ಹಿಂದಿ ಚಿತ್ರರಂಗದ ಬಹುಮುಖ ನಟ  ಪರೇಶ್ ರಾವಲ್ 64 ನೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೇ ವೇಳೆ ನರೇಂದ್ರ ಮೋದಿ ಪ್ರಮಾಣಕ್ಕೂ ಕ್ಷಣಗಣನೆ ಆರಂಭವಾಗಿದೆ.

ನವದೆಹಲಿ(ಮೇ. 30)  ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿರುವ ನನಗೆ ಇದೆ ದಿನ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ತೆಗೆದುಕೊಳ್ಳುತ್ತಿರುವುದು ದೊಡ್ಡ ಗಿಫ್ಟ್ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಜೀವನ ಆಧಾರಿತ ಚಿತ್ರದಲ್ಲಿಯೂ ರಾವಲ್ ಕಾಣಿಸಿಕೊಂಡಿದ್ದರು. ಟ್ವಿಟರ್ ನಲ್ಲಿ ಈ ಬಗ್ಗೆ ಖುಷಿ ಹಂಚಿಕೊಂಡಿರುವ ರಾವಲ್, ಇದೊಂದು ಅತ್ಯಂತ ಶುಭಕರ ದಿನ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ತೆಗೆದುಕೊಳ್ಲೂತ್ತಿರುವುದು ನನ್ನ ಜನ್ಮದಿನಕ್ಕೆ ಅತಿದೊಡ್ಡ ಗಿಫ್ಟ್ ಎಂದೇ ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿದೇಶಾಂಗ ಇಲಾಖೆ ಮಾಜಿ ಕಾರ್ಯದರ್ಶಿ ಜೈಶಂಕರ್‌ಗೆ ಸಚಿವ ಸ್ಥಾನ!

1985 ರಲ್ಲಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ರಾವಲ್ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರ ಜತೆ ಅಭಿನಯಿಸಿರುವ ಚಿತ್ರಗಳು ಸೂಪರ್ ಹಿಟ್ ಲಿಸ್ಟ್ ನಲ್ಲಿ ಇವೆ. ಲೋಕಸಭೆ ಸದಸ್ಯರಾಗಿಯೂ ರಾವಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.

Scroll to load tweet…