MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Raj Kapoorರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದ Nargis ಸುನಿಲ್ ದತ್‌ ಮದುವೆಯಾಗಿದ್ದು ಹೇಗೆ?

Raj Kapoorರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದ Nargis ಸುನಿಲ್ ದತ್‌ ಮದುವೆಯಾಗಿದ್ದು ಹೇಗೆ?

ನಟ ಸಂಜಯ್‌ ದತ್‌ (Sanjay Dutt) ಅವರ ತಾಯಿ ಬಾಲಿವುಡ್‌ನ ಪ್ರಸಿದ್ಧ ನಟಿ ನರ್ಗೀಸ್ ದತ್   (Nargis Dutt) ಅವರು 3 ಮೇ 1981 ರಂದು ನಿಧನರಾದರು.  ಅವರ ಪುಣ್ಯತಿಥಿಯಂದು ಸಂಜಯ್ ದತ್ ತನ್ನ ತಾಯಿಯನ್ನು ತುಂಬಾ ನೆನಪಿಸಿಕೊಳ್ಳುತ್ತಾರೆ. ಅವರು ತನ್ನ ತಾಯಿ ನರ್ಗೀಸ್‌ಗೆ ತುಂಬಾ ಹತ್ತಿರವಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ಗೆ ಕಾಲಿಡುವ ಮೂಲಕ ವಿಭಿನ್ನ ಐಡೆಂಟಿಟಿಯನ್ನು ಮೂಡಿಸಿಕೊಂಡಿದ್ದ ನರ್ಗೀಸ್ 'ಮದರ್ ಇಂಡಿಯಾ' ಚಿತ್ರದಲ್ಲಿನ ಅವರ ಅಭಿನಯ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಗಮನಸೆಳೆಯಿತು.  ನರ್ಗೀಸ್, ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರ ಪುಣ್ಯತಿಥಿಯಂದು ಅವರ ಜೀವನಕ್ಕೆ ಸಂಬಂಧಿಸಿದ ಕೆಲವು  ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ.

3 Min read
Author : Suvarna News
Published : May 03 2022, 05:56 PM IST
Share this Photo Gallery
  • FB
  • TW
  • Linkdin
  • Whatsapp
110

ಮದರ್‌ ಇಂಡಿಯಾ ಸಿನಿಮಾದ ಹೆಸರು ಕೇಳಿದಾಗ ಮೊದಲು ನೆನಪಾಗುವುದು ನರ್ಗೀಸ್ ದತ್ ಅವರ ಮುಖ. ಈ ಚಿತ್ರ ಆಸ್ಕರ್ ಪ್ರಶಸ್ತಿಯನ್ನು ತಲುಪಿತು. ಬಾಲಿವುಡ್‌ಗೆ ಬರುವ ಮೊದಲು ಈ ನಟಿಗೆ ಎರಡು ಹೆಸರುಗಳನ್ನು ಇಡಲಾಗಿತ್ತು. ಅವರ ಮುಸ್ಲಿಂ ತಾಯಿ ಅವರನ್ನು ಫಾತಿಮಾ ರಶೀದ್ ಎಂದು ಕರೆಯುತ್ತಿದ್ದರು. ಅದೇ ಸಮಯದಲ್ಲಿ, ಅವರ ಹಿಂದೂ ತಂದೆ ಅವರಿಗೆ ತೇಜಶ್ವಿರ್ ಉತ್ತಮ್ ಚಂದ್ ಮೋಹನ್ ಚಂದ್ ಎಂದು ಹೆಸರಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ನರ್ಗೀಸ್ ಅವರ ತಾಯಿ ಜಡ್ಡನ್ಬಾಯಿ ಅವರು ಆ ಸಮಯದಲ್ಲಿ ಹಿಂದಿ ಚಿತ್ರರಂಗದಲ್ಲಿ  ಪ್ರಸಿದ್ಧರಾಗಿದ್ದರು. ಅವರು ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದರು, ನಟಿಸುತ್ತಿದ್ದರು ಮತ್ತು  ಅವರು ಗಾಯಕಿಯೂ ಆಗಿದ್ದರು. ಸಿನಿಮಾ ನಿರ್ದೇಶನವನ್ನೂ ಮಾಡುತ್ತಿದ್ದರು. 

