MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಒಬ್ಬರೇ ನೋಡುವ ಧೈರ್ಯ ಇದ್ದರೆ ಮಾತ್ರ ಮಲಯಾಳಂನ ಈ ಹಾರರ್ ಸಿನಿಮಾಗಳನ್ನ ನೋಡಿ

ಒಬ್ಬರೇ ನೋಡುವ ಧೈರ್ಯ ಇದ್ದರೆ ಮಾತ್ರ ಮಲಯಾಳಂನ ಈ ಹಾರರ್ ಸಿನಿಮಾಗಳನ್ನ ನೋಡಿ

Malayalam Horror Movies : ನೀವು ಹಾರರ್ ಮೂವೀಸ್ ಅಭಿಮಾನಿಯಾಗಿದ್ದರೆ, ನಿಮ್ಮನ್ನು ಭಯದಿಂದ ನಡುಗಿಸುವಂತಹ ಅತ್ಯುತ್ತಮ ಮಲಯಾಳಂ ಚಲನಚಿತ್ರಗಳ ಲಿಸ್ಟ್ ಇಲ್ಲಿದೆ. ಕೆಲವು ಹಾರರ್ ಜೊತೆಗೆ ಕಾಮಿಡಿ ಮಾಡಿದ್ರೆ, ಮತ್ತೆ ಕೆಲವು ಸಿನಿಮಾಗಳು ಎದೆ ನಡುಗಿಸುತ್ತವೆ. ಈ ಲಿಸ್ಟಲ್ಲಿ ಯಾವೆಲ್ಲಾ ಸಿನಿಮಾಗಳಿವೆ ನೋಡಿ.

2 Min read
Author : Pavna Das
Published : Oct 15 2026, 07:46 PM IST
Share this Photo Gallery
  • FB
  • TW
  • Linkdin
  • Whatsapp
17
ಭೂತಕಾಲಂ
Image Credit : Google

ಭೂತಕಾಲಂ

ಭೂತಕಾಲಂ ರಾಹುಲ್ ಸದಾಶಿವನ್ ನಿರ್ದೇಶನದ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ, ಶೇನ್ ನಿಗಮ್ ಮತ್ತು ರೇವತಿ ನಟಿಸಿದ್ದಾರೆ. ಅ ಈ ಚಲನಚಿತ್ರವು ಖಿನ್ನತೆಯ ಹಿನ್ನೆಲೆಯಲ್ಲಿ, ತಾಯಿ ಮತ್ತು ಮಗನ ನಡುವಿನ ಸಂಬಂಧದ ಸುತ್ತ ಹೆಣೆಯಲ್ಪಟ್ಟಿದೆ. ಇದು ವಾಸ್ತವಿಕ ಸನ್ನಿವೇಶಗಳು, ಧ್ವನಿ ವಿನ್ಯಾಸ ಮತ್ತು ಸಸ್ಪೆನ್ಸ್ ಅಂಶಗಳಿಂದ ಕೂಡಿದ್ದು, ಎದೆಯಲ್ಲಿ ನಡುಕ ಹುಟ್ಟಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಎರ್ಜಾ
Image Credit : Google

ಎರ್ಜಾ

ಜಯಕೃಷ್ಣನ್ ನಿರ್ದೇಶನದ ಪೃಥ್ವಿರಾಜ್ ಮತ್ತು ಪ್ರಿಯಾ ಆನಂದ್ ನಟಿಸಿರುವ ಹಾರರ್ ಸಿನಿಮಾ ಇದಾಗಿದೆ. ಪ್ರಿಯಾ ಮತ್ತು ಅವಳ ಪತಿ ರಂಜನ್ ಹೊಸ ಮನೆಗೆ ಶಿಫ್ಟ್ ಆಗಿರುತ್ತಾರೆ. ಒಂದು ದಿನ ಶಾಪಿಂಗ್ ಮಾಡುವಾಗ, ಪ್ರಿಯಾ ತನ್ನ ಮನೆಗೆ ಪ್ರಾಚೀನ ಪೆಟ್ಟಿಗೆಯೊಂದನ್ನ ತರುತ್ತಾಳೆ.ಅದನ್ನ ತಂದ ಬಳಿಕ ಅವರ ಜೀವನದಲ್ಲಿ ಭಯಾನಕ ಘಟನೆಗಳು ನಡೆಯಲು ಶುರು ಮಾಡುತ್ತದೆ. ಮುಂಏನಾಗುತ್ತದೆ ಎನ್ನುವ ಕುತೂಹಲ ಇದ್ದರೆ ಸಿನಿಮಾ ನೋಡಬೇಕು.

