ಮಾದಕ ಕಪ್ಪುಡುಗೆಯಲ್ಲಿ ವಿಕ್ರಾಂತ್ ರೋಣಾ ನಟಿಯ ಹಾಟ್ ಲುಕ್!
ಈ ದಿನಗಳಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) ಮತ್ತೆ ಸದ್ದು ಮಾಡುತ್ತಿದ್ದಾರೆ. ಹಲವು ತಿಂಗಳಿಂದ ವಿವಾದಗಳಲ್ಲಿ ಸಿಲುಕಿ ಕುಖ್ಯಾತಿಯಾಗಿದ್ದ ನಟಿ ಈಗ ಮತ್ತೆ ತಮ್ಮ ಚಾರ್ಮ್‌ನಿಂದ ಫ್ಯಾನ್ಸ್ ಗೆಲ್ಲುತ್ತಿದ್ದಾರೆ. ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ (Sudeep) ಜೊತೆ ಹೆಜ್ಜೆ ಹಾಕಿರುವ ನಟಿ ತಮ್ಮ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಸೂಪರ್ ಸೆಕ್ಸಿ ಬ್ಲ್ಯಾಕ್ ಡ್ರೆಸ್‌ನ ಹಾಟ್ ಫೋಟೋಗಳು ಸಖತ್ ವೈರಲ್ ಆಗಿವೆ.
ಈ ದಿನಗಳಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ತಮ್ಮ ಮುಂದಿನ ಚಲನಚಿತ್ರ ವಿಕ್ರಾಂತ್ ರೋಣಾ (Vikranth Rona) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಕಿಚ್ಚ ಅವರ ಜೊತೆ ತನ್ನ ಅತ್ಯುತ್ತಮ ನೃತ್ಯ ಪ್ರದರ್ಶನಗಳಲ್ಲಿ ಲಂಕನ್ ಬ್ಯೂಟಿ ಮಿಂಚಿದ್ದಾಳೆ.
ಈ ನಡುವೆ ಬಾಲಿವುಡ್‌ನ ಸನ್‌ಶೈನ್ ಗರ್ಲ್ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ಕಪ್ಪು ಬಟ್ಟೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸ್ಟೈಲಿಶ್ ಕಪ್ಪು ಉಡುಪಿನಲ್ಲಿನ, ನಟಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ.
ನಟಿ ಕೆಂಪು ಲಿಪ್‌ಸ್ಟಿಕ್, ಸಿಲ್ವರ್ ಶೂಗಳನ್ನು ಜಾಕ್ವೆಲಿನ್ ತಮ್ಮ ಕಪ್ಪು ಔಟ್‌ಫಿಟ್ ಜೊತೆ ಪೇರ್ ಮಾಡಿಕೊಂಡಿದ್ದಾರೆ ಮತ್ತು ಅವರ ಟೋನ್ಡ್ ಲೆಗ್ಸ್ ಹೆಚ್ಚು ಗಮನ ಸೆಳೆಯುತ್ತಿವೆ ನಟಿ 'ಹೆಡ್ ಓವರ್ ಹೀಲ್ಸ್' ಕ್ಯಾಪ್ಷನ್ ನೀಡಿದ್ದಾರೆ.
ತನ್ನ ಲಾಭರಹಿತ ಸಂಸ್ಥೆ 'ಯು ಓನ್ಲಿ ಲೀವ್ ಒನ್ಸ್' ಪರವಾಗಿ ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ ಕೆಫೆ ಅರ್ಪಾನ್ ಸಿಬ್ಬಂದಿ ಜೊತೆಗೆ ಆಟಿಸಂ ಪ್ರೈಡ್ ಡೇ (Autism) ಅನ್ನು ಆಚರಿಸಿದರು.
ನಟಿ ಪ್ರಸ್ತುತ ತನ್ನ ಮುಂಬರುವ ಚಲನಚಿತ್ರ ವಿಕ್ರಾಂತ್ ರೋಣಾ ಅನ್ನು ಪ್ರಚಾರ ಮಾಡಲು ಪ್ರಯಾಣಿಸುತ್ತಿದ್ದಾರೆ. ಇದರ ಜೊತೆಗೆ, ಅಕ್ಷಯ್ ಕುಮಾರ್ ಮತ್ತು ನುಶ್ರತ್ ಭರುಚ್ಚ ಜೊತೆಗೆ, ನಟಿ ರೋಹಿತ್ ಶೆಟ್ಟಿ ಅವರ 'ಸರ್ಕಸ್' ಮತ್ತು 'ರಾಮ್ ಸೇತು' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.