310

ನರ್ಗೀಸ್ ತನ್ನ ಐದನೇ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ‘ತಲಾಶ್-ಎ-ಹಕ್’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಕೆಲಸ ಮಾಡಿದ್ದರು. ಈ ಚಿತ್ರದ ನಂತರ ಅವರು ಬೇಬಿ ನರ್ಗೀಸ್ ಎಂದು ಪ್ರಸಿದ್ಧರಾದರು. 14 ನೇ ವಯಸ್ಸಿನಲ್ಲಿ, ಅವರು ಮೆಹಬೂಬ್ ಖಾನ್ ಅವರ ತಕ್ದೀರ್ ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.


 

410

ನರ್ಗೀಸ್ ಮತ್ತು ರಾಜ್ ಕಪೂರ್ ಜೋಡಿಯು ಬಾಲಿವುಡ್‌ಗೆ ಅನೇಕ ಉತ್ತಮ ಚಿತ್ರಗಳನ್ನು ನೀಡಿತು. ಆವಾರಾ, ಶ್ರೀ 420, ಚೋರಿ-ಚೋರಿ, ಆಹ್, ಬರ್ಸಾತ್, ಬೇವಾಫಾ, ಜಾನ್ ಪೆಹಚಾನ್ ಮುಂತಾದ ಚಿತ್ರಗಳನ್ನು ನೀಡುವ ಮೂಲಕ ಅವರು ಪ್ರಸಿದ್ಧರಾದರು. ಇವರಿಬ್ಬರ ಜೋಡಿ 10 ವರ್ಷಗಳ ಕಾಲ ಬೆಳ್ಳಿತೆರೆಯಲ್ಲಿ ಪ್ರಾಬಲ್ಯ ಮೆರೆದಿದೆ. ಅವರು 16 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರ ಪ್ರೇಮಕಥೆಯ ಚರ್ಚೆಗಳು ಇನ್ನೂ ಜನರ ಬಾಯಲ್ಲಿವೆ.

510

ಇದಲ್ಲದೇ ನರ್ಗೀಸ್ ಅನೇಕ ನಟರ ಜೊತೆ ಸ್ಮರಣೀಯ ಚಿತ್ರಗಳನ್ನು ನೀಡಿದ್ದರು. ಮದರ್ ಇಂಡಿಯಾ, ಅಂದಾಜ್, ದೀದರ್, ಮೇಳ ಇವರಲ್ಲಿ ಸೇರಿದ್ದಾರೆ. ಅವರು ಅತ್ಯುತ್ತಮ ನಟಿಯಿಂದ ಹಿಡಿದು ಅನೇಕ ಪ್ರಶಸ್ತಿಗಳನ್ನು ಪಡೆದರು. ನರ್ಗೀಸ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.ಈ ಗೌರವಕ್ಕೆ ಪಾತ್ರರಾದ ಮೊದಲ ನಟಿ ಅವರು.


 

610

19 ನೇ ವಯಸ್ಸಿನಲ್ಲಿ, ರಾಜ್ ಕಪೂರ್‌ಗಾಗಿ ನರ್ಗೀಸ್ ಹೃದಯ ನೀಡಿದರು. ಆ ಸಮಯದಲ್ಲಿ ರಾಜ್ ಕಪೂರ್ ಮದುವೆಯಾಗಿ ಮಕ್ಕಳಿದ್ದರು. ಆದರೆ ನಟಿ ನೀಲಿ ಕಣ್ಣಿನ ರಾಜ್ ಕಪೂರ್‌ಗೆ ಮನ ಸೋತಿದ್ದರು ಮತ್ತು ರಾಜ್ ಕಪೂರ್ ಜೊತೆ 10 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಆದರೆ ನಂತರ ಅವರು ರಾಜ್ ಕಪೂರ್  ಮದುವೆ ಗೆ ಒಪ್ಪದ ಕಾರಣ ಈ ಸಂಬಂಧವು ಮುಂದುವರಿಯುವುದಿಲ್ಲ ಎಂದು ಅವರು ಭಾವಿಸಲು ಪ್ರಾರಂಭಿಸಿದರು. 


 

710

ಮೆಹಬೂಬ್ ಖಾನ್ ಅವರ ಮದರ್ ಇಂಡಿಯಾ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರದಲ್ಲಿ ಸುನೀಲ್ ದತ್ ಇದ್ದರು. ಸಿನಿಮಾದ ಒಂದು ದೃಶ್ಯದಲ್ಲಿ  ಸಿಜವಾಗಲೂ ಬೆಂಕಿ ಹತ್ತಿಕೊಂಡು ನರ್ಗೀಸ್  ಅವರನ್ನು ರಕ್ಷಿಸುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಸುನೀಲ್ ದತ್ ಬೆಂಕಿಗೆ ಹಾರಿ ಅವರನ್ನು ಹೊರಗೆ ತರುತ್ತಾರೆ. ಈ ವೇಳೆ ಅವರೂ ಸುಟ್ಟು ಕರಕಲಾದರು. ಇದಾದ ನಂತರ ನರ್ಗೀಸ್‌ಗೆ ತನಗೆ ಬೆಲೆ ಕೊಡುವವರು ಇದ್ದಾರೆ ಎಂದು ಅನಿಸಿತು. ನಂತರ, ಅವರು ರಾಜ್ ಕಪೂರ್ ಜೊತೆಗಿನ ಸಂಬಂಧವನ್ನು ಮುರಿದು ಸುನೀಲ್ ದತ್‌ಗೆ ಜೊತೆಯಾದರು. 

810

ಆಕೆ ನನ್ನ ಜೊತೆ ಬರುತ್ತಿದ್ದಾಗ ಚಪ್ಪಲಿ ಹಾಕುತ್ತಿರಲಿಲ್ಲ. ಏಕೆಂದರೆ ನಾವು ಎತ್ತರದಲ್ಲಿ ಸಮಾನರಾಗಿದ್ದೇವೆ. ಒಮ್ಮೆ ಅವಳು ನನ್ನನ್ನು ಭೇಟಿಯಾಗಲು ಬಂದಾಗ, ಅವಳು ಹೈ ಹೀಲ್ಸ್ ಧರಿಸಿದ್ದಳು. ನಾನು 20 ನಿಮಿಷಗಳ ಕಾಲ ಚಪ್ಪಲಿಯನ್ನು ನೋಡಿದೆ ಎಂದು ಹೇಳಿದರು ರಾಜ್ ಕಪೂರ್.  ಒಮ್ಮೆ ಅವಳು ಗುಜರಾತ್‌ನಲ್ಲಿ ಮದರ್ ಇಂಡಿಯಾ ಚಿತ್ರೀಕರಣದಲ್ಲಿದ್ದಾಗ, ಅವಳ ಡ್ರೈವರ್ ನನ್ನ ಬಳಿಗೆ ಬಂದು ಮೇಡಂ ಹೈ ಹೀಲ್ಸ್ ಮತ್ತು ಹಾರ್ಮೋನಿಯಂ ಕೇಳಿದ್ದಾರೆ ಎಂದು ಹೇಳಿದಾಗ ಅವಳ ಜೀವನದಲ್ಲಿ ಎತ್ತರದ ಯಾರೋ ಒಬ್ಬರು ಬಂದಿದ್ದಾರೆಂದು ನನಗೆ ಅರ್ಥವಾಯಿತು ಎಂದು ರಾಜ್‌ಕುಮಾರ್‌ ಹೇಳಿದ್ದರು. ಸುನಿಲ್ ದತ್ ಆರು ಅಡಿ ಇದ್ದರು.