Related Articles

Related image1
Must-Watch Malayalam Movies: ಈ ಮಲಯಾಳಂ ಸಿನಿಮಾಗಳನ್ನ ನೋಡದೆ ಇದ್ರೆ ಏನೋ ಮಿಸ್ ಮಾಡಿಕೊಳ್ತೀರಿ
Related image2
Malayalam Movies on OTT: ಮಲಯಾಳಂ ಸಿನಿಮಾ ಪ್ರಿಯರೇ? ಹಾಗಿದ್ರೆ ನೀವು OTTಯಲ್ಲಿ ಈ ಸಿನಿಮಾ ನೋಡಿ
37
ಬ್ರಹ್ಮಯುಗಂ
Image Credit : Google

ಬ್ರಹ್ಮಯುಗಂ

'ಬ್ರಹ್ಮಯುಗಂ' ಒಂದು ಮಲಯಾಳಂ ಹಾರಾರ್ ಸಿನಿಮಾ. ಇದರಲ್ಲಿ ಮಮ್ಮುಟ್ಟಿ 'ಕೊಡುಮೋನ್ ಪೊಟ್ಟಿ' ಎಂಬ ದುಷ್ಟ ಮಾಂತ್ರಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರ್ಜುನ್ ಅಶೋಕನ್ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ರಾಹುಲ್ ಸದಾಶಿವನ್ ನಿರ್ದೇಶಿಸಿರುವ ಈ ಚಿತ್ರವು, 17ನೇ ಶತಮಾನದ ಮಲಬಾರ್ ಪ್ರದೇಶದ ಜಾನಪದ ಕಥೆಗಳು ಮತ್ತು ಮಾಟಮಂತ್ರಗಳ ಹಿನ್ನೆಲೆಯನ್ನು ಹೊಂದಿದೆ.

47
ಪ್ರಕಂಪನಂ
Image Credit : Google

ಪ್ರಕಂಪನಂ

'ಪ್ರಕಂಪನಂ' 2026ರ ಜನವರಿಯಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಹಾರರ್-ಕಾಮಿಡಿ ಸಿನಿಮಾ. ಇದು ಹಾಸ್ಟೆಲ್‌ನಲ್ಲಿ ವಾಸಿಸುವ ಸ್ನೇಹಿತರ ಗುಂಪೊಂದರ ಸುತ್ತ ಹೆಣೆಯಲಾದ ಕಥೆ. ವಿಜೇಶ್ ಪನತೂರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಾಗರ್ ಸೂರ್ಯ ಮತ್ತು ಮಲ್ಲಿಕಾ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

57
ಸರ್ವಂ ಮಾಯಾ
Image Credit : Google

ಸರ್ವಂ ಮಾಯಾ

ಅಖಿಲ್ ಸತ್ಯನ್ ನಿರ್ದೇಶನದ ಮಲಯಾಳಂ ಚಲನಚಿತ್ರವಾಗಿದ್ದು, ಇದರಲ್ಲಿ ನಿವಿನ್ ಪೌಲಿ ಮತ್ತು ರಿಯಾ ಶಿಬು ನಟಿಸಿದ್ದಾರೆ. ನಾಸ್ತಿಕನಾದ ಒಬ್ಬ ಸಂಗೀತಗಾರನು ತನ್ನ ಊರಿಗೆ ಮರಳಿದಾಗ, ಅವನಿಗೆ ಒಂದು ನಿಗೂಢ ಆತ್ಮದ ಪರಿಚಯವಾಗುತ್ತದೆ. ಈ ಘಟನೆಯು ಅವನ ಜೀವನವನ್ನೇ ಬದಲಾಯಿಸುವುದಲ್ಲದೆ, ಪ್ರೀತಿಯ ಬಗೆಗಿನ ಅವನ ಅನುಭವವನ್ನೂ ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಇದೊಂದು ಸುಂದರವಾದ ಫೀಲ್ ಗುಡ್ ಮೂವಿ.

