Dhanush Aishwarya Love Story: ಬರೀ 21 ವರ್ಷಕ್ಕೆ ಧನುಷ್ ತನಗಿಂತ ಹಿರಿಯವಳನ್ನು ಮದ್ವೆಯಾಗಿದ್ದೇಕೆ?
ಸೌತ್ ಸೂಪರ್ ಸ್ಟಾರ್ ಧನುಷ್ (Dhanush) ಪತ್ನಿ ಐಶ್ವರ್ಯಾ ರಜನಿಕಾಂತ್ (Aishwarya Rajanikanth) ರಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಈ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ನೋಡಿ ಅನೇಕ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಧನುಷ್, ಇತ್ತೀಚೆಗೆ ಸಾರಾ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಅತ್ರಾಂಗಿ ರೇ ಚಿತ್ರದಲ್ಲಿ ಕಾಣಿಸಿಕೊಂಡರು. ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ 21 ನೇ ವಯಸ್ಸಿನಲ್ಲಿ, ಅವರು ತನಗಿಂತ 2 ವರ್ಷ ದೊಡ್ಡವರಾದ ಐಶ್ವರ್ಯಾ ಅವರನ್ನು ವಿವಾಹವಾದರು. ಐಶ್ವರ್ಯಾ ಅವರೊಂದಿಗಿನ ಧನುಷ್ ಅವರ ಪ್ರೇಮಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇಲ್ಲಿದೆ ಪೂರ್ತಿ ವಿವರ.
ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು 2004 ರಲ್ಲಿ ಧನುಷ್ ವಿವಾಹವಾದರು. ಅವರ ಮದುವೆಯ ಸಮಯದಲ್ಲಿ ಧನುಷ್ 21 ಮತ್ತು ಐಶ್ವರ್ಯ 23 ವರ್ಷ ವಯಸ್ಸಿನವರಾಗಿದ್ದರು. ಮಾಧ್ಯಮಗಳಲ್ಲಿ ಹರಡಿದ ವದಂತಿಗಳಿಂದಾಗಿ ಇಬ್ಬರೂ ತರಾತುರಿಯಲ್ಲಿ ಮದುವೆಯಾಗಬೇಕಾಯಿತು ಎಂದು ಬಹುಶಃ ಕೆಲವೇ ಜನರಿಗೆ ತಿಳಿದಿದೆ.
ಕಾದಲ್ ಕೊಂಡೆ ಚಿತ್ರದ ಸಮಯದಲ್ಲಿ ಧನುಷ್ ಮತ್ತು ಐಶ್ವರ್ಯಾ ಮೊದಲು ಭೇಟಿಯಾದರು. ಸಿನಿಮಾದ ಬಿಡುಗಡೆಯಾದ ಮೊದಲ ದಿನವೇ ಧನುಷ್ ಕುಟುಂಬ ಸಮೇತ ಥಿಯೇಟರ್‌ಗೆ ಆಗಮಿಸಿದ್ದು, ಆಗ ರಜನಿಕಾಂತ್ ಅವರ ಇಬ್ಬರು ಪುತ್ರಿಯರಾದ ಐಶ್ವರ್ಯ ಮತ್ತು ಸೌಂದರ್ಯ ಅವರಿದ್ದರು.
ಸಿನಿಮಾ ಮುಗಿದ ನಂತರ ಥಿಯೇಟರ್ ಮಾಲೀಕರು ಧನುಷ್‌ಗೆ ಐಶ್ವರ್ಯಾ ಮತ್ತು ಸೌಂದರ್ಯ ಅವರನ್ನು ಪರಿಚಯಿಸಿದರು. ಮರುದಿನ ಬೆಳಗ್ಗೆ ಐಶ್ವರ್ಯಾ ಧನುಷ್ ಮನೆಗೆ ಹೂಗುಚ್ಛವನ್ನು ಕಳುಹಿಸಿದರು. ಸಂಪರ್ಕದಲ್ಲಿರಿ ಎಂದು ಹೇಳಿದರು. ಅಂದಿನಿಂದ ಇಬ್ಬರು ಬೆರೆಯಲು ಶುರುವಾದರು.
