Asianet Suvarna News Asianet Suvarna News

ಆ ಶರ್ಟ್ ನನ್ನದು; ಆರ್ಯನ್ ಖಾನ್ ಸ್ಟೈಲಿಶ್ ಪೋಸ್ಟ್‌ಗೆ ಕಾಲೆಳೆದ ಶಾರುಖ್ ಖಾನ್, ಮಗನ ರಿಯಾಕ್ಷನ್ ಹೀಗಿತ್ತು

ಮಗನ ಪೋಸ್ಟ್‌ಗೆ ಶಾರುಖ್ ಖಾನ್ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಆರ್ಯನ್ ಖಾನ್ ಸ್ಟೈಲಿಶ್ ಫೋಟೋ ಹಂಚಿಕೊಂಡಿದ್ದಾರೆ. ಪುತ್ರನ ಲುಕ್ ಹೊಗಳಿ ಬಳಿಕ ಕಾಲೆಳೆದಿದ್ದಾರ. 

Aryan Khan Response To Dad Shahrukh Comment on his post sgk
Author
First Published Sep 14, 2022, 1:12 PM IST

ಬಾಲಿವುಡ್ ಸ್ಟಾರ್, ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಪುತ್ರ ಆರ್ಯನ್ ಖಾನ್ ಒಂದಲ್ಲೊಂದು ವಿಚಾರಕ್ಕೆ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಆರ್ಯನ್ ಮತ್ತು ಶಾರುಖ್ ಇಬ್ಬರು ತಂದೆ -ಮಗ ಎನ್ನುವುದಕ್ಕಿಂತ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತಾರೆ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಆರ್ಯನ್ ಖಾನ್ ಅವರನ್ನು ಬಿಡಿಸಲು ಶಾರುಖ್ ತುಂಬಾ ಪ್ರಯತ್ನಿಸಿದ್ದರು. ಆಗಾಗ ಜೊತೆಯಲ್ಲಿ ಕಾಣಿಸಿಕೊಳ್ಳುವ ಅಪ್ಪ-ಮಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ. ಇದೀಗ ಮಗನ ಪೋಸ್ಟ್‌ಗೆ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಆರ್ಯನ್ ಖಾನ್ ಸ್ಟೈಲಿಶ್ ಫೋಟೋ ಹಂಚಿಕೊಂಡಿದ್ದಾರೆ. ಪುತ್ರನ ಲುಕ್ ಹೊಗಳಿ ಬಳಿಕ ಕಾಲೆಳೆದಿದ್ದಾರ. 

ಆರ್ಯನ್ ಖಾನ್ ಖಾಸಗಿ ಬ್ರ್ಯಾಂಡ್​ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರ ಪ್ರಮೋಷನ್​​ ಮಾಡುತ್ತಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಆರ್ಯನ್ ಖಾನ್ ಸಖತ್ ಹ್ಯಾಂಡ್ಸಮ್​ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆರ್ಯನ್ ಖಾನ್ ಪೋಸ್ಟ್‌ಗೆ ಅಪ್ಪ ಶಾರುಖ್ ಖಾನ್, ಅಮ್ಮ ಗೌರಿ ಖಾನ್, ಸಹೋದರಿ ಸುಹಾನಾ ಖಾನ್ ಸೇರಿದಂತೆ ಎಲ್ಲರು ಪ್ರೀತಿಯ ಕಾಮೆಂಟ್ ಮಾಡಿದ್ದಾರೆ. 

ಸಹೋದರಿ ಸುಹಾನಾ ಖಾನ್ ಹಾರ್ಟ್ ಇಮೋಜಿ ಹಾಕಿದ್ದಾರೆ. ಇನ್ನು ತಾಯಿ ನನ್ನ ಹುಡುಗ ಲವ್ ಲವ್ ಲವ್ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಶಾರುಖ್ ಖಾನ್ ಪುತ್ರನಿಗೆ ಪ್ರೀತಿಯ ಕಾಮೆಂಟ್ ಜೊತೆಗೆ ಕಾಲೆಳೆದಿದ್ದಾರೆ.  'ನಿಜಕ್ಕೂ ತಂಬಾ ಚೆನ್ನಾಗಿ ಕಾಣುತ್ತಿದ್ದೀಯಾ. ತಂದೆಯಲ್ಲಿ ಯಾವ ವಿಚಾರ ಸೈಲೆಂಟ್ ಇರುತ್ತದೆಯೋ ಅದು ಮಗನಲ್ಲಿ ಎದ್ದು ಕಾಣುತ್ತದೆ. ಅಂದಹಾಗೆ ಆ ಟಿ-ಶರ್ಟ್​ ನನ್ನದು' ಎಂದಿದ್ದಾರೆ ಶಾರುಖ್ ಖಾನ್.

 
 
 
 
 
 
 
 
 
 
 
 
 
 
 

A post shared by Aryan Khan (@___aryan___)

ಅಮ್ಮ ಕೊನೆಯುಸಿರೆಳೆವಾಗ ತುಂಬಾ ಹರ್ಟ್ ಮಾಡಿದ್ದೆ: ತಾಯಿಯ ಕೊನೆ ಕ್ಷಣದ ಬಗ್ಗೆ ಶಾರುಖ್ ಭಾವುಕ ಮಾತು

ಅಪ್ಪನ ಕಾಮೆಂಟ್ ಗೆ ಪುತ್ರ ಆರ್ಯನ್ ಖಾನ್ ಕೂಡ  ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪನ ಮಾತಿಗೆ ಆರ್ಯನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ನಿಮ್ಮ ಜೀನ್ಸ್ ಮತ್ತು ಟೀ-ಶರ್ಟ್ ಹಹಾ' ಎಂದು ಹೇಳಿದ್ದಾರೆ. ಅಪ್ಪ-ಮಗನ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳ ಮೆಚ್ಚುಗೆ ಸಹ ಪಡೆದುಕೊಂಡಿದೆ.  

Ganesh Chaturthi 2022; ಶಾರುಖ್ ಮನೆಯಲ್ಲಿ ಅದ್ದೂರಿ ಗಣೇಶ ಸಂಭ್ರಮ, ಮೋದಕ ತಿಂದು ಹೇಳಿದ್ದೇನು?

 ಇನ್ನು ಆರ್ಯನ್ ಖಾನ್ ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ ಸದ್ಯ ಹೊಸ ವೆಬ್​ ಸೀರಿಸ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಆರ್ಯನ್ ಖಾನ್ ನಟನಾಗಿ ಎಂಟ್ರಿ ಕೊಡುವುದಕ್ಕಿಂತ ನಿರ್ದೇಶಕನಾಗಬೇಕು ಎನ್ನುವುದು ಆಸೆ. ಹಾಗಾಗಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಪುತ್ರನ ಸಿನಿಮಾಗೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡುತ್ತಿದ್ದಾರೆ ಎನ್ನುವ ಮಾತು ಕಳಿಬಂದಿದೆ. ಆದರೆ ಈ ಬಗ್ಗೆಇನ್ನು ಅಧಿಕೃತ ಘೋಷಣೆಯಾಗಿಲ್ಲ. ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ. 

Follow Us:
Download App:
  • android
  • ios