6ನೇ ತರಗತಿಯಿಂದ ಒಂದೇ ಹುಡುಗಿಯನ್ನು ಡೇಟ್ ಮಾಡಿ ಮದುವೆಯಾಗಿದ್ದ KK
ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ (Krishnakumar Kunnath) ಅಂದರೆ KK ಅವರು ಮೇ 31 ರ ರಾತ್ರಿ ಕೋಲ್ಕತ್ತಾದಲ್ಲಿ ನಿಧನರಾದರು. ಅವರು ಲೈವ್ ಕನ್ಸರ್ಟ್ ಸಮಯದಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ಬಾಲಿವುಡ್ ಮಾತ್ರವಲ್ಲ ಇಡೀ ದೇಶವೇ ಶೋಕದಲ್ಲಿ ಮುಳುಗಿದೆ. ಅವರ ನಿಧನಕ್ಕೆ ಪ್ರಧಾನಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 6ನೇ ತರಗತಿಯಿಂದ ಒಂದೇ ಹುಡುಗಿಯನ್ನು ಡೇಟ್ ಮಾಡಿ ಮದುವೆಯಾದ KK ಅವರ ಲವ್ ಸ್ಟೋರಿ ಇಲ್ಲಿದೆ.
ಭಾರತೀಯ ಗಾಯಕ ಕೆಕೆ ಸಂಗೀತ ಲೋಕದಲ್ಲಿ ಚಿರಪರಿಚಿತ ಹೆಸರು. ಅವರು ಅನೇಕ ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ. ಇವರ ವಿದಾಯ ಸಂಗೀತಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಮೇ 31 ರ ರಾತ್ರಿ ಕಲ್ಕತ್ತಾದಲ್ಲಿ ನಡೆದ ಲೈವ್ ಕನ್ಸರ್ಟ್‌ನಲ್ಲಿ ಪ್ರದರ್ಶನದ ಸಮಯದಲ್ಲಿ KK ಅವರ ಆರೋಗ್ಯವು ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ಅವರು ಸಾವನ್ನಪ್ಪಿದರು.
KK ಅವರು ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ತಮ್ಮ ವೃತ್ತಿಪರ ಜೀವನದಿಂದ ಪ್ರತ್ಯೇಕವಾಗಿರಿಸಿದ್ದರು. ಮಾಧ್ಯಮಗಳಲ್ಲಿಯೂ ಇವರ ಪರ್ಸನಲ್ ಲೈಫ್ ಚರ್ಚೆಯಾಗಿದ್ದು ವಿರಳ.
ಕೆಕೆ ಮದುವೆಯಾಗಿದ್ದು ಅವರ ಬಾಲ್ಯದ ಪ್ರೀತಿ. ಲವ್ ಕಮ್ ಅರೇಂಜ್ ಮ್ಯಾರೇಜ್‌ನಲ್ಲಿ ಅವರು ಜ್ಯೋತಿಯನ್ನು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗಳು ಮತ್ತು ಒಬ್ಬ ಮಗ.
ಈ ಹಿಂದೆ, ಕೆಕೆ ಟಿವಿಯಲ್ಲಿ ದಿ ಕಪಿಲ್ ಶರ್ಮಾ ಶೋನಲ್ಲಿ ತನ್ನ ಬಾಲ್ಯದ ಗೆಳತಿ ಜ್ಯೋತಿಯನ್ನು ಮದುವೆಯಾದ ವಿಷಯವನ್ನು ಬಹಿರಂಗಪಡಿಸಿದ್ದರು. ಜ್ಯೋತಿ ಅವರನ್ನು 6ನೇ ತರಗತಿಯಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಅವರು ಯಾವಾಗಲೂ ಅವರೊಂದಿಗೆ ಇದ್ದಾರೆ ಎಂದು ಕೆಕೆ ಹೇಳಿದ್ದರು.
1991 ರಲ್ಲಿ ಇಬ್ಬರೂ ವಿವಾಹವಾದರು. ಅವರ ಜೀವನದಲ್ಲಿ ಒಬ್ಬರನ್ನು ಮಾತ್ರ ಡೇಟಿಂಗ್ ಮಾಡಿ ಮದುವೆಯಾದರು. ಕೆಕೆ ತುಂಬಾ ತಮಾಷೆ, ಫನ್ ಲವಿಂಗ್ ಮತ್ತು ಆಸಕ್ತಿದಾಯಕ ವ್ಯಕ್ತಿಯಾಗಿದ್ದರು.
ತಾನು ಮೊದಲಿನಿಂದಲೂ ನಾಚಿಕೆ ಸ್ವಭಾವದವನಾಗಿದ್ದೆ ಮತ್ತು ಹಾಗಾಗಿಯೇ ಜ್ಯೋತಿಯೊಂದಿಗೆ ಸರಿಯಾಗಿ ಡೇಟ್ ಮಾಡಲು ಸಾಧ್ಯವಾಗಲಿಲ್ಲ ಮತ್ತು ಈ ವಿಷಯ ಅವರ ಮಕ್ಕಳಿಗೆ ಗೊತ್ತಾದಾಗ ಆಗಾಗ ಇಬ್ಬರನ್ನೂ ಚುಡಾಯಿಸುತ್ತಿದ್ದರು ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು. .