Saba Azad ಜೊತೆ Hritik Roshan ರಿಲೆಷನ್‌ಶಿಪ್ ಕನ್ಫರ್ಮ್? ಏರ್‌ಪೋರ್ಟ್‌ನಲ್ಲಿ ಕೈಕೈ ಹಿಡಿದ ಕಪಲ್
ಹೃತಿಕ್ ರೋಷನ್ (Hritik Roshan) ಸಬಾ ಆಜಾದ್ (Saba Azad) ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಹಳ ದಿನಗಳಿಂದ ಹರಿದಾಡುತ್ತಿತ್ತು. ಈಗ ಈ ಸುದ್ದಿ ದೃಢಪಟ್ಟಿದೆಯಂತೆ. ನಟ ಮಂಗಳವಾರ ಸಬಾ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ. ಹೃತಿಕ್ ಸಾಬ ಅವರ ಹಿಡಿದ ಕೈ ಒಂದು ಕ್ಷಣವೂ ಕೈ ಬಿಡಲಿಲ್ಲ. ಅಷ್ಟೇ ಅಲ್ಲ, ಪಾಪರಾಜಿಗಳ ಮುಂದೆ ಇಬ್ಬರೂ ತುಂಬಾ ಕಂಫರ್ಟಬಲ್ ಆಗಿ ಕಾಣುತ್ತಿದ್ದರು. ಅವರ ಬಾಡಿ ಲಾಂಗ್ವೇಜ್ ನೋಡಿದಾಗ ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನಿಸಿತು. ಈ ಜೋಡಿಯ ಫೋಟೋ ಸಖತ್ ವೈರಲ್ ಆಗಿದೆ (Viral Photo of Hritik Roshan and Saba Azad).
ವಿಚ್ಛೇದನದ ನಂತರ ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ತಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದಾರೆ. ಹೃತಿಕ್ ಈಗ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅವರು ನಟಿ-ಸಂಗೀತಗಾರ್ತಿ ಸಬಾ ಆಜಾದ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ.
ಮಂಗಳವಾರ, ಈ ದಂಪತಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ನಡೆಯುತ್ತಿರುವುದು ಕಂಡುಬಂತು. ಮಾಸ್ಕ್ ಧರಿಸಿದ್ದರಿಂದ ಇಬ್ಬರ ಮುಖವೂ ಕಾಣಿಸಲಿಲ್ಲ. ಆದರೆ ಸಾಬಾ ನಗುತ್ತಿರುವುದು ಕಂಡುಬಂತು.
ಹೃತಿಕ್ ರೋಷನ್ ನೆಕ್ಸ್ಟ್ 'ವಿಕ್ರಮ್ ವೇದ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ, ಸೈಫ್ ಅಲಿ ಖಾನ್ ನಟನೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
Raveena
ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಥಿಯೇಟರ್‌ಗಳಲ್ಲಿ ಬರಲಿದೆ. ಹೀಗಿರುವಾಗ ಸ್ಟಾರ್ ತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರವೀನಾ ಟಂಡನ್, ಸಂಜಯ್ ದತ್ ಮತ್ತು ಶ್ರೀನಿಧಿ ಶೆಟ್ಟಿ ಮಂಗಳವಾರ ಕಾಣಿಸಿಕೊಂಡರು. ಪಿಎಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ ಅವರನ್ನು ಪಾಪರಾಜಿಗಳು ತುಂಬಾ ಗ್ಲಾಮರಸ್ ಆಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಕೆಜಿಎಫ್ 2 ನಲ್ಲಿ ಸಂಜಯ್ ದತ್ ಡೆಂಜರಸ್ ವಿಲನ್ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಅವರ ಲುಕ್ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಕಲರ್ ಫುಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.
ಅದೇ ಸಮಯದಲ್ಲಿ ಶ್ರೀನಿಧಿ ತುಂಬಾ ಸಿಂಪಲ್ ಆಗಿ ಸಿನಿಮಾ ಕೆಜಿಎಫ್ ಚಾಪ್ಟರ್ 2 ಪ್ರಚಾರಕ್ಕೆ ಬಂದಿದ್ದರು. ಇದರ ಹೊರತಾಗಿಯೂ, ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕೆಜಿಎಫ್ 2 ಅವರ ಚೊಚ್ಚಲ ಚಿತ್ರ.
ಬಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಜುಹುವಿನ ಸಲೂನ್‌ನ ಹೊರಗೆ ಕಾಣಿಸಿಕೊಂಡರು. ಅವರು ಸುಂದರವಾದದ ನೀಲಿ ಬಣ್ಣದ ಡೆನಿಮ್ ಉಡುಪನ್ನು ಧರಿಸಿದ್ದಳು. ಬಾಲ ಕಲಾವಿದೆಯಿಂದ ಕಿರುತೆರೆಗೆ ಕಾಲಿಟ್ಟ ಹನ್ಸಿಕಾ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ಹೆಸರು.
ಎಂದಿನಂತೆ, ಉರ್ಫಿ ಜಾವೇದ್ ವಿಮಾನ ನಿಲ್ದಾಣದಲ್ಲಿ ಅತ್ಯಂತ ಕಡಿಮೆ ಉಡುಪಿನಲ್ಲಿ ಕಾಣಿಸಿಕೊಂಡರು ಹಾಗೂ ಅವರು ಪಾಪರಾಜಿಗಳಿಗೆ ಸಖತ್ ಪೋಸ್ ನೀಡಿದರು. ಯಾವಾಗಲೂ ತನ್ನ ಬಟ್ಟೆಗಾಗಿ ಟ್ರೋಲ್‌ಗೆ ಗುರಿಯಾಗುವ ಉರ್ಫಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಡೆಬಿನಾ ಬ್ಯಾನರ್ಜಿ ಮತ್ತು ಗುಮ್ರೀತ್ ಚೌಧರಿ ತಮ್ಮ ಹೆಣ್ಣು ಮಗುವಿನೊಂದಿಗೆ ಕಾಣಿಸಿಕೊಂಡರು. ಡೆಬಿನಾ ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅವರು ಪಾಪರಾಜಿಗಳ ಮುಂದೆ ಪೋಸ್ ನೀಡಿದರು. ಆದರೆ ಮಗುವಿನ ಮುಖ ತೋರಿಸಲಿಲ್ಲ.