2023ರಲ್ಲಿ ಅತ್ಯಧಿಕ ಕೋಟಿ ಗಳಿಸಿದ ಸಿನಿಮಾ ಇದು; ಜವಾನ್, ಗದರ್-2, ಜೈಲರ್ ಯಾವ್ದೂ ಅಲ್ಲ!
2023ರಲ್ಲಿಯೂ ಸೌತ್ ಹಾಗೂ ಬಾಲಿವುಡ್‌ನ ಹಲವು ಸಿನಿಮಾಗಳು ಕೋಟಿ ಕೋಟಿ ಗಳಿಕೆ ಮಾಡಿದೆ. ಇದರಲ್ಲಿ ಪಠಾಣ್, ಜೈಲರ್, ಜವಾನ್, ಲಿಯೋ ಮೊದಲಾದ ಸಿನಿಮಾಗಳು ಸೇರಿವೆ. ಆದರೆ 2023ರಲ್ಲಿ ಹೈಯೆಸ್ಟ್ ಗಳಿಸಿದ ಸಿನಿಮಾ ಇವೆರಡೂ ಅಲ್ಲ. ಮತ್ತೆ ಯಾವುದು?
2020 ಮತ್ತು 2021ರಲ್ಲಿ ಕೋವಿಡ್ ಸಾಂಕ್ರಾಮಿಕವು ಭಾರತೀಯ ಚಿತ್ರರಂಗ ಸಂಪೂರ್ಣ ನೆಲಕಚ್ಚಲು ಕಾರಣವಾಯಿತು. ಆ ನಂತರದ ವರ್ಷಗಳಲ್ಲಿ ಹಲವು ಸಿನಿಮಾಗಳು ಸೂಪರ್‌ಹಿಟ್ ಆಗಲು ಆರಂಭಿಸಿದವು. 2022ರಲ್ಲಿ RRR ಮತ್ತು KGF ಅಧ್ಯಾಯ 2ನಂಥಾ ಸಿನಿಮಾಗಳು ಬಾಕ್ಸಾಫೀಸಲ್ಲಿ ಅಕ್ಷರಶಃ
ಅಬ್ಬರಿಸಿದವು.
2023ರಲ್ಲಿಯೂ ಸೌತ್ ಹಾಗೂ ಬಾಲಿವುಡ್‌ನ ಹಲವು ಸಿನಿಮಾಗಳು ಕೋಟಿ ಕೋಟಿ ಗಳಿಕೆ ಮಾಡಿದೆ. ಇದರಲ್ಲಿ ಪಠಾಣ್, ಜೈಲರ್, ಜವಾನ್, ಲಿಯೋ ಮೊದಲಾದ ಸಿನಿಮಾಗಳು ಸೇರಿವೆ. ಆದರೆ 2023ರಲ್ಲಿ ಹೈಯೆಸ್ಟ್ ಗಳಿಸಿದ ಸಿನಿಮಾ ಇವೆರಡೂ ಅಲ್ಲ ಅನ್ನೋದು ಗೊತ್ತಿದ್ಯಾ? ಬದಲಿಗೆ ಅತೀ ಕಡಿಮೆ ಬಜೆಟ್ ಹಾಕಿದ ಸಿನಿಮಾವೊಂದು 2023ರ ಅತ್ಯಂತ ಲಾಭದಾಯಕ ಚಲನಚಿತ್ರವಾಗಿದ.
ಸುದೀಪ್ತೋ ಸೇನ್ ಅವರ 'ದಿ ಕೇರಳ ಸ್ಟೋರಿ' 2023ರ ಸೂಪರ್ ಹಿಟ್ ಸಿನಿಮಾವಾಗಿದೆ. ಕಳೆದ ವರ್ಷ ದಿ ಕಾಶ್ಮೀರ್ ಫೈಲ್ಸ್‌ನಂತೆಯೇ, ಈ ಚಲನಚಿತ್ರವನ್ನು ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾಯಿತು. ಆದರೆ ಸಾಕಷ್ಟು ವಿವಾದ, ವಾಗ್ವಾದಗಳ ಮಧ್ಯೆಯೇ ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಸೂಪರ್‌ಹಿಟ್ ಆಯಿತು ಈ ಚಿತ್ರವನ್ನು ಕೇವಲ 15 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗಿದೆ.
