ಆರ್ಯನ್ ಖಾನ್ ಫೋಟೋ ಶೇರ್ ಮಾಡಿದ ಪಾಕಿಸ್ತಾನಿ ನಟಿ; ಏನು ನಡೆಯುತ್ತಿದೆ?
Aryan Khan - Sajal Ali: ಪಾಕಿಸ್ತಾನಿ ನಟಿ ಸಜಲ್ ಅಲಿ (Sajal Ali) ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶಾರುಖ್‌ಖಾನ್ (Shahrukh Khan) ಮಗ ಆರ್ಯನ್ ಖಾನ್ (Aryan Khan) ಅವರ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಗಮನ ಸೆಳೆದಿದೆ ಜೊತಗೆ ನಟಿ ಆರ್ಯನ್ ಖಾನ್ ಅವರನ್ನುಪ್ರೀತಿಸುತ್ತಿದ್ದಾರ ಎಂದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಅಷ್ಟಕ್ಕೂ ಯಾರು ಈ ಸಜಲ್ ಅಲಿ?

ನಟಿ ಸಜಲ್ ಅಲಿ ಪಾಕಿಸ್ತಾನಿ ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಕಂಡುಕೊಂಡಿದ್ದಾರೆ. ಅದರ ಜೊತೆ ಸಜಲ್ ಅವರು ನೆರೆಯ ದೇಶದಲ್ಲಿ ಮಾತ್ರವಲ್ಲದೆ ನಮ್ಮ ಭಾರತದಲ್ಲಿಯೂ ಪ್ರಸಿದ್ಧರಾಗಿದ್ದಾರೆ.
2017 ರಲ್ಲಿ ಬಿಡುಗಡೆಯಾದ 'ಮಾಮ್' ಚಿತ್ರದಲ್ಲಿ ಶ್ರೀದೇವಿಯೊಂದಿಗೆ ಕೆಲಸ ಮಾಡಿದ ನಂತರ ಭಾರತದಲ್ಲಿ ಸಜಲ್ ಅವರ ಜನಪ್ರಿಯತೆ ಹೆಚ್ಚಾಯಿತು. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಅವರ ಮಗಳ ಪಾತ್ರದಲ್ಲಿನ ಅವರ ನಟನೆಯನ್ನು ಪ್ರಶಂಸಿಸಲಾಯಿತು.
ನಟನೆಯ ಜೊತೆ ಸಜಲ್ ಅಲಿ ಅವರ ಅವರ ಸೌಂದರ್ಯವು ಅನೇಕ ಹೃದಯಗಳನ್ನು ಗೆದ್ದಿದೆ. ಸಜಲ್ ಅಲಿ ಆಗಾಗ್ಗೆ ಕೆಲಸದ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
ಈಗ ಪಾಕಿಸ್ತಾನಿ ನಟ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಆದರೆ ಈ ಬಾರಿ ಅದು ಅವರ ವೃತ್ತಿಪರ ಜೀವನಕ್ಕಾಗಿ ಅಲ್ಲ, ಬದಲಿಗೆ ಅವರ ವೈಯಕ್ತಿಕ ಜೀವನಕ್ಕಾಗಿ. ಈ ಬಾರಿಯ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಸಾಕಷ್ಟು ಸದ್ದು ಮಾಡುತ್ತಿದೆ.
ಸಜಲ್ ಅಲಿ ಅವರು ಶುಕ್ರವಾರ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಬಾಲಿವುಡ್ ಕಿಂಗ್ ಖಾನ್ ಮಗ ಆರ್ಯನ್ ಖಾನ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆರ್ಯನ್ ಅವರ ಫೋಟೋದ ಜೊತೆ ಹೃದಯದ ಎಮೋಟಿಕಾನ್ ಪೋಸ್ಟ್ ಮಾಡಿದ್ದಾರೆ.
ಸಜಲ್ ಪೋಸ್ಟ್ ಬಗ್ಗೆ ಏನನ್ನೂ ಬರೆದಿಲ್ಲವಾದರೂ, ಫೋಟೋ ಮತ್ತು ಹೃದಯದ ಎಮೋಜಿಯನ್ನು ನೋಡಿ, ಆರ್ಯನ್ ಅವರನ್ನು ನಟಿ ಪ್ರೀತಿಸುತ್ತಿದ್ದರಾ ಎಂದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ.
ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಕೂಡ ಇತ್ತೀಚೆಗೆ ತಮ್ಮ ಚಿತ್ರಗಳೊಂದಿಗೆ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ ಒಂದೆರಡು ದಿನಗಳ ಹಿಂದೆ, ಆರ್ಯನ್ ಅವರ ಇತ್ತೀಚಿನ ಫೋಟೋಶೂಟ್‌ನಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆರ್ಯನ್ ಶೀಘ್ರದಲ್ಲೇ ವೆಬ್ ಸರಣಿಯೊಂದಿಗೆ ತನ್ನ ನಿರ್ದೇಶನವನ್ನು ಪ್ರಾರಂಭಿಸಬಹುದು ಎಂಬ ವರದಿಗಳಿವೆ.