40 ವರ್ಷಗಳ ನಂತರ ಗುಜರಾತಿ ಚಿತ್ರರಂಗಕ್ಕೆ ಮರಳಿದ Paresh Rawal
ಖಳನಟನಾಗಿ, ಕೆಲವೊಮ್ಮೆ ಕಾಮಿಡಿಯನ್ ಆಗಿ ಎಲ್ಲರ ಹೃದಯವನ್ನು ಆಳಿದ ಪರೇಶ್ ರಾವಲ್ (Paresh Rawal) ಗುಜರಾತಿ ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. 40 ವರ್ಷಗಳ ನಂತರ ಬಾಲಿವುಡ್ ನಟ ಧೋಲಿವುಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 40 ವರ್ಷಗಳ ನಂತರ ಗುಜರಾತಿ ಚಿತ್ರರಂಗಕ್ಕೆ ಮರಳಿದ ಪರೇಶ್ ರಾವಲ್ ಹೊಸ ಚಿತ್ರ ಡಿಯರ್ ಫಾದರ್' ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ

'ಡಿಯರ್ ಫಾದರ್' ಗುಜರಾತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ಪರೇಶ್ ರಾವಲ್ ದ್ವಿಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. 'ಟ್ರೇಲರ್ ನೋಡಿದಾಗ, ಪರೇಶ್ ರಾವಲ್ ತನ್ನ ಮಗಳನ್ನು ತುಂಬಾ ಪ್ರೀತಿಸುವ ತಂದೆ ಎಂದು ತಿಳಿದುಬಂದಿದೆ. ಈ ವರ್ಷ ಮಾರ್ಚ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಟ್ರೇಲರ್ ನೋಡಿದಾಗ, ಪರೇಶ್ ರಾವಲ್ ತನ್ನ ಮಗಳನ್ನು ತುಂಬಾ ಪ್ರೀತಿಸುವ ತಂದೆ ಎಂದು ತಿಳಿದುಬಂದಿದೆ. ಸಮಯಕ್ಕೆ ಸರಿಯಾಗಿ ಮನೆಗೆ ಬಾರದೇ ಇದ್ದಾಗ ಆತಂಕಗೊಂಡು ಎಲ್ಲೆಂದರಲ್ಲಿಗೆ ಫೋನ್ ಡಯಲ್ ಮಾಡುತ್ತಾರೆ. ಅವರ ಈ ಅಭ್ಯಾಸದಿಂದ ಮಗಳು ತೊಂದರೆಗೀಡಾಗಿದ್ದಾಳೆ. ಒಂದು ದಿನ ಪರೇಶ್ ರಾವಲ್ ಸಾಯುತ್ತಾರೆ.
ಅದರ ನಂತರ ಈ ಕೊಲೆ ರಹಸ್ಯದ ತನಿಖೆಯನ್ನು ಮಾಡುತ್ತಿರುವ ಸ್ಟ್ರಿಕ್ಟ್ ಪೊಲೀಸ್ ಪಾತ್ರದಲ್ಲಿ ಕೂಡ ಪರೇಶ್ ರಾವಲ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಪರೇಶ್ ರಾವಲ್.
ಅಂತಿಮವಾಗಿ ಅಧಿಕೃತ ಟ್ರೇಲರ್ ಹೊರಬಂದಿದೆ. ಈ ಚಿತ್ರದ ಭಾಗವಾಗಲು ಮತ್ತು ನಾನು ಇಷ್ಟಪಡುವ ಪಾತ್ರದಲ್ಲಿ ಕೆಲಸ ಮಾಡಲು ಇದು ಅದ್ಭುತ ಪ್ರಯಾಣವಾಗಿದೆ. ನಿಮ್ಮೆಲ್ಲರಿಗೂ ಚಿತ್ರ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಪರೇಶ್ ರಾವಲ್ ಬರೆದಿದ್ದಾರೆ.
'ಡಿಯರ್ ಫಾದರ್' ಚಿತ್ರದಲ್ಲಿ ಪರೇಶ್ ರಾವಲ್ ಜೊತೆಗೆ ಚೇತನ್ ಡಿ ಮತ್ತು ಮಾನ್ಸಿ ಪರೇಖ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನು ಉಮೇಶ್ ವ್ಯಾಸ್ ನಿರ್ದೇಶಿಸಿದ್ದಾರೆ.ಪರೇಶ್ ರಾವಲ್ ಇತ್ತೀಚೆಗೆ 'ಹಂಗಾಮಾ 2', 'ಹಮ್ ದೋ ಹಮಾರೇ ದೋ' ನಲ್ಲಿ ಜನರನ್ನು ನಗಿಸಿದ್ದಾರೆ.
ಹಂಗಾಮಾ 2 ರಲ್ಲಿ ಶಿಲ್ಪಾ ಶೆಟ್ಟಿ, ಮೀಜಾನ್ ಜಾಫ್ರಿ ಮತ್ತು ಪ್ರಣಿತಾ ಸುಭಾಸ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ನಾವು ರಾಜ್‌ಕುಮಾರ್ ರಾವ್, ಕೃತಿ ಸನೋನ್, ರತ್ನ ಪಾಠಕ್ ಪರೇಶ್ ರಾವಲ್ ಅವರೊಂದಿಗೆ ಹಮ್ ದೋ ಹಮಾರಿ ದೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರೇಶ್ ರಾವಲ್ ಬಿಜೆಪಿ ಸಂಸದರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.