ಪತಿಯ ಸಿನಿಮಾಗಳನ್ನು ನೋಡೋದೇ ಇಲ್ಲ ಮಹೇಶ್ ಬಾಬು ಪತ್ನಿ
ಈ ಟಾಪ್ ಸೌತ್ ಸ್ಟಾರ್‌ನ ಪತ್ನಿ ಪತಿಯ ಸಿನಿಮಾಗಳನ್ನೇ ನೋಡಲ್ಲ | ಪತಿಯ ಸಿನಿಮಾ ನೋಡಿದ್ರೆ ಸ್ಟ್ರೆಸ್ ಆಗುತ್ತೆ ಎಂದ ನಮೃತಾ
ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್ ತನ್ನ ಪ್ರೀತಿಯನ್ನು ಪಡೆಯೋಕೆ ಸುಮಾರು 5 ವರ್ಷ ಕಾಯಬೇಕಾಗಿ ಬಂದಿತ್ತು.
ಫ್ಯಾನ್ಸ್ ಮಹೇಶ್ ಬಾಬುನನ್ನು ತೆರೆ ಮೇಲೆ ನೋಡಲು ಥ್ರಿಲ್ ಆಗಿದ್ರೆ ಪತ್ನಿ ಮಾತ್ರ ಪತಿಯ ಸಿನಿಮಾಗಳನ್ನೇ ನೋಡಲ್ಲ.
ಕುಟುಂಬದವರೆಲ್ಲ ಮಹೇಶ್ ಸಿನಿಮಾ ನಾರ್ಮಲ್ ಜನರಂತೆ ನೋಡ್ತಾರೆ. ಆದ್ರೆ ನನಗದು ತುಂಬಾ ಸ್ಟ್ರೆಸ್ ಫುಲ್ ಎಂದಿದ್ದಾರೆ ನಮೃತಾ
ನಾನು ಮನೆಯಲ್ಲಿ ಕೂತು ಉಗುರು ಕಚ್ಚುತ್ತಿರುತ್ತೇನೆ. ಈ ಮೊದಲ ಸಿನಿಮಾದಂತೆ ಇದೂ ಹಿಟ್ ಆಗಲಿ ಎಂದು ಪ್ರಾರ್ಥಿಸುತ್ತೇನೆ. ಮಹೇಶ್ ನನಗೆ ಚಿಲ್ ಅಗಿರುವಂತೆ ಹೇಳ್ತಾರೆ, ಆದ್ರೆ ನನಗಾಗುವುದಿಲ್ಲ ಎಂದಿದ್ದಾರೆ ನಮೃತಾ.
ನಾನು ನನ್ನ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ಪಾತ್ರಗಳನ್ನು ಕೇಳಿ ಹೋಗಿಲ್ಲ, ಯಾವ ನಿರ್ದೇಶಕರಲ್ಲೂ ಸಹಿ ಮಾಡಿಸ್ಕೊಂಡಿಲ್ಲ ಎಂದಿದ್ದಾರೆ.
ಸಂಜಯ್ ದತ್ ಜೊತೆ ವಾಸ್ತವ್, ಅನಿಲ್ ಕಪೂರ್ ಜೊತೆ ಪುಕಾರ್, ಸಲ್ಮಾನ್ ಖಾನ್ ಜೊತೆ ಜಬ್ ಪ್ಯಾರ್ ಕಿಸೀ ಸೆ ಹೋತಾ ಹೆಯಂತಹ ದೊಡ್ಡ ಸಿನಿಮಾ ಮಾಡಿದ್ದೇನೆ. ಅವರ ಯಶಸ್ಸನ್ನು ಪಡೆಯಲು ನಾನು ಪ್ರಯತ್ನಿಸಲೇ ಇಲ್ಲ ಎಂದಿದ್ದಾರೆ.
ನಾನು ಬಾಕ್ಸ್ ಆಫೀಸ್ ಬಗ್ಗೆ ತಲೆಕಡಿಸಿಕೊಂಡಿಲ್ಲ. ನನ್ನ ಪತಿಯ ಕೆರಿಯರ್ ಬಗ್ಗೆಯೇ ಹೆಚ್ಚು ಆಸಕ್ತಿ ಎಂದಿದ್ದಾರೆ.
ಮಹೇಶ್ ಬಾಬುನ ಮದುವೆಯಾಗಲು ಸಿನಿಮಾ ಕೆರಿಯರ್ ಖುಷಿ ಖುಷಿಯಾಗಿ ಬಿಟ್ಟುಕೊಟ್ಟೆ. ಕಳೆದ 14 ವರ್ಷದಲ್ಲಿ ಒಮ್ಮೆಯೂ ಈ ಬಗ್ಗೆ ಪಶ್ಚಾತಾಪವಾಗಿಲ್ಲ ಎಂದಿದ್ದಾರೆ ನಮೃತಾ