ಟ್ವಿಟರ್’ನಲ್ಲಿ ಮಂಗಳಾರತಿ ಮಾಡಿಸಿಕೊಂಡ ಬಿಜೆಪಿ ಸಂಸದ ಪರೇಶ್ ರಾವಲ್

ನಟ ಹಾಗೂ ಬಿಜೆಪಿ ಸಂಸದನಾಗಿರುವ ಪರೇಶ್ ರಾವಲ್ ತಪ್ಪುಮಾಹಿತಿಯನ್ನು ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತಪಾರಕಿಗೊಳಗಾಗಿದ್ದಾರೆ.

BJP MP Paresh Rawal got called out on Twitter for playing fast and loose with facts

ನಟ ಹಾಗೂ ಬಿಜೆಪಿ ಸಂಸದನಾಗಿರುವ ಪರೇಶ್ ರಾವಲ್, ತಪ್ಪುಮಾಹಿತಿಯನ್ನು ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತಪಾರಕಿಗೊಳಗಾಗಿದ್ದಾರೆ.

ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಬೆಂಗಳೂರಿನ ಮೇ. ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಸರ್ಕಾರವು 21-ಕುಶಲ ತೋಪುಗಳ ಗೌರವವಂದನೆ ನೀಡಿರಲಿಲ್ಲವೆಂದು ಟ್ವೀಟಿಸಿದ್ದಾರೆ.

ಆದರೆ ಈ ಮಾಹಿತಿಯು ಸುಳ್ಳಾಗಿದ್ದು, ಮೇ. ಸಂದೀಪ್ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು. ಅಲ್ಲದೇ, 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಡೆಸುತ್ತಿತ್ತು, ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.

ಟ್ವಿಟರಿಗರು ದಾಳಿ ಆರಂಭಿಸುತ್ತಿದ್ದಂತೆ ತಪ್ಪಿನ ಅರಿವಾಗಿ ಪರೇಶ್ ರಾವಲ್, ತಪ್ಪಿನಿಂದಾಗಿ ‘Not’ ಎಂಬ ಪದ ಸೇರಿಕೊಂಡಿದೆ ಎಂದು ತೇಪೆ ಹಚ್ಚುತ್ತಾ ಕ್ಷಮೆಯಾಚಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಸಕಲ ಸರ್ಕಾರಿ ಗೌರವಗಳೊಂದಿಗೆ  ಗೌರಿ ಅಂತ್ಯಸಂಸ್ಕಾರ ನಡೆದಿತ್ತು ಎಂಬುವುದು ಇಲ್ಲಿ ಗಮನಾರ್ಹ.

Latest Videos
Follow Us:
Download App:
  • android
  • ios