Asianet Suvarna News Asianet Suvarna News

ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಹದಗೆಟ್ಟ KK ಆರೋಗ್ಯ, ಆಸ್ಪತ್ರೆಗೆ ಕರೆದೊಯ್ಯಿರಿ ಎಂದಿದ್ದ ಗಾಯಕ!

* ಬಾಲಿವುಡ್ ಖ್ಯಾತ ಗಾಯಕ ಕೆಕೆ ನಿಧನ

* ಕಾರ್ಯಕ್ರಮದಲ್ಲಿ ಹಾಡುತ್ತಿರುವಾಗಲೇ ಹದಗೆಟ್ಟ ಕೆಕೆ ಆರೋಗ್ಯ

* ಆಸ್ಪತ್ರೆಗೆ ಕರೆದೊಯ್ದರೂ ಬದುಕಿ ಬರಲಿಲ್ಲ ಈ ಗಾಯಕ

Last Video of KK Being Taken To Hospital From Concert After Complaining Of Chest Pain Emerges pod
Author
Bangalore, First Published Jun 1, 2022, 1:10 PM IST | Last Updated Jun 1, 2022, 1:18 PM IST

ಮುಂಬೈ(ಜೂ,01): ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಹೃದಯಾಘಾತದಿಂದ ಖ್ಯಾತ ಗಾಯಕ ಕೆಕೆ ಕೊನೆಯುಸಿರೆಳೆದಿದ್ದಾರೆ. 53 ವರ್ಷದ ಕೆಕೆ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದಾಗ, ಹಾಡುತ್ತಿರುವಾಗ ಅವರ ಆರೋಗ್ಯ ಹದಗೆಟ್ಟಿತ್ತು, ಹೀಗಿದ್ದರೂ ಅವರು ಇನ್ನೂ ಸ್ವಲ್ಪ ಸಮಯ ಹಾಡಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಮೈಕ್ ಕೆಳಗಿಟ್ಟು ತಮ್ಮ ತಂಡದೊಂದಿಗೆ ಕಾರ್ಯಕ್ರಮವನ್ನು ತೊರೆದರು. ಸಾವಿನ ಕೆಲವು ನಿಮಿಷಗಳ ಹಿಂದಿನ ವೀಡಿಯೊ ಹೊರಬಿದ್ದಿದೆ, ಅದರಲ್ಲಿ ಅವರು ಬೆವರುತ್ತಾ ಚಡಪಡಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಅವರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಮತ್ತು ಸಂಗೀತ ಕಚೇರಿಯನ್ನು ತೊರೆದಿದ್ದಾರೆ ಎಂಬುದನ್ನು ನೋಡಬಹುದು. ಕೋಲ್ಕತ್ತಾದ ನಜ್ರುಲ್ ಮಂಚದಲ್ಲಿ ವಿವೇಕಾನಂದ ಕಾಲೇಜು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕೆಕೆ ಪ್ರದರ್ಶನ ನೀಡುತ್ತಿದ್ದು, ಈ ವೇಳೆ ಅವರ ಆರೋಗ್ಯ ಹದಗೆಟ್ಟಿದೆ ಎಂಬುವುದು ಉಲ್ಲೇಖನೀಯ. 

ಕೆಕೆ ಕೇವಲ ಒಂದು ತಾಸು ಕಾರ್ಯಕ್ರಮ ನೀಡಲು ಸಾಧ್ಯವಾಯಿತು

ವರದಿಗಳ ಪ್ರಕಾರ, ಈವೆಂಟ್‌ನಲ್ಲಿ ಕೆಕೆ ಕೇವಲ ಒಂದು ಗಂಟೆಯ ಅವಧಿಯ ಪ್ರದರ್ಶನವನ್ನು ನೀಡಲು ಸಾಧ್ಯವಾಯಿತು. ಆದರೆ ಅಷ್ಟರಲ್ಲಾಗಲೇ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ಅವರು ಈವೆಂಟ್‌ನಲ್ಲಿ ನೀರಿನ ಸ್ಪಾಟ್‌ಲೈಟ್‌ನಿಂದಲೂ ತೊಂದರೆ ಅನುಭವಿಸುತ್ತಿದ್ದರು ಮತ್ತು ಅದನ್ನು ಆಫ್ ಮಾಡಲು ಕೇಳಿದರು. ಹೀಗಿದ್ದರೂ ಅವರ ಆರೋಗ್ಯವು ಹದಗೆಡುತ್ತಲೇ ಇತ್ತು , ಹೀಗಾಗಿ ಅವರು ತಮ್ಮ ಹೋಟೆಲ್‌ಗೆ ಹೋದನು. ಆದರೆ, ಹೋಟೆಲ್ ತಲುಪಿದ ನಂತರವೂ ಅವರಿಗೆ ಹುಷಾರಿರಲಿಲ್ಲ. ಅಲ್ಲಿಯೇ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಭಾರೀ ಸಂಚಲನ ಉಂಟಾಯಿತು. ಅವರು ನಮ್ಮೊಂದಿಗಿಲ್ಲ ಎಂದು ಯಾರೂ ನಂಬಲು ಸಿದ್ಧರಿರಲಿಲ್ಲ.

ಬಾಲಿವುಡ್ ಗಣ್ಯರಿಂದ ಸಂತಾಪ

ಕೆಕೆ ಹಠಾತ್ತನೆ ಇಹಲೋಕ ತ್ಯಜಿಸಿದ ನಂತರ ಬಾಲಿವುಡ್ ಇಂಡಸ್ಟ್ರಿ ಭಾರೀ ಹಿನ್ನಡೆ ಅನುಭವಿಸಿದೆ. ಕೆಕೆ ಇನ್ನಿಲ್ಲ ಎಂಬ ವಿಚಾರ ಇನ್ನೂ ನಂಬಲಾಗುತ್ತಿಲ್ಲ. ಶ್ರೇಯಾ ಘೋಷಾಲ್, ಸಲೀಂ ಮರ್ಚೆಂಟ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ವರುಣ್ ಧವನ್, ಕರಣ್ ಜೋಹರ್, ಅಭಿಷೇಕ್ ಬಚ್ಚನ್ ಮತ್ತು ಇತರ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕೆಕೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಅವರು ಹಿನ್ನೆಲೆ ಗಾಯನ ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ. ಅವರ ಹಾಡಿಗೆ ಅಭಿಮಾನಿಗಳು ಮರುಳಾಗುತ್ತಿದ್ದರು. 

Latest Videos
Follow Us:
Download App:
  • android
  • ios