ಪತ್ನಿಗೆ ಕ್ಯಾನ್ಸರ್ ಇದ್ದಾಗ ಗರ್ಲ್ ಫ್ರೆಂಡ್ ಜೊತೆ ಬ್ಯುಸಿ, ತಾಯಿ ಸತ್ತಾಗ ಡ್ರಗ್ಸ್‌ಗೆ ಭಿಕ್ಷೆ..
ಜುಲೈ 29, 1959 ರಂದು ಮುಂಬೈನಲ್ಲಿ ಜನಿಸಿದ ಬಾಲಿವುಡ್ ನಟ ಸಂಜಯ್ ದತ್‌ಗೆ 61 ವರ್ಷದ ಸಂಭ್ರಮ. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಸಂಜಯ್ ಲೈಫ್ ವಿವಾದಗಳಿಂದ ತುಂಬಿದೆ. ಸುಮಾರು 308 ಗರ್ಲ್‌ಫ್ರೆಂಡ್ಸ್ ಹೊಂದಿದ್ದರು. ಜೊತೆಗೆ ಬಾಂಬ್ ಬ್ಲಾಸ್ಟ್ ಪ್ರಕರಣ ಹಾಗೂ ಡ್ರಗ್ಸ್ ಚಟಗಳು ಈ ನಟನ ಜೀವನಕ್ಕೆ ಅಂಟಿದ ಕಳಂಕಗಳು. ಅವರ ಬಯೋಪಿಕ್ 'ಸಂಜು' ನಟನ ಜೀವನದ ಏರಿಳಿತಗಳನ್ನು ತೋರಿಸುತ್ತದೆ. ಸಂಜಯ್ ಲೈಫ್‌ಗೆ ಸಂಬಂಧಿಸಿದ ಕೆಲವು ಕಥೆಗಳು ಇಲ್ಲಿವೆ.
ಬಾಲ್ಯದಿಂದಲೂ, ಸಂಜಯ್‌ಗೆ ಯಾವುದೇ ಕೊರತೆ ಇರಲಿಲ್ಲ ಪೋಷಕರು ಇಬ್ಬರೂ ಬಾವಿವುಡ್‌ನ ಖ್ಯಾತ ನಟ, ನಟಿಯರು. ಇಬ್ಬರೂ ಪೋಷಕರು ತಮ್ಮ ವೃತ್ತಿಜೀವನದಲ್ಲಿ ಎಲ್ಲರಂತೆಯೇ ಬ್ಯುಸಿ ಇರುತ್ತಿದ್ದರು.
ಸಂಜಯ್ ಕಾಲೇಜು ದಿನಗಳಲ್ಲಿ ದುಷ್ಟರ ಸಹವಾಸದಿಂದ ಗಾಂಜಾ ಮತ್ತು ಮಾದಕ ವಸ್ತುಗಳ ಸೇವನೆ ಚಟಕ್ಕೆ ಬಿದ್ದರು. ಮೊದಲಿನಿದಂದಲೂ ಓದುವುದರಲ್ಲಿ ನಿರಾಸಕ್ತರಾಗಿದ್ದರೂ, ತಂಡೆಯ ಒತ್ತಾಯಕ್ಕೆ ಡಿಗ್ರಿ ಮುಗಿಸಿದರು.
ತಂದೆ ಸುನಿಲ್ ದತ್‌ಗೆ ಮಗನ ಡ್ರಗ್ಸ್ ಆಡಿಕ್ಷನ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ಆದರೆ ತಾಯಿ ನರ್ಗಿಸ್‌ಗೆ ತಿಳಿದಾಗ ಸಂಜಯ್ ತನ್ನನ್ನು ಕೋಣೆಯಲ್ಲಿ ಬಂಧಿಸಿಡಲು ಪ್ರಾರಂಭಿಸಿದರು.
ಪತಿ ಸುನಿಲ್ ದತ್‌ಗೆ ವಿಷಯ ತಿಳಿಸಲಿಲ್ಲ. ಸಂಜಯ್‌ನನ್ನು ತನ್ನ ಪ್ರೀತಿಯಿಂದ ಮತ್ತು ತನ್ನದೇ ಆದ ರೀತಿಯಲ್ಲಿ ದಾರಿಗೆ ತರಬಹುದೆಂದು ಅವಳು ಭಾವಿಸಿದಳು. ಆದರಿದು ಸತ್ಯವಾಗಲೇ ಇಲ್ಲ.
ತನ್ನ ಪ್ರೀತಿಯ ಮಗನನ್ನು ಮಾದಕ ವ್ಯಸನದಿಂದ ಮುಕ್ತವಾಗಿಸಲು ಬಂಧಿಸಲಾಗಿದೆ ಎಂದು ತಿಳಿದಾಗ ಸುನಿಲ್ ದತ್‌ಗೆ ದೊಡ್ಡ ಆಘಾತವಾಯಿತು. ಮಗನನ್ನು ಕೆಲಸದಲ್ಲಿ ಬ್ಯುಸಿಯಾಗಿಡಲು ಪ್ರಾರಂಭಿಸಿದರು. ಇದರಿಂದ ಮಗನ ಕೆಟ್ಟ ಚಟ
ಬಿಡುತ್ತದೆ ಎಂದು ನಂಬಿದ್ದರು.
