ಹೃತಿಕ್ ರೋಷನ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಹೊಸ ಪೋಸ್ಟ್ ಡೇಟಿಂಗ್ ವಿಚಾರವನ್ನು ಬಹಿರಂಗ ಪಡಿಸಿದೆ. ಗಾಯಕಿ ಸಬಾ ಆಜಾದ್ ಜೊತೆ ಹೃತಿಕ್ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ.  

ಬಾಲಿವುಡ್ ಸ್ಟಾರ್, ಗ್ರೀಕ್ ಗಾಡ್ ಹೃತಿಕ್ ರೋಷನ್(Hrithik Roshan) ಮತ್ತೆ ಸುದ್ದಿಯಾಗಿದ್ದಾರೆ. ಹೃತಿಕ್ ಹೆಸರು ಈ ಬಾರಿ ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ ಎಂದು ಭಾವಿಸಬೇಡಿ. ಡೇಟಿಂಗ್, ಗರ್ಲ್ ಫ್ರೆಂಡ್ ವಿಚಾರವಾಗಿ. ಇದಕ್ಕೆ ಕಾರಣವಾಗಿದ್ದು ಹೃತಿಕ್ ಹಾಕಿರುವ ಹೊಸ ಪೋಸ್ಟ್. ಹೌದು, ಇನ್ಸ್ಟಾಗ್ರಾಮ್ ನಲ್ಲಿ ಹೃತಿಕ್ ಶೇರ್ ಮಾಡಿರುವ ಪೋಸ್ಟ್ ಡೇಟಿಂಗ್ ವಿಚಾರವನ್ನು ಬಹಿರಂಗ ಪಡಿಸಿದಂತಿದೆ.

ಅಂದಹಾಗೆ ಹೃತಿಕ್ ಜೊತೆ ಡೇಟಿಂಗ್ ಮಾಡುತ್ತಿರುವ ಆ ಸುಂದರಿ ಯಾರು ಎನ್ನುವ ಪ್ರಶ್ನೆ ಖಂಡಿತ ನಿಮ್ಮನ್ನು ಕಾಡುತ್ತಿರುತ್ತದೆ. ಅದು ಮತ್ಯಾರು ಅಲ್ಲ ಖ್ಯಾತ ಗಾಯಕಿ, ನಟಿ ಸಬಾ ಆಜಾದ್(Saba Azad). ಇವರಿಬ್ಬರು ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಕಳೆದ ವರ್ಷದಿಂದ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಅನುಮಾನಬರುವ ಹಾಗೆ ಎಲ್ಲಿಯೂ ನಡೆದುಕೊಂಡಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ ಇಬ್ಬರು ಒಟ್ಟಿಗೆ ಡಿನ್ನರ್ ಡೇಟ್ ನಲ್ಲಿ ಕಾಣಿಸಿಕೊಂಡು ಡೇಟಿಂಗ್ ಬಗ್ಗೆ ಸುಳಿವು ನೀಡಿದ್ದರು. ಬಳಿಕ ಈ ಜೋಡಿ ಆಗಾಗ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಅಂದಹಾಗೆ ಗಾಯಕಿ ಸಬಾ, ಹೃತಿಕ್ ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಅಲ್ಲದೆ ಹೃತಿಕ್ ಮಾಜಿ ಪತ್ನಿ ಸುಸ್ಸೇನ್ ಖಾನ್ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರ ನಡುವೆ ಸ್ನೇಹಕ್ಕೂ ಮಿಗಿಲಾದ ಸಂಬಂಧವಿದೆ ಎನ್ನುವ ಗುಸುಗುಸು ಕೇಳಿಬರುತ್ತಿತ್ತು. ಆದರೀಗ ಇದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಮೂಲಕ ಇಬ್ಬರ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪಷ್ಟಿನೀಡಿದ್ದಾರೆ.

