ಹಿಂದಿ ಚಿತ್ರರಂಗದ ಹೆಸರಾಂತ ನಟಿ, ತೆಲುಗು ಸ್ಟಾರ್ ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಅಗಿದ್ದಾರೆ. ಆದರೆ, ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ನೆಟ್ಟಿಗರ ಕಾಮೆಂಟ್‌ ನೋಡಿ ಬೇಸತ್ತು, ಕಾಮೆಂಟ್‌ ಲಿಮಿಟ್ ಮಾಡಿದ್ದಾರೆ. ಕಾಮೆಂಟ್ಸ್‌ ಸುರಿಮಳೆ ಹೆಚ್ಚಾಗಲು ಕಾರಣವೇನು?

'ಡ್ರಗ್ಸ್ ತಗೊಂಡಿದ್ದೀನಿ ಅಂದ್ರೂ NCB ಯಾಕೆ ಕಂಗನಾಳನ್ನು ಅರೆಸ್ಟ್ ಮಾಡಿಲ್ಲ' ..? 

WhatsApp ಅವಾಂತರ:
ಬಾಲಿವುಡ್‌ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಆತ್ಮಹತ್ಯೆಗೆ ಶರಣಾದ ನಟ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಆಗಲೇ ಬಂಧಿಸಲಾಗಿದೆ. ಅಲ್ಲದೇ ಕ್ವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಹಾನನ್ನೂ ಸಹ ಸಿಸಿಬಿ ಬಂಧಿಸಿದ್ದು, ಅವರೊಂದಿಗೆ ವಾಟ್ಸಾಪ್‌ ಚಾಟ್‌ನಲ್ಲಿ ನಟಿ ನಮ್ರತಾ ಹೆಸರೂ ಸೇರಿಕೊಂಡಿತ್ತು. ಈ ಕಾರಣಕ್ಕೆ ನಟ್ಟಿಗರು ಅದರಲ್ಲೂ ಮಹೇಶ್‌ ಬಾಬು ಅಭಿಮಾನಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಸೋಮವಾರ (ಸೆಪ್ಟೆಂಬರ್ 21) ಮನೆಯಲ್ಲಿ ಪೈಜಾಮಾ ಧರಿಸಿ ಟೇಬಲ್ ಮೇಲೆ ಕುಳಿತಿದ್ದ ಫೋಟೋ ಶೇರ್ ಮಾಡಿಕೊಂಡ ನಮ್ರತಾಗೆ 'ಮನೆಯಲ್ಲಿ ಸೋಮಾರಿ ಆಗಿದ್ದರೂ ಒಳ್ಳೆ ಲುಕ್‌ ಕಾಪಾಡಿಕೊಳ್ಳುವುದು ಕಷ್ಟವಲ್ಲ!' ಎಂದು ಪೋಸ್ಟ್ ಮಾಡಿಕೊಂಡಿದ್ದರು. ಇದಕ್ಕೆ ನೆಟ್ಟಿಗರು ಡ್ರಗ್ಸ್ ವಿಚಾರದ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿದ್ದರು. 'ಬೇರೆಲ್ಲಾ ನಟಿಯರು ಓಕೆ, ಕೋಟಿ ಸಂಪಾದಿಸುವ ಪತಿ ಇದ್ದರೂ ಜುಜುಬಿ ಹಣಕ್ಕಾಗಿ ದಂಧೆಯಲ್ಲಿ ನೀವೂ ಇದ್ದೀರಾ, ಅಂದ್ರೆ ನಮಗೆ ಶಾಕ್‌ ಆಗುತ್ತಿದೆ,' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ.

ಡ್ರಗ್ಸ್ ಘಾಟು; ದೀಪಿಕಾ, ಸಾರಾ, ಶ್ರದ್ಧಾ ಸೇರಿ ಮತ್ತೊಬ್ಬ ತಾರೆಗೆ NCB ಸಮನ್ಸ್!

ಸದ್ಯ ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿರುವ ರಿಯಾ ತಮ್ಮೊಟ್ಟಿಗೆ ಸಂಪರ್ಕದಲ್ಲಿದ್ದ ನಮ್ರತಾ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬೈಗೆ ಆಗಮಿಸಿದ್ದಾಗ ಸಿಂತೆಟಿಕ್ ಡ್ರಗ್ಸ್ ಬಗ್ಗೆ ಕೇಳಿದ್ದರಂತೆ. ಅಲ್ಲದೇ ನಮ್ರತಾ ಹೆಸರನ್ನು 'ಎನ್‌' ಎಂದು ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಅಡ್ಡ ದಾರಿ ಹಿಡಿದ ನಟ-ನಟಿಯರ ಹೆಸರುಗಳು ಡ್ರಗ್ಸ್ ದಂಧೆಯಲ್ಲಿ ಕೇಳಿ ಬರುತ್ತಿವೆ. ಅವರು ಆ ದಾರಿ ಹಿಡಿಯುವುದಕ್ಕೆ ಕಾರಣವೇನು? ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ವಿಚಾರಣೆಯಿಂದ ತಿಳಿದು ಬರಬೇಕಿದೆ.

ಈಗಾಗಲೇ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸೈಫ್-ಅಮೃತಾ ಸಿಂಗ್ ಮಗಳು ಸಾರಾ ಆಲಿ ಖಾನ್ ಸೇರಿ ಕೆಲವರಿಗೆ ಕೇಂದ್ರೀಯ ಮಾದಕ ವಸ್ತು ದಳ ನೋಟಿಸ್ ಜಾರಿಗೊಳಿಸಿದೆ.