67
ವಡಕ್ಕನ್
Image Credit : Google

ವಡಕ್ಕನ್

'ವಡಕ್ಕನ್' ಮಲಯಾಳಂನ ಹಾರರ್-ಥ್ರಿಲ್ಲರ್ ಚಿತ್ರ. ಕಿಶೋರ್ ಮತ್ತು ಶ್ರುತಿ ಮೆನನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ಪ್ರಾಚೀನ ಜಾನಪದ ಮತ್ತು 'ತೆಯ್ಯಂ' ಸಂಪ್ರದಾಯದಲ್ಲಿ ಬೇರೂರಿರುವ ನಿಗೂಢ ಕಥೆಯನ್ನು ಪ್ರಸ್ತುತಪಡಿಸುವ ಕಥೆ ಹೊಂದಿರುವ ಸಿನಿಮಾ.

77
ನೆಲ್ಲಿಕಂಪೋಯಿಲ್ ನೈಟ್ ರೈಡರ್ಸ್
Image Credit : Google

ನೆಲ್ಲಿಕಂಪೋಯಿಲ್ ನೈಟ್ ರೈಡರ್ಸ್

ಒಂದು ಮಲಯಾಳಂ ಹಾರರ್-ಕಾಮಿಡಿ ಚಲನಚಿತ್ರವಾಗಿದೆ. ಒಂದು ಹಳ್ಳಿ ಮತ್ತು ರಾತ್ರಿಯ ವೇಳೆ ಸುತ್ತಾಡುವ ಸ್ನೇಹಿತರ ಗುಂಪಿನ ಸುತ್ತ ಕಥೆ ಸಾಗುತ್ತದೆ; ಇದು ಹಾರರ್ , ರೊಮ್ಯಾನ್ಸ್ ಮತ್ತು ಜಾನಪದ ಕಥೆಯನ್ನು ಹೇಳುತ್ತದೆ. ನೌಫಲ್ ಅಬ್ದುಲ್ಲಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮ್ಯಾಥ್ಯೂ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮಲಯಾಳಂ ಸಿನಿಮಾ
ಸಿನಿಮಾ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
 

Latest Videos
Recommended Stories
Recommended image1
ಜಪಾನ್‌ನಿಂದ ದುಬೈವರೆಗೆ ರಜನಿಕಾಂತ್ ಫೀವರ್: 'ಜೈಲರ್ 2'ಗೋಸ್ಕರ ಪಟಾಕಿ ಸಿಡಿಸಿ ಫ್ಯಾನ್ಸ್ ಸಂಭ್ರಮ!
Recommended image2
ಹಿನಾ ಖಾನ್‌ನಿಂದ ತಾಹಿರಾ ಕಶ್ಯಪ್‌ವರೆಗೆ.. ಸ್ತನ ಕ್ಯಾನ್ಸರ್ ಗೆದ್ದ 7 ಬಾಲಿವುಡ್ ನಟಿಯರಿವರು!
Recommended image3
ಸಾಯಿ ಪಲ್ಲವಿಗೆ ಇದುವರೆಗೂ ಯಾರೂ ಪ್ರಪೋಸ್ ಮಾಡಿಲ್ವಾ? ನಟಿಯೇ ಬಿಚ್ಚಿಟ್ರು ಆ ರಹಸ್ಯ!
Related Stories
Recommended image1
Must-Watch Malayalam Movies: ಈ ಮಲಯಾಳಂ ಸಿನಿಮಾಗಳನ್ನ ನೋಡದೆ ಇದ್ರೆ ಏನೋ ಮಿಸ್ ಮಾಡಿಕೊಳ್ತೀರಿ
Recommended image2
Malayalam Movies on OTT: ಮಲಯಾಳಂ ಸಿನಿಮಾ ಪ್ರಿಯರೇ? ಹಾಗಿದ್ರೆ ನೀವು OTTಯಲ್ಲಿ ಈ ಸಿನಿಮಾ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved