- Home
- Entertainment
- Cine World
- Must-Watch Malayalam Movies: ಈ ಮಲಯಾಳಂ ಸಿನಿಮಾಗಳನ್ನ ನೋಡದೆ ಇದ್ರೆ ಏನೋ ಮಿಸ್ ಮಾಡಿಕೊಳ್ತೀರಿ
Must-Watch Malayalam Movies: ಈ ಮಲಯಾಳಂ ಸಿನಿಮಾಗಳನ್ನ ನೋಡದೆ ಇದ್ರೆ ಏನೋ ಮಿಸ್ ಮಾಡಿಕೊಳ್ತೀರಿ
ಮಲಯಾಳಂ ಸಿನಿಮಾಗಳು ಹೃದಯಕ್ಕೆ ಹತ್ತಿರವಾಗಿರುತ್ತೆ. ಇಲ್ಲಿದೆ ನೋಡಿ ಮನಸಿಗೆ ಹಿತ ನೀಡುವ ನೀವು ನೋಡಲೇಬೇಕಾದ ಕನ್ನಡ ಸಿನಿಮಾಗಳು.

ನೀವು ಫ್ರೆಶ್ ಫೀಲ್ ಕೊಡುವ, ಮನಸ್ಸನ್ನು ನಿರಾಳಗೊಳಿಸುವ ಸಿನಿಮಾಗಳನ್ನು ನೋಡಲು ಇಷ್ಟಪಟ್ಟರೆ ಇಲ್ಲಿದೆ ನೀವು ನೋಡಬೇಕಾದ ಸಿನಿಮಾಗಳ ಲಿಸ್ಟ್.
ಓಂ ಶಾಂತಿ ಓಶಾನ
ನಿವಿನ್ ಪೌಲಿ ಮತ್ತು ನಸ್ರಿಯಾ ನಾಝಿಮ್ ನಟನೆಯ ಸಿನಿಮಾ ಇದು. ಬಾಲ್ಯದ ಕ್ರಶ್ ಅನ್ನೆ ಮದುವೆಯಾಗುವಲ್ಲಿವರೆಗಿನ ಕಥೆ. ಈ ಸಿನಿಮಾವನ್ನು ಎಷ್ಟು ಸಲ ನೋಡಿದರೂ ಬೋರ್ ಹೊಡೆಸೋದೆ ಇಲ್ಲ.
ಹೋಮ್
ಪುಟ್ಟ ಕುಟುಂಬದ ಸುಂದರವಾದ ಕಥೆ ಹೋಮ್. ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡದ ಅಪ್ಪನ ಕೈಗೆ ಮೊಬೈಲ್ ಬಂದಾಗ ಏನೇನು ಆಗುತ್ತೆ. ಇದರಿಂದ ಮಗನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ. ಮಗ ನಂತರ ಅಪ್ಪನನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾನೆ ಅನ್ನೋದು ಕಥೆ. ಇಂದ್ರನ್ಸ್, ಶ್ರೀನಾಥ್ ಬಾಸಿ ಸಿನಿಮಾದಲ್ಲಿ ನಟಿಸಿದ್ದಾರೆ.
ಆನಂದಂ
ಇದು ಕಾಲೇಜು ವಿದ್ಯಾರ್ಥಿಗಳ ಟ್ರಾವೆಲ್ ಕಥೆ. ಹಂಪಿಗೆ ಕಾಲೇಜು ಟೂರಿಗೆ ಬರುವ ವಿದ್ಯಾರ್ಥಿಗಳು ಯಾವ ರೀತಿ ಎಂಜಾಯ್ ಮಾಡ್ತಾರೆ. ತಮ್ಮ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಅನ್ನೋದು ಕಥೆ.