 

910

ಹೀಗೆ ನರ್ಗೀಸ್ ಮತ್ತು ರಾಜ್ ಕಪೂರ್ ಅವರ ಪ್ರೀತಿ ಕೊನೆಗೊಂಡಿತು ಮತ್ತು ಸುನೀಲ್ ದತ್ ಮತ್ತು ನರ್ಗೀಸ್ ನಡುವೆ ಸಂಬಂಧವು ಪ್ರಾರಂಭವಾಯಿತು. 11 ಮಾರ್ಚ್ 1958 ರಂದು ಸುನೀಲ್ ದತ್ ಮತ್ತು ನರ್ಗೀಸ್ ಆರ್ಯಸಮಾಜದ ವಿಧಿವಿಧಾನಗಳ ಪ್ರಕಾರ ವಿವಾಹವಾದರು. ಆ ಸಮಯದಲ್ಲಿ ನರ್ಗೀಸ್ ಟಾಪ್ ನಟಿಯಾಗಿದ್ದು, ಸುನೀಲ್ ದತ್ ಕಷ್ಟಪಡುತ್ತಿದ್ದರು. ಆದರೆ ಮದುವೆಯ ನಂತರ, ನಟಿ ತನ್ನ ಐಷಾರಾಮಿ ಬಿಟ್ಟು ಸುನೀಲ್ ದತ್ ಜೊತೆ ವಾಸಿಸಲು ಪ್ರಾರಂಭಿಸಿದರು. ಅವರು ತುಂಬಾ ಸಂತೋಷವಾಗಿದ್ದರು

1010

ನರ್ಗೀಸ್ ಮತ್ತು ಸುನೀಲ್ ದತ್ ಅವರಿಗೆ ಸಂಜಯ್ ದತ್, ಪ್ರಿಯಾ ದತ್ ಮತ್ತು ನಮ್ರತಾ ದತ್ ಎಂಬ ಮೂವರು ಮಕ್ಕಳಿದ್ದಾರೆ. ನರ್ಗೀಸ್ ಸಂಜಯ್ ದತ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಸಂಜಯ್ ಕೂಡ ತನ್ನ ತಾಯಿಯ ಮೇಲೆ ತನ್ನ ಪ್ರಾಣವನ್ನು ಬೀಡುತ್ತಿದ್ದರು. ಆದರೆ ತಾಯಿ ಮಗನ ಜೊತೆ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಕ್ಯಾನ್ಸರ್ ನರ್ಗಿಸ್ ದತ್ ಅವರ ಜೀವನವನ್ನು ಕಿತ್ತುಕೊಂಡಿತು.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಕೆಜಿಎಫ್ ರೇಂಜ್‌ನಲ್ಲಿ ನಟಿ ಟಬುಗೆ ಎಲಿವೇಶನ್: ನಾಗಾರ್ಜುನ ಜೊತೆ ರೊಮ್ಯಾನ್ಸ್ ಬಿಟ್ಟು ವಾರ್ ಶುರು!
Recommended image2
ಗ್ಲಾಮರ್‌ ಲುಕ್‌ ಬಿಟ್ಟು ಸಂಪ್ರದಾಯಸ್ಥ ಮಹಿಳೆಯಾದ ಶ್ರೀಲೀಲಾ: ‘ಓಂ’ನಲ್ಲಿ ರೋಜಾ ಮ್ಯಾಜಿಕ್‌
Recommended image3
'ರಾಮಾಯಣ: ಪಾರ್ಟ್ 2' ಸಿನಿಮಾ 2027ರ ಬದಲು 2028ಕ್ಕೆ ಬಿಡುಗಡೆ; ಈ ನಿರ್ಧಾರದ ಹಿಂದಿದೆ ಜಗತ್ತು ಅರಿಯದ ಮಹಾ ತಂತ್ರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved