Netflix: ಭಯ ಹುಟ್ಟಿಸೋದು ಅಲ್ಲ… ಎದೆ ಒಡೆದು ಹೋಗುವಂತೆ ಮಾಡುವ ಭಯಾನಕ ಸಿನಿಮಾಗಳಿವು
Netflix Movies: ನೀವು ಹಾರರ್ ಸಿನಿಮಾಗಳನ್ನು ನೋಡಲು ಬಯಸಿದರೆ, ನೆಟ್ ಫ್ಲಿಕ್ಸ್ ನಲ್ಲಿ ಈ ವಾರ ಈ ಸಿನಿಮಾಗಳನ್ನು ನೋಡಬಹುದು. ಇದು ಭಯ ಹುಟ್ಟಿಸೋದು ಅಲ್ಲ, ನಿಮ್ಮ ಪ್ರತಿ ನರಗಳಲ್ಲೂ ಚಳಿ ಹುಟ್ಟುವಂತೆ ಮಾಡುವಂತಹ ಭಯಾನಕ ಸಿನಿಮಾಗಳು.

ಭಯಾನಕ ಸಿನಿಮಾಗಳು
ನೀವು ಭಯಾನಕ ಸಿನಿಮಾ ಪ್ರಿಯರಾಗಿದ್ರೆ ಇಲ್ಲಿದೆ ನಿಮ್ಮ ಎದೆ ನಡುಗಿಸುವಂತಹ ಭಯಾನಕ ಸಿನಿಮಾಗಳು. ಇವು ಭಯ ಹುಟ್ಟಿಸೋದು ಮಾತ್ರವಲ್ಲ, ನಿಮ್ಮ ಪ್ರತಿ ನರಗಳಲ್ಲೂ ಚಳಿ ಹುಟ್ಟುವಂತೆ ಮಾಡುತ್ತೆ. ಆ ಐದು ಸಿನಿಮಾಗಳು ಯಾವುವು ನೋಡೋಣ.
Heart Eyes (2025):
ಪ್ರೇಮಿಗಳ ದಿನದಂದು ಒಂಟಿಯಾಗಿರುವುದು ಕೆಟ್ಟದು, ಆದರೆ 'ಹಾರ್ಟ್ ಐಸ್ ಕಿಲ್ಲರ್'ಗೆ ಗುರಿಯಾಗುವುದು ಹೆಚ್ಚು ಅಪಾಯಕಾರಿ. ಮಾಸ್ಕ್ ಧರಿಸಿದ ಕಿಲ್ಲರ್ ವಾಲೆಂಟೈನ್ ದಿನ ಕಪಲ್ಸ್ ಗಳನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಾನೆ. ಜೊತೆಗೆ ಕೆಲಸ ಮಾಡುವ ಉದ್ಯೋಗಿಗಳು ಈ ಹಾರ್ಟ್ ಐಸ್ ಕಣ್ಣಿಗೆ ಜೋಡಿಗಳಂತೆ ಕಂಡಾಗ, ಏನೇನು ನಡೆಯುತ್ತೆ ಎನ್ನುವುದು ಸಿನಿಮಾ. ರೊಮ್ಯಾನ್ಸ್, ಹಾಸ್ಯ ಮತ್ತು ಕ್ಲಾಸಿಕ್ ಮಿಶ್ರಣದ ಸಿನಿಮಾ ಇದಾಗಿದೆ.
Time Cut (2024):
ಟೈಮ್ ಟ್ರಾವೆಲ್ ಕಥೆ ಹೊಂದಿರುವ ಸಿನಿಮಾ. ಲೂಸಿ ಫೀಲ್ಡ್ (ಬೈಲಿ) ತನ್ನ ಸಹೋದರಿ ಸಮ್ಮರ್ ಕೊಲೆಯಾದ 2003 ರ ವರ್ಷಕ್ಕೆ ಟೈಮ್ ಮಷೀನ್ ಬಳಸಿಕೊಂಡು ಟ್ರಾವೆಲ್ ಮಾಡುತ್ತಾಳೆ. ಮುಖವಾಡ ಧರಿಸಿದ ಕೊಲೆಗಾರನನ್ನು ತಡೆಯುವ ಪ್ರಯತ್ನದಲ್ಲಿ, ಅವಳು ತನ್ನ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಾಳೆ. ಮುಂದೇನಾಗುತ್ತದೆ ಎನ್ನುವುದು ಕಥೆ.
there is someone in the house (2021):
ಪ್ಯಾಟ್ರಿಕ್ ಬ್ರೈಸ್ ನಿರ್ದೇಶನದ ಸೀರಿಯಲ್ ಕಿಲ್ಲರ್ ಸಿನಿಮಾ ಇದಾಗಿದೆ. ಹೊಸ ನಗರಕ್ಕೆ ಟ್ರಾನ್ಸ್ಫರ್ ಆಗಿ ಬಂದ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತರನ್ನು ಮಾಸ್ಕ್ ಧರಿಸಿದ ವ್ಯಕ್ತಿ ಕೊಲೆ ಮಾಡುವುದನ್ನು ನೋಡಿದಾಗ ಏನಾಗುತ್ತದೆ , ಯಾಕೆ ಈ ಕೊಲೆಗಳು ನಡೆಯುತ್ತದೆ. ಆ ವಿದ್ಯಾರ್ಥಿನಿಯ ಸೀಕ್ರೆಟ್ ಏನು ಎಂಬುದು ಸಿನಿಮಾ.
Fear Street : From Queen (2025):
ಆರ್.ಎಲ್. ಸ್ಟೈನ್ ಅವರ ಫಿಯರ್ ಸ್ಟ್ರೀಟ್ ಸರಣಿಯ ಇತ್ತೀಚಿನ ಸೀರೀಸ್ ಇದು. ಇದು 1988 ರ ಕಥೆಯನ್ನು ಒಳಗೊಂಡಿದೆ. ಶ್ಯಾಡಿಸೈಡ್ ಹೈನ 1988 ರ ಪ್ರಾಮ್ ಕ್ವೀನ್ ಚುನಾವಣೆ ಮತ್ತು ಅಲ್ಲಿ ನಡೆಯುವ ಅಭ್ಯರ್ಥಿಗಳ ಹತ್ಯೆಯ ಕುರಿತಾದ ಕಥೆ ಇದು.
The Texas Chain Saw Massacre (2022):
ಈ ಸಿನಿಮಾವು ಟೆಕ್ಸಾಸ್‌ನ ಒಂದು ಗೋಸ್ಟ್ ಟೌನ್ ನಲ್ಲಿ ಲೆದರ್‌ಫೇಸ್‌ನೊಂದಿಗೆ ಮುಖಾಮುಖಿಯಾಗುತ್ತದೆ, ಅವನು ಒಬ್ಬ ಕುಖ್ಯಾತ ಸೀರಿಯಲ್ ಕಿಲ್ಲರ್ ಆಗಿದ್ದು, ಮಾನವ ಚರ್ಮದ ಮುಖವಾಡವನ್ನು ಧರಿಸುತ್ತಾನೆ. ಆತ ಯಾವ ರೀತಿಯೆಲ್ಲಾ ಪ್ರತಿಕಾರ ತೀರಿಸುತ್ತಾನೆ ಅನ್ನೋದು ಸಿನಿಮಾ ಕಥೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

