Namrata shirodkar Personal Life: ತನಗಿಂತ ಕಿರಿಯ ನಟನ ಮದುವೆಯಾದ ನಮ್ರತಾ ಲೈಫ್‌ಸ್ಟೈಲ್ ಹೇಗಿದೆ ನೋಡಿ!
ನಮ್ರತಾ ಶಿರೋಡ್ಕರ್ (Namrata shirodkar)ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ತಮ್ಮ ನಟನೆಯ ಮೂಲಕ ಜನರ ಹೃದಯವನ್ನು ಗೆದ್ದರು. 1993ರಲ್ಲಿ ಮಿಸ್ ಇಂಡಿಯಾ ಆದ ನಮ್ರತಾ ಇಂದು ಸಿನಿಮಾಗಳಿಂದ ದೂರವಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. 22 ಜನವರಿ 1977 ರಂದು ಮುಂಬೈನಲ್ಲಿ ಜನಿಸಿದ ನಮ್ರತಾ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅವರು ಹಿರಿತೆರೆಗೆ ವಿದಾಯ ಹೇಳಿದರು. ನಟಿಯ ಜೀವನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿಯೋಣ.
90ರ ದಶಕದ ಖ್ಯಾತ ರೂಪದರ್ಶಿ ಹಾಗೂ ನಟಿ ನಮ್ರತಾ ಶಿರೋಡ್ಕರ್ ಇಂದು ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ದಕ್ಷಿಣ ಭಾರತದ ಉದ್ಯಮದ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಜೀವನದ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸಿನಿಮಾವೊಂದರ ಸಂದರ್ಭದಲ್ಲಿ ಮಹೇಶ್ ಬಾಬು ಅವರನ್ನು ಭೇಟಿಯಾದರು. ನಂತರ ಪ್ರೀತಿಸಿ ಮದುವೆಯಾದರು. ಮದುವೆ ನಂತರ ನಮ್ರತಾ ಸಿನಿಮಾಗಳಿಗೆ ಗುಡ್ ಬೈ ಹೇಳಿದ್ದಾರೆ.
ನಮ್ರತಾ ಶಿರೋಡ್ಕರ್ ಅವರು 'ಜಬ್ ಪ್ಯಾರ್ ಕಿಸಿ ಸೇ ಹೋತಾ ಹೈ' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಟ್ವಿಂಕಲ್ ಖನ್ನಾ ಸಹ ನಟಿಸಿದ್ದಾರೆ. ಆದರೆ, ಸಿನಿಮಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.
ಆದರೆ ನಮ್ರತಾ ಅವರ ನಟನೆಯನ್ನು ಹೆಚ್ಚು ಮೆಚ್ಚಗೆ ಗಳಿಸಿತು.ಅವರಿಗೆ ಚಲನಚಿತ್ರಗಳಿಗೆ ಆಫರ್‌ಗಳು ಬರಲಾರಂಭಿಸಿದವು. ಈ ಚಿತ್ರದ ನಂತರ, ನಟಿ ತೆಲುಗು ಚಿತ್ರ ವಂಶಿಯಲ್ಲಿ ಕೆಲಸ ಮಾಡಿದರು. ಇದರಲ್ಲಿ ಮಹೇಶ್ ಬಾಬು ಮುಖ್ಯ ಭೂಮಿಕೆಯಲ್ಲಿದ್ದರು. ವಂಶಿ ಮಹೇಶ್ ಬಾಬು ಅವರ ಮೊದಲ ಸಿನಿಮಾವಾಗಿತ್ತು.
ಮೊದಲ ಸಿನಿಮಾದಲ್ಲೇ ಮಹೇಶ್ ಬಾಬು ನಮ್ರತಾಗೆ ಮನಸೋತಿದ್ದರು. ನಟಿ ಮಹೇಶ್ ಬಾಬು ಅವರಿಗಿಂತ ನಾಲ್ಕು ವರ್ಷ ದೊಡ್ಡವರು. ಇದರ ಹೊರತಾಗಿಯೂ, ಮಹೇಶ್ ಬಾಬು ನಮ್ರತಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಇಬ್ಬರ ಸ್ನೇಹದಿಂದ ಶುರುವಾದ ಕಥೆ ನಂತರ ಪ್ರೀತಿಗೆ ತಿರುಗಿತ್ತು.
ನಮ್ರತಾ 'ವಾಸ್ತವ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಅವರೊಂದಿಗಿನ ಅವರ ಕೆಮಿಸ್ಟ್ರಿ ಅದ್ಭುತವಾಗಿತ್ತು. ಸೌಂದರ್ಯದ ಜೊತೆಗೆ ನಮ್ರತಾ ಅವರ ಸರಳತೆಯನ್ನೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.ಈ ಸಿನಿಮಾದ ನಂತರ ನಮ್ರತಾ ಬಾಕ್ಸ್ ಆಫೀಸ್‌ಗೆ ಹಲವು ಹಿಟ್ ಚಿತ್ರಗಳನ್ನು ನೀಡಿದರು. ಇವುಗಳಲ್ಲಿ ಪುಕಾರ್, ಹೇರಾ ಫೇರಿ, ಆಸ್ತಿತ್ವ, ಕಚ್ಚೆ ಧಾಗೆ, ತೇರಾ ಮೇರಾ ಸಾಥ್ ರಹೇ, ಹೀರೋ ಹಿಂದೂಸ್ತಾನಿ ಮತ್ತು LOC ಕಾರ್ಗಿಲ್ ಸೇರಿವೆ.
4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಬ್ಬರೂ 10 ಫೆಬ್ರವರಿ 2005 ರಂದು ವಿವಾಹವಾದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರ ನಮ್ರತಾ ಚಿತ್ರರಂಗದಿಂದ ದೂರವಾದರು.
ನಮ್ರತಾ ಈಗ ತನ್ನ ಎಲ್ಲಾ ಸಮಯವನ್ನು ಗಂಡ ಮತ್ತು ಮಕ್ಕಳಿಗಾಗಿ ಮೀಸಲಿಡುತ್ತಾರೆ. ನಮ್ರತಾ ಮತ್ತು ಮಹೇಶ್ ಬಾಬು ಮಗ ಗೌತಮ್ ಮತ್ತು ಮಗಳು ಸಿತಾರಾ ಅವರೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.