ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ, KK) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೆಕೆ ಎಂದಿನಂತೆ ಅಭಿಮಾನಿಗಳನ್ನು ಸಂಗೀತದ ಅಮಲಿನಲ್ಲಿ ತೇಲಿಸಿದ್ದರು. ಕಾರ್ಯಕ್ರಮ ಮುಗಿಸಿ ಹೋಟೆಲ್ ಸೇರಿಕೊಂಡ ಕೆಕೆ ಅಲ್ಲೇ ತೀವ್ರ ಆಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.
ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ, KK) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದ ಕೆಕೆ ಎಂದಿನಂತೆ ಅಭಿಮಾನಿಗಳನ್ನು ಸಂಗೀತದ ಅಮಲಿನಲ್ಲಿ ತೇಲಿಸಿದ್ದರು. ಕಾರ್ಯಕ್ರಮ ಮುಗಿಸಿ ಹೋಟೆಲ್ ಸೇರಿಕೊಂಡ ಕೆಕೆ ಅಲ್ಲೇ ತೀವ್ರ ಆಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ. ಕೆಕೆ ಹಠಾತ್ ಸಾವು ಸಂಗೀತ ಲೋಕಕ್ಕೆ ಬರಸಿಡಲು ಬಡಿದಂತೆ ಆಗಿದೆ. ಸಿನಿಮಾ ಮತ್ತು ರಾಜಕೀಯ ಗಣ್ಯರು ಕೆಕೆ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಇದೀಗ ಕೆಕೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೋಲ್ಕತ್ತಾದ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯೂ ಮಾರ್ಕೆಟ್ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳು ನೀಡಿದ ಮಾಹಿತಿ ಪ್ರಕಾರ ಗಾಯಕ ಕೆಕೆ ಮುಖ ಮತ್ತು ತಲೆಯಲ್ಲಿ ಗಾಯಗಳಾಗಿವೆ. ಸಾವಿನ ನಿಖರ ಕಾರಣ ತಿಳಿಯಲು ಶವಪರೀಕ್ಷೆಯ ವರದಿ ಬರಬೇಕಿದೆ. ಇಂದು (ಜೂನ್ 1) ಕೋಲ್ಕತ್ತಾದ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಯಲಿದೆ. ಪೊಲೀಸರು ಈಗಾಗಲೇ ಕೆಕೆ ತಂಗಿದ್ದ ಹೋಟೆಲ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಆಯೋಜಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಗಾಯಕ ಕೆಕೆ, ಸಂಗೀತ ಮಾಂತ್ರಿಕ ಎ ಆರ್ ರಹಮಾನ್ ಅವರ ಹಿಟ್ ಹಾಡುಗಳಾದ ಕಲ್ಲೂರಿ ಸಾಲೆ, ಹಲೋ ಡಾಕ್ಟರ್ ಮೂಲಕ ದೊಡ್ಡ ಮಟ್ಟದ ಬ್ರೇಕ್ ಪಡೆದರು. 1999ರಲ್ಲಿ ರಿಲೀಸ್ ಆದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ತಡಪ್ ತಡಪ್ ಕೆ.. ಹಾಡಿನ ಮೂಲಕ ಹಿನ್ನಲೆ ಗಾಯಕರಾಗಿ ವೃತ್ತಿ ಜೀವನ ಪ್ರಾರಂಭ ಮಾಡಿದ ಕೆಕೆ ಬಳಿಕ ದೊಡ್ಡ ಮಟ್ಟದ ಖ್ಯಾತಿಗಳಿಸಿದರು.
Singer KK ಸಂಗೀತ ಕಾರ್ಯಕ್ರಮ ನೀಡಿದ ಬೆನ್ನಲ್ಲೇ ಖ್ಯಾತ ಬಾಲಿವುಡ್ ಗಾಯಕ ಕೆಕೆ ನಿಧನ
ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ಕ್ಕೆ ನಗರದಲ್ಲಿ ಬೀಡುಬಿಟ್ಟಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಕೆಕೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ತುಂಬಿದ್ದರು. ಅತ್ಯುತ್ತಮ ಮ್ಯೂಸಿಕ್ ಪರ್ಫಾಮೆನ್ಸ್ ಬಳಿಕ ಕೆಕೆ ತಂಡ ನೇರವಾಗಿ ಹೋಟೆಲ್‌ಗೆ ತೆರಳಿದೆ.
Singer KK Death ಖ್ಯಾತ ಪ್ಲೇ ಬ್ಯಾಕ್ ಸಿಂಗರ್ ಕೆಕೆ ನಿಧನ, ಪ್ರಧಾನಿ ಮೋದಿ ಸಂತಾಪ!
ಕೋಲ್ಕತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಕೆ ಸುಮಾರು 1 ಗಂಟಗಳ ಕಾಲ ಹಾಡಿದ್ದರು. ಹಾಡು ನೃತ್ಯದ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ರಂಜಿಸಿದ್ದರು. ತಮ್ಮ ಎಲೆಕ್ಟ್ರಿಕ್ ಪರ್ಫಾಮೆನ್ಸ್ ಮೂಲಕ ಪ್ರೇಕ್ಷಕರಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಕೆಕೆ ನಿಧನ ತೀವ್ರ ಆಘಾತ ತಂದಿದ್ದು ಬಾಲಿವುಡ್ ದಿಗ್ಗಜರು, ಸೆಲೆಬ್ರೆಟಿಗಳು, ಖ್ಯಾತ ಗಾಯಕರು ಕೆಕೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನು ನಂಬಲು ಸಾಧ್ಯವಿಲ್ಲ. ಕೆಕೆ ಹಾಡುಗಳನ್ನು ಕೇಳಿ ಬೆಳೆದಿದ್ದೇವೆ. ಕೆಕೆ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