ಡೆಬ್ಯೂ ಸಿನಿಮಾದ ಬಗ್ಗೆ ಮಾತಾನಾಡಲು ಒಂದು ದಿನ ಸಂಜಯ್‌ಗೆ ತಮ್ಮ ಆಫೀಸ್‌ಗೆ ಕರೆದಿದ್ದರು. ಆ ಸಮಯದಲ್ಲಿ ಸಹ, ಸಂಜಯ್ ನಶೆಯಲ್ಲಿದ್ದರು. ಆಗಲೇ ಮಗನನ್ನು ಆ ಸ್ಥಿತಿಯಲ್ಲಿ ನೋಡಿದ್ದು ಅಪ್ಪ ಸಂಜಯ್ ದತ್.
ಒಂದು ಕಡೆ ಸಂಜಯ್ ಮೊದಲ ಚಿತ್ರಕ್ಕಾಗಿ ತಯಾರಿ ನಡೆಸುವಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನರ್ಗಿಸ್ ದತ್ ಆರೋಗ್ಯ ಹದಗೆಡಲು ಪ್ರಾರಂಭಿಸಿತು.
1981 ರಲ್ಲಿ ಸಂಜಯ್ ಫಸ್ಟ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮೇ 8 ರಂದು ನಿಗದಿಪಡಿಸಿದ ಸಮಯದಲ್ಲಿ ನರ್ಗಿಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಒಂದು ಕಡೆ, ಸುನಿಲ್ ಸೇರಿದಂತೆ ಇಡೀ ಕುಟುಂಬ ನರ್ಗಿಸ್‌ರ ಆರೋಗ್ಯ ಕುರಿತು ಆತಂಕದಲ್ಲಿದ್ದರೆ, ಮಗನ ಡ್ರಗ್ಸ್ ಚಟದ ಬಗ್ಗೆ ನರ್ಗಿಸ್ ಚಿಂತಿತರಾಗಿದ್ದರು.
ನರ್ಗಿಸ್ ತನ್ನ ಮಗನ ಚೊಚ್ಚಲ ಚಿತ್ರವನ್ನು ವೀಕ್ಷಿಸಬಹುದು ಎಂಬ ಕಾರಣಕ್ಕಾಗಿ ಪ್ರೀಮಿಯರ್ ಶೋಗಾಗಿ ಸುನಿಲ್ ದತ್ ಮನೆಯಲ್ಲಿ ಒಂದು ಥಿಯೇಟರ್ ನಿರ್ಮಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟು ಮತ್ತೊಂದು ಕೋಣೆಯಲ್ಲಿ ಮಲಗಿಸಲಾಯಿತು.
ತಾಯಿಯ ಸಾವಿಗಾಗಿ ಅಳುವ ಬದಲು, ಸಹೋದರಿ ಪ್ರಿಯಾ ದತ್‌ರ ಮುಂದೆ ಚರಸ್‌ಗಾಗಿ ಬೇಡಿಕೆ ಇಟ್ಟಿದ್ದರು ಎಂದರೆ ಆ ಸಮಯ ಸಂಜಯ್‌ದತ್ ಯಾವ ಸ್ಥಿತಿಯಲ್ಲಿದ್ದರು ಊಹಿಸಬಹುದು.ಅವರಿಗೆಮನೆಯಲ್ಲಿ ಏನು ನಡೆಯುತ್ತಿದೆ, ಎಂದು ತಿಳಿದಿರಲಿಲ್ಲ.
ಹೆಂಡತಿ ಸಾವಿನ ದುಃಖ ಮತ್ತು ಮತ್ತೊಂದೆಡೆ ಮಗನ ಸ್ಥಿತಿಯಿಂದ ಸುನಿಲ್ ಸಂಪೂರ್ಣವಾಗಿ ಕುಸಿದಿದ್ದರು. ನಂತರ ತಡ ಮಾಡದೆ ಫಾರಿನ್ ಡಾಕ್ಟರ್‌ಗಳ ಜೊತೆ ಮಾತಾನಾಡಿ, ಟ್ರೀಟ್‌ಮೆಂಟ್‌ಗಾಗಿ ಮಗನನ್ನು ಮೊದಲು ಜರ್ಮನಿಗೆ ನಂತರ ಅಮೆರಿಕಕ್ಕೆ ಕರೆದೊಯ್ದರು.
ಚಿಕಿತ್ಸೆಯ ನಂತರ, ಸಂಜಯ್‌ಗೆ ತಾಯಿ ತೀರಿಕೊಂಡ ವಿಷಯ ತಿಳಿದಾಗ ತುಂಬಾ ಅತ್ತಿದ್ದರು. ತಾಯಿ ಈಗ ಜಗತ್ತಿನಲ್ಲಿ ಇಲ್ಲ ಎಂದು ನಂಬಲಾಗದೆ, ನಾಲ್ಕು ದಿನಗಳವರೆಗೆ ನಿರಂತರವಾಗಿ ಅಳುತ್ತಿದರಂತೆ ಮುನ್ನಬಾಯಿ ನಟ.