Divorce ಆಯಿತು, ಬದುಕಿನ ಬಂಡಿ ಸಾಗಬೇಕು, ಇದು ಐಶ್ವರ್ಯಾ, ಧನುಷ್ ಪ್ಲ್ಯಾನ್!
ಧನುಷ್ ( Dhanush) ಮತ್ತು ಐಶ್ವರ್ಯಾ (Aishwaryaa) ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಕಾಲಿವುಡ್ ತಾರೆ ಧನುಷ್ ಮತ್ತು ಐಶ್ವರ್ಯಾ ಬೇರೆಯಾಗಿರುವುದು ಅವರ ಅಭಿಮಾನಿಗಳಿಗೆ ಭಾರೀ ಆಘಾತವನ್ನುಂಟು ಮಾಡಿದೆ. ಕಳೆದ ಕೆಲವು ಗಂಟೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಇದಕ್ಕೆ ವ್ಯಕ್ತವಾಗುತ್ತಿವೆ. ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಐಶ್ವರ್ಯಾ ಅವರ ತಂದೆ ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ, ರಜಿನಿಕಾಂತ್ ಅವರು ಸ್ಟ್ರಾಂಗ್ ಆಗಿರಿ ಎಂದು ಹೇಳುತ್ತಿದ್ದಾರೆ. ವಿಚ್ಛೇದನದ ನಂತರ, ಧನುಷ್ ಮತ್ತು ಐಶ್ವರ್ಯಾ ಅವರು ತಮ್ಮ ಜೀವನವನ್ನು ನಡೆಸಲು ಹೇಗೆ ಪ್ಲಾನ್ ಮಾಡಿದ್ದಾರೆ? ಅವರ ಮಕ್ಕಳ ಕಥೆ ಏನು? ಇಲ್ಲಿದೆ ಪೂರ್ತಿ ವಿವರ.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಕಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಯಾಗಿತ್ತು. ಇಬ್ಬರೂ ಮದುವೆಯಾಗಿ 18 ವರ್ಷಗಳಾಗಿದ್ದು, ಈ ಜೋಡಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವೈಯಕ್ತಿಕ ವಿಷಯಗಳನ್ನು ನಿಭಾಯಿಸಲು ಖಾಸಗಿತನವನ್ನು ಕೇಳಿದ್ದಾರೆ ಮತ್ತು ಅವರ ಅಭಿಮಾನಿಗಳು ಮತ್ತು ಸ್ನೇಹಿತರು ತಮ್ಮ ನಿರ್ಧಾರವನ್ನು ಗೌರವಿಸಬೇಕೆಂದು ಮಾಜಿ ದಂಪತಿ ವಿನಂತಿಸಿದ್ದಾರೆ.
ನೆಟಿಜನ್‌ಗಳು ಅವರ ವಿಚ್ಛೇದನದ ಹಿಂದಿನ ಕಾರಣಗಳನ್ನು ಹುಡುಕುತ್ತಿದ್ದಾರೆ . ಧನುಷ್ ಮತ್ತು ಐಶ್ವರ್ಯಾ ನಡುವೆ ಏನು ತಪ್ಪಾಗಿರಬಹುದು ಎಂದು ಯೋಚಿಸುತ್ತಿದ್ದಾರೆ. ಧನುಷ್ ಅವರ ಕೆಲಸದ ವೇಳಾಪಟ್ಟಿಯು ಪ್ರತ್ಯೇಕತೆಗೆ ಒಂದು ಕಾರಣವಾಗಿರಬಹುದು ಎಂದು ವರದಿಯಾಗಿದೆ.