ಬೆಂಗಳೂರು ಡೇಸ್
ಇದು ಬೆಂಗಳೂರಿನಲ್ಲಿ ಸೇರುವ ಮೂವರು ಕಸಿನ್ಸ್ ಗಳ ಕಥೆ. ಒಬ್ಬೊಬ್ಬರ ಕಥೆ ಒಂದೊಂದು ರೀತಿಯಲ್ಲಿ ಸಾಗುತ್ತದೆ. ಮೂವರ ಜೀವನದ ಸುಂದರ ಜರ್ನಿ ಬೆಂಗಳೂರು ಡೇಸ್ (Bangalore Days). ಸಿನಿಮಾದಲ್ಲಿ ಫಾಹದ್ ಫಾಜಿಲ್, ನಜ್ರಿಯಾ ನಾಝೀಮ್, ನಿವಿನ್ ಪೌಲಿ, ದುಲ್ಖರ್ ಸಲ್ಮಾನ್, ಪಾರ್ವತಿ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಪ್ರೇಮಾಲು
ಇದು ಸಿಂಪಲ್ ಆಗಿ ಒಂದು ಮಧುರ ಪ್ರೇಮ ಕಾವ್ಯ. ಪೂರ್ತಿಯಾಗಿ ನಿಮ್ಮನ್ನು ನಕ್ಕು ನಗಿಸುವ ಸಿನಿಮಾ ಇದು. ಎಲ್ಲೂ ಬೋರ್ ಹೊಡೆಸದೆ, ಹೆಚ್ಚು ತಲೆ ಕೆಡಿಸುವಂತೆ ಮಾಡದೆ, ಮಜವಾಗಿ ಸಾಗುತ್ತೆ ಈ ಸಿನಿಮಾ. ಮಮಿತಾ ಬೈಜು (Mamitha Baiju) ಮತ್ತು ನಸ್ಲೀನ್ ಕೆ ಗಫೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಉಸ್ತಾದ್ ಹೋಟೇಲ್
ತಂದೆಯ ಮಾತಿಗೆ ವಿರುದ್ಧ ಹೋಗಿ ಹೊಟೇಲ್ ಮ್ಯಾನೇಜ್ ಮೆಂಟ್ ಕಲಿತ ಯುವಕ ತನ್ನ ಅಜ್ಜನ ಜೊತೆ ಸೇರಿ ಮುಂದೆ ಏನು ಮಾಡುತ್ತಾನೆ ಅನ್ನೋದು ಚಿತ್ರದ ಕಥೆ. ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ನಿತ್ಯಾ ಮೆನನ್ ನಟಿಸಿದ್ದಾರೆ.
ಪ್ರೇಮಂ
ನಿವಿನ್ ಪೌಲಿ ಹಾಗೂ ಸಾಯಿ ಪಲ್ಲವಿ ಅಭಿನಯದ ನವಿರಾದ ಸುಂದರ ಪ್ರೇಮ ಕಥೆಯ ಸಿನಿಮಾ ಪ್ರೇಮಂ (Premam). ಈ ಚಿತ್ರದಲ್ಲಿ ಕಾಲೇಜಿನ ಕಥೆಯೂ ಇದೆ. ಬಾಲ್ಯದಿಂದ ಯೌವ್ವನಕ್ಕೆ ಯಾವ ರೀತಿ ಪ್ರೀತಿ ಬದಲಾಗುತ್ತದೆ ಎನ್ನುವ ಕಥೆಯೂ ಇದೆ.
ಕುಂಬಳಂಗಿ ನೈಟ್ಸ್
ಫಾಹದ್ ಫಾಝಿಲ್ (Fahad Fazil), ಶೌಬೀನ್ ಶಾಹೀರ್, ಶೇನ್ ನಿಗಮ್, ಶ್ರೀನಾಥ್ ಬಾಸಿ, ಮ್ಯಾಥ್ಯೂ ಥೋಮಸ್ ನಟನೆಯ ಸಿನಿಮಾ ಸಖತ್ ಮನರಂಜನೆ ನೀಡುತ್ತೆ. ಒಬ್ಬರಿಗೊಬ್ಬರು ಕಂಡರೆ ಆಗದ ಸಹೋದರರನ್ನು ಕೊನೆಗೆ ಸಂದರ್ಭ ಹೇಗೆ ಒಂದು ಮಾಡುತ್ತೆ ಅನ್ನೋದು ಸಿನಿಮಾ ಕಥೆ.
ಚಾರ್ಲಿ
ದುಲ್ಖರ್ ಸಲ್ಮಾನ್ ಮತ್ತು ಪಾರ್ವತಿ ಮೆನನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಜೀವನದ ನಿಜವಾದ ಅರ್ಥವನ್ನು ತಿಳಿಸುವ ಸಿನಿಮಾ ಚಾರ್ಲಿ.