Celebrity Lunch Date: ಕೇರಳದಲ್ಲಿ ಗರ್ಲ್‌ಫ್ರೆಂಡ್ ಜೊತೆ ಫುಡ್ ಎಂಜಾಯ್ ಮಾಡಿದ ಹೃತಿಕ್ ರೋಷನ್

ಸಬಾ ಸಂಗೀತ ಕಾರ್ಯಕ್ರಮದ ವಿಡಿಯವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಹಾಜರಾಗುವಂತೆ ಈ ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಪುಣೆಯಲ್ಲಿ ಸಂಗೀತ ಸಮಾರಂಭ ನಡೆಸಿಕೊಡುತ್ತಿದ್ದಾರೆ. ಸಬಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ವಿಡಿಯೋವನ್ನು ಹೃತಿಕ್ ಶೇರ್ ಮಾಡಿ, ಅದ್ಭುತವಾದ ಮಹಿಳೆ, ನಾನು ಅಲ್ಲೇ ಇದ್ದೇನೆ ಎಂದು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಅನ್ನು ಸಬಾ ಹಂಚಿಕೊಂಡಿದ್ದಾರೆ. ಜೊತೆಗೆ ನೀನು ಇಲ್ಲೇ ಇದ್ದೀಯಾ ಕ್ಯೂಟಿ ಎಂದು ಹೇಳಿದ್ದಾರೆ. ಇಬ್ಬರ ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಅಭಿಮಾನಿಗಳು ಡೇಟಿಂಗ್ ಮಾಡುತ್ತಿರುವುದು ಖಚಿತ ಎನ್ನುತ್ತಿದ್ದಾರೆ. ಅಲ್ಲದೆ ಇಬ್ಬರ ಪ್ರೀತಿ ವಿಚಾರವನ್ನು ಬಹಿರಂಗ ಗೊಳಿಸಲು ಹೀಗೆ ಪೋಸ್ಟ್ ಶೇರ್ ಮಾಡಿದ್ದಾರೆ ಎನ್ನುತ್ತಿದ್ದಾರೆ.

Jodha Akbhar: ಐಶ್ವರ್ಯಾ ಹೃತಿಕ್‌ ಚಿತ್ರಕ್ಕೆ ಆನೆಗಳನ್ನೂ ಆಡಿಷನ್‌ ಮಾಡಿದ್ರಂತೆ!

ಇತ್ತೀಚಿಗಷ್ಟೆ ಹೃತಿಕ್ ಮತ್ತು ಸಬಾ ಅವರ ಕಾಮನ್ ಫ್ರೆಂಡ್ ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ಸುಳಿವು ನೀಡಿದ್ದರು. ಹೃತಿಕ್ ಮತ್ತು ಸಬಾ ಆಜಾದ್ ಇಬ್ಬರು ಪ್ರೀಸುತ್ತಿದ್ದಾರೆ. ಹೃತಿಕ್ ಕುಟುಂಬ ಸಬಾ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೃತಿಕ್ ಅವರಂತೆ ಅವರ ಕುಟುಂಬದವರು ಸಹ ಸಬಾ ಅವರ ಸಂಗೀತ ಕಾರ್ಯಕ್ರಮಗಳನ್ನು ತುಂಬಾ ಇಷ್ಟ ಪಡುತ್ತಾರೆ ಎಂದು ಹೇಳಿದ್ದರು. ಸದ್ಯ ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಇಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಹೃತಿಕ್ ರೋಷನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ವಾರ್ ಸಿನಿಮಾದ ಬಳಿಕ ರೋಷನ್ ಮತ್ತೆ ತೆರೆಮೇಲೆ ಬಂದಿಲ್ಲ. ವಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಸದ್ಯ ಹೃತಿಕ್ ತಮಿಳಿನ ಸೂಪರ್ ಹಿಟ್ ವಿಕ್ರಮ್ ವೇದ ಸಿನಿಮಾದ ರಿಮೇಕ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಹೃತಿಕ್ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಕ್ರಿಶ್ 4, ವಾರ್ 2, ಫೈಟರ್ ಸಿನಿಮಾಗಳು ಹೃತಿಕ್ ಬಳಿ ಇವೆ.