ಧನುಷ್ ವರ್ಕ್‌ಹಾಲಿಕ್ ಆಗಿದ್ದು, ಎಲ್ಲದಕ್ಕೂ ಮೊದಲು ತಮ್ಮ ಕೆಲಸಕ್ಕೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಅವರು ತಮ್ಮ ಕೆಲಸದ ಬದ್ಧತೆಗಳಿಂದಾಗಿ ಬ್ಯುಸಿಯಾಗಿದ್ದರು ಮತ್ತು ಸಿನಿಮಾದ ಶೂಟಿಂಗ್‌ಕ್ಕಾಗಿ ಒಂದು ಊರಿಂದ ಊರಿಗೆ ಪ್ರಯಾಣಿಸುವುದು ಅವರ ವೈಯಕ್ತಿಕ ಜೀವನವನ್ನು ಬಲಿ ತೆಗೆದುಕೊಂಡಿದೆ.
ಧನುಷ್ ಅವರ ಇತ್ತೀಚಿನ ಬಾಲಿವುಡ್ ಚಿತ್ರ ಅತ್ರಾಂಗಿ ರೇ ಪ್ರಚಾರದ ಸಮಯದಲ್ಲೂ, ನಟನ ಮನಸ್ಸು ಸರಿ ಇರಲಿಲ್ಲ. ಸ್ಪಷ್ಟವಾಗಿ, ಅವರು ವೈಯಕ್ತಿಕವಾಗಿ ಸಮಸ್ಯೆ ಎದುರಿಸುತ್ತಿದ್ದರು ಎಂಬುವುದು ಗೋಚರಿಸುತ್ತಿತ್ತು. ಅದನ್ನು ಅವರು ಯಾರ ಬಳಿಯೂ ಹೇಳಿ ಕೊಳ್ಳುತ್ತಿರಲಿಲ್ಲವೆಂದು ನಟನ ಆಪ್ತರೊಬ್ಬರು ಇಂಡಿಯಾ ಟುಡೇಗೆ ಹೇಳಿದ್ದಾರೆ.
ಮತ್ತೊಂದೆಡೆ, ಐಶ್ವರ್ಯಾ ಫಿಟ್ನೆಸ್ ರೂಟಿನ್ ತ್ತು ತನ್ನ ಇತರೆ ಆಸಕ್ತಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅವರು ಮಹಿಳಾ ಸಬಲೀಕರಣ ಯೋಜನೆಗಳು ಮತ್ತು ದತ್ತಿ ಕಡೆಗೆ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಧನುಷ್ ಮತ್ತು ಐಶ್ವರ್ಯಾರ ಮೊದಲ ಆದ್ಯತೆ ಅವರ ಮಕ್ಕಳು- ಯಾತ್ರಾ ಮತ್ತು ಲಿಂಗ.
ಈಗ ಮಕ್ಕಳು ಬೆಳೆದಿದ್ದಾರೆ ಮತ್ತು ಅವರ ಪೋಷಕರ ವಿಚ್ಛೇದನದ ಬಗ್ಗೆ ಅವರಿಗೆ ವಿವರಿಸುವುದು ಮತ್ತು ತಿಳಿಸುವುದು ಹೆಚ್ಚು ಅಗತ್ಯ. ಮಕ್ಕಳು ಯಾವಾಗಲೂ ಅವರ ಆದ್ಯತೆ; ಆದ್ದರಿಂದ, ಅವರು ಅವರ ಸಹ-ಪೋಷಕರಗಾಗಿ ಇರುವ ಪ್ಲಾನ್ ಮಾಡಿದ್ದಾರೆ. ಧನುಷ್ ಮತ್ತು ಐಶ್ವರ್ಯಾ ನಡುವೆ ಯಾವುದೇ ದ್ವೇಷ ಮತ್ತು ಜಗಳ ಇರಲಿಲ್ಲ ಹಾಗೂ ಇಬ್ಬರೂ ತಮ್ಮ ಮಕ್ಕಳ ಸಲುವಾಗಿ ಅತ್ಯುತ್ತಮ ಫ್ರೆಂಡ್ಲಿ ರಿಲೆಷನ್‌ಶಿಪ್ ಹೊಂದಿರುತ್ತಾರೆ.