ಮೊದಲು ಸ್ನೇಹಿತರಾಗಿದ ಇಬ್ಬರೂ ನಂತರ ಪ್ರೀತಿಸಲು ಶುರು ಮಾಡಿದರು. ಇಬ್ಬರೂ 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಹೀಗಿರುವಾಗ ಇಬ್ಬರ ಬಗ್ಗೆಯೂ ಸುದ್ದಿಗಳು ಬರತೊಡಗಿದವು. ಆದರೆ ರಜನಿಕಾಂತ್ ಮತ್ತು ಅವರ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗುವುದನ್ನು ಬಯಸಲಿಲ್ಲ.
ಇವರಿಬ್ಬರ ಮದುವೆ ನಿಶ್ಚಯ ಮಾಡಬೇಕು ಎಂದು ಇಬ್ಬರ ಮನೆಯವರು ಯೋಚಿಸಿದ್ದರು. ನಂತರ ಇಬ್ಬರೂ ಮದುವೆಯಾದರು. ತರಾತುರಿಯಲ್ಲಿ ಮದುವೆಯಾದರೂ ಸಹ ಮದುವೆ ಅದ್ಧೂರಿಯಾಗಿಯೇ ನೆಡೆಯಿತು. ಧನುಷ್ ಮತ್ತು ಐಶ್ವರ್ಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಧನುಷ್ ಶಿವನ ಭಕ್ತ. ತಮ್ಮ ಇಬ್ಬರು ಮಕ್ಕಳಿಗೆ ಯಾತ್ರಾ ಮತ್ತು ಲಿಂಗ ಎಂದು ಹೆಸರಿಟ್ಟಿದ್ದಾರೆ. ಈವೆಂಟ್ ಒಂದರಲ್ಲಿ, ಐಶ್ವರ್ಯಾ ಮತ್ತು ನನ್ನ ಮದುವೆಯಲ್ಲಿ ನಾನು ಅದೃಷ್ಟಶಾಲಿ ಮತ್ತು ಸಂತೋಷವಾಗಿದ್ದೇನೆ ಎಂದು ಹೇಳಿದ್ದರು.
ಧನುಷ್ 2002 ರಲ್ಲಿ ತುಳ್ಳುವದೋ ಇಳಮೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಅವರ ನಟನೆ ಗಮನ ಸೆಳೆಯಿತು.ಅವರ ಚಿತ್ರ ತಿರುಡಾ ತಿರುಡಿ 2003 ರಲ್ಲಿ ಯಶಸ್ವಿಯಾಯಿತು. ಎರಡನೇ ಚಿತ್ರ ಹಿಟ್ ಆದ ಮೇಲೆ ಧನುಷ್ ಸಖತ್ ಫೇಮಸ್ ಆದರು. ಆಗ ಅವರಿಗೆ ಕೇವಲ 20 ವರ್ಷ.
ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸುವುದರ ಜೊತೆಗೆ, ಧನುಷ್ ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಅವರು 2013 ರ ರಾಂಝಾನಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಧನುಷ್ ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ನಿನ್ನೆ ರಾತ್ರಿ, ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ, ಧನುಷ್ ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ನಾವು ಫ್ರೆಂಡ್ಸ್, ದಂಪತಿಗಳು, ಪೋಷಕರು ಮತ್ತು ಪರಸ್ಪರರ ಹಿತೈಷಿಗಳಾಗಿ 18 ವರ್ಷಗಳಿಂದ ಬೆಳವಣಿಗೆ, ತಿಳುವಳಿಕೆ ಮತ್ತು ಪಾಲುದಾರಿಕೆಯಲ್ಲಿ ಬಹಳ ದೂರ ಸಾಗಿದ್ದೇವೆ. ಇಂದು ನಾವು ನಿಂತಿರುವ ಸ್ಥಳದಿಂದ, ನಮ್ಮ ಹಾದಿಗಳು ಬೇರ್ಪಡುತ್ತಿವೆ. ಐಶ್ವರ್ಯ ಮತ್ತು ನಾನು ಜೋಡಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ಸಮಯವನ್ನು ನೀಡಲು ಬಯಸುತ್ತೇವೆ. ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿ' ಎಂದು ಅವರು ಬರೆದಿದ್ದಾರೆ.