Hrithik Roshan Saba Azad ಭೇಟಿಯಾಗಿದ್ದು ಎಲ್ಲಿ? ಹೇಗೆ ಶುರುವಾಯಿತು ಪ್ರೀತಿ?
ಹೃತಿಕ್ ರೋಷನ್ (Hrithik Roshan) ಮತ್ತು ಸಾಬಾ ಆಜಾದ್ (Saba Azad) ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಪರಸ್ಪರರ ಕೈ ಹಿಡಿದುಕೊಂಡು ನಡೆದು ತಮ್ಮ ರೂಮರ್ಡ್ ರಿಲೆಷನ್‌ಶಿಪ್ ಅನ್ನು ಕನ್ಫರ್ಮ್ ಮಾಡಿದ್ದಾರೆ ಎಂಬ ಸುದ್ದಿಯಾಗಿದೆ. ಈ ಸಮಯದ ಅವರ ಫೋಟೋಗಳು ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.ಅಷ್ಟಕ್ಕೂ ಹೃತಿಕ್ ಹಾಗೂ ಸಬಾ ಮೊದಲು ಭೇಟಿಯಾಗಿದ್ದು ಎಲ್ಲಿ? ಹೇಗೆ ಶುರುವಾಯಿತು ಇವರ ಪ್ರೀತಿ?
ಹೃತಿಕ್ ರೋಷನ್ ಪಬ್ಲಿಕ್‌ನಲ್ಲಿ ತಮ್ಮ ರೂಮರ್ಡ್ ಗರಲ್‌ಫ್ರೆಂಡ್ ಸಾಬಾ ಅವರ ಕೈ ಹಿಡಿದು ನಡೆದ ಫೋಟೋಗಳು ಸಖತ್ ವೈರಲ್ ಆಗಿದೆ. ಅದೇ ಸಮಯದಲ್ಲಿ, ಬಾಲಿವುಡ್‌ನ ವದಂತಿಯ ದಂಪತಿಗಳು ಈ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಪ್ರಯತ್ನಿಸಿದ್ದಾರೆಯೇ ಎಂಬ ಅನುಮಾನಕ್ಕೂ ಇದು ಕಾರಣವಾಗಿದೆ?
ಹೃತಿಕ್ ರೋಷನ್ ಸಬಾ ಆಜಾದ್ ಅವರನ್ನು ಹೇಗೆ ಭೇಟಿಯಾದರು ಮತ್ತು ಅವರ ವದಂತಿಯ ಸಂಬಂಧ ಹೇಗೆ ಅರಳಿತು ಎಂಬುದರ ಕುರಿತು ಹಲವಾರು ವರದಿಗಳಿವೆ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಮೊದಲು ಟ್ವಿಟರ್‌ನಲ್ಲಿ ಭೇಟಿಯಾದರು ಮತ್ತು ನಂತರ ಪರಸ್ಪರರ ವೈಯಕ್ತಿಕ ಮೆಸೇಜಿಂಗ್ ಪ್ರಾಂರಭವಾಯಿತು ಎಂದು ಹಿಂದೆ ವರದಿಗಳು ಬಂದವು.
ಹೃತಿಕ್ ರೋಷನ್ ಸಬಾ ಆಜಾದ್ ಅವರು ಸ್ನೇಹಿತರ ಮೂಲಕ ಭೇಟಿಯಾದರು ಎಂದು ಮತ್ತೊಂದು ವರದಿ ಹೇಳುತ್ತದೆ. India Today.in ವರದಿ ಪ್ರಕಾರ 'ಹೃತಿಕ್ ರೋಷನ್ ಮತ್ತು ಸಬಾ ಮೊದಲು ಒಬ್ಬರನ್ನೊಬ್ಬರು ಇಂಡೀ ಮ್ಯೂಸಿಕ್‌ನ ಕಾಮನ್ ಫ್ರೆಂಡ್ ಮೂಲಕ ಭೇಟಿಯಾದರು. ಅವರ ಮೊದಲ ಭೇಟಿಯ ನಂತರ, ಹೃತಿಕ್ ಮತ್ತು ಸಬಾ ಅವರು ಸಂಪರ್ಕದಲ್ಲಿದ್ದಾರೆ ಮತ್ತು ಇತ್ತೀಚೆಗೆ ಡಿನ್ನರ್‌ಗೆ ಭೇಟಿಯಾದರು'.
ಹೃತಿಕ್ ಹಾಗೂ ಸಬಾ ಅವರು ಹೇಗೆ ಭೇಟಿಯಾದರು ಎಂಬುದರ ಕುರಿತು ಬಹಳಷ್ಟು ಹೇಳಲಾಗಿದ್ದರೂ ಮತ್ತು ಬರೆಯಲಾಗಿದ್ದರೂ, ಅದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ನಟಿಯಾಗುವ ಮೊದಲು, ಹೃತಿಕ್ ರೋಷನ್ ಅವರ ವದಂತಿಯ ಗೆಳತಿ, ಸಬಾ ಆಜಾದ್ ಅಸಾಧಾರಣ ಗಾಯಕಿ ಕೂಡ ಹೌದು. ಅವರು ಜನಪ್ರಿಯ ಬ್ಯಾಂಡ್ ಮ್ಯಾಡ್‌ಬಾಯ್/ಮಿಂಕ್‌ನ ಭಾಗವಾಗಿದ್ದಾರೆ ಮತ್ತು ದಿ ಬಾರ್ಟೆಂಡರ್ಸ್‌ನೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಮುಂಬೈ ಹಾಗೂ ದೇಶಾದ್ಯಂತ ಶೋಗಳನ್ನು ಕೊಡುತ್ತಾರೆ.
ವಾಸ್ತವವಾಗಿ, ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಸಬಾ ಆಜಾದ್ ಅವರ ಗಾಯನ ಪ್ರತಿಭೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಹೃತಿಕ್ ಮತ್ತು ಸಬಾ ನಂತರ, ಸುಸೇನ್ ಖಾನ್ ಕೂಡ ತನ್ನ ವದಂತಿಯ ಗೆಳೆಯ ಅರ್ಸ್ಲಾನ್ ಗೋನಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಜೋಡಿ ಕೂಡ ಪರಸ್ಪರ ಕೈ ಹಿಡಿದು ಏರ್‌ಪೋರ್ಟ್ ಹೊರಗೆ ಕಾಣಿಸಿಕೊಂಡರು.