ಆದರೆ ಸಿನಿಮಾದ ಒಟ್ಟು ಕಲೆಕ್ಷನ್ (ತೆರಿಗೆಗಳನ್ನು ಕಡಿತಗೊಳಿಸಿದ ನಂತರ) 250 ಕೋಟಿ ರೂ ಮೀರಿದೆ. ಎಂದರೆ ಇದು ಚಿತ್ರಕ್ಕೆ ಖರ್ಚು ಆಗಿರುವ ವೆಚ್ಚಕ್ಕಿಂತ 1500% ರಷ್ಟು ಹೆಚ್ಚಳವಾಗಿದೆ. ಯಾವುದೇ ಪ್ರಮುಖ ಚಿತ್ರಗಳು ಸಹ ಅದಕ್ಕೆ ಹಾಕಿರೋ ಬಜೆಟ್‌ನ್ನು ನೋಡಿದರೆ ಆ ಸಂಖ್ಯೆಯ ಒಂದು ಭಾಗವನ್ನು ಸಹ ಕಲೆಕ್ಷನ್ ಮಾಡಿಲ್ಲ.
ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವೆಂದರೆ ಶಾರುಖ್ ಖಾನ್ ಅವರ ಜವಾನ್. ಈ ಚಿತ್ರವು ವಿಶ್ವಾದ್ಯಂತ ಸುಮಾರು 1150 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ ನಿರ್ಮಾಣದ ಬಜೆಟ್ 900 ಕೋಟಿ ರೂಪಾಯಿಗಳಷ್ಟಿದೆ. ಇದು ಚಿತ್ರಕ್ಕೆ ಅದರ 300 ಕೋಟಿ ಬಜೆಟ್‌ಗಿಂತ 200% ಲಾಭವನ್ನು ನೀಡುತ್ತದೆ.
ಅದೇ ರೀತಿ, ಶಾರುಖ್ ಅವರ ವರ್ಷದ ಇನ್ನೊಂದು ಬಿಡುಗಡೆ ಪಠಾಣ್ 240% ಲಾಭವನ್ನು ನಿರ್ವಹಿಸಿದೆ (ರೂ. 250 ಕೋಟಿ ಬಜೆಟ್‌ನಲ್ಲಿ ರೂ. 850 ಕೋಟಿ). ಗದರ್ 2 500% (ರೂ. 80 ಕೋಟಿ ಬಜೆಟ್‌ನಲ್ಲಿ ರೂ. 490 ಕೋಟಿ) ಹೆಚ್ಚು ಲಾಭ ಗಳಿಸಿದೆ.
ದಕ್ಷಿಣದಿಂದ ಅತಿ ಹೆಚ್ಚು ಗಳಿಕೆ ಮಾಡಿದ ಎರಡು ಚಿತ್ರಗಳು ಕೂಡ ಉತ್ತಮ ಪ್ರದರ್ಶನ ನೀಡಿವೆ. ರಜನಿಕಾಂತ್ ಅವರ ಜೈಲರ್ ಸರಿಸುಮಾರು 150% ಲಾಭವನ್ನು ನಿರ್ವಹಿಸಿದರೆ ವಿಜಯ್ ಅವರ ಲಿಯೋ 80% ಲಾಭವನ್ನು ಪಡೆದುಕೊಂಡಿದೆ.
ವಿಪುಲ್ ಶಾ ನಿರ್ಮಿಸಿದ, ಕೇರಳ ಸ್ಟೋರಿಯಲ್ಲಿ ಅದಾ ಶರ್ಮಾ ಅವರು ಮುಖ್ಯ ತಾರಾಗಣದಲ್ಲಿ ನಟಿಸಿದ್ದಾರೆ. ಕೇರಳದ ಮಹಿಳೆಯರು ಐಸಿಸ್‌ನಿಂದ ಹನಿ ಟ್ರ್ಯಾಪ್ ಆಗಿದ್ದು ಮತ್ತು ಬಲವಂತವಾಗಿ ಮತಾಂತರಗೊಂಡ ಕಥೆಯನ್ನು ಈ ಸಿನಿಮಾ ಆಧರಿಸಿದೆ. ಬಿಡುಗಡೆಯ ಮೊದಲು, ಚಲನಚಿತ್ರವು ಬಹಿಷ್ಕಾರದ ಕರೆಗಳನ್ನು ಎದುರಿಸಿತು. ಬಿಡುಗಡೆಯ ಮೊದಲು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ ಥಿಯೇಟರ್‌ನಲ್ಲಿ ಸಕ್ಸಸ್ ಆಯಿತು.