಾಣ ಪಣಕ್ಕಿಟ್ಟು ನಿಂತಿರುತ್ತಾರೆ
Related Stories
Recommended image1
ಪ್ರಭಾಸ್ ಒಂದು ದಿನದ ಊಟದ ಖರ್ಚು ಎಷ್ಟು ಗೊತ್ತಾ? ಬಾಹುಬಲಿ ಸ್ಟಾರ್ ಲಂಚ್ ಮೆನುವಿನಲ್ಲಿ ಏನಿರುತ್ತೆ?
Recommended image2
ಅನುಷ್ಕಾ ಶೆಟ್ಟಿ ಸೇರಿ ಪ್ರಭಾಸ್ ಹೀರೋಯಿನ್ಸ್ ಮೇಕಪ್ ಇಲ್ದೇ ನೋಡಿ ಹೇಗ್ ಕಾಣ್ತಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved