ಕಂಗನಾರ Lock Uppನಲ್ಲಿ ರವೀನಾ ಟಂಡನ್? 16 ಬಂಧಿತರು ಮತ್ಯಾರು?
ಸಾಕಷ್ಟು ವಿವಾದಗಳ ನಂತರ, ಕಂಗನಾ ರಣಾವತ್ (Kangana Ranaut) ಅವರ ಮೊದಲ ರಿಯಾಲಿಟಿ ಶೋ ಲಾಕ್ ಅಪ್ (Lock Upp) ಅಂತಿಮವಾಗಿ OTT ಪ್ಲಾಟ್‌ಫಾರ್ಮ್ ಆಲ್ಟ್ ಬಾಲಾಜಿ ಮತ್ತು MX Playerನಲ್ಲಿ ಕಳೆದ ರಾತ್ರಿ ಸ್ಟ್ರೀಮ್ ಮಾಡಲಾಗಿದೆ. ಪ್ರದರ್ಶನವು ದಿನದ 24 ಗಂಟೆಗಳು, ವಾರದ ಏಳು ದಿನಗಳು ಸ್ಟ್ರೀಮ್ ಆಗುತ್ತದೆ. ಲಾಕ್‌ಅಪ್‌ನಲ್ಲಿ ಸುಮಾರು 16 ಸ್ಪರ್ಧಿಗಳನ್ನು 72 ದಿನಗಳ ಕಾಲ ಜೈಲಿನೊಳಗೆ ಇರಿಸಲಾಗುತ್ತದೆ. ಹೋಸ್ಟ್ ಕಂಗನಾ ಏನು ಮಾಡಬೇಕೆಂದು, ಕೇಳುತ್ತಾರೋ ಅದೇ ಶೋನಲ್ಲಿ ನಡೆಯುತ್ತದೆ. ನಿನ್ನೆ ರಾತ್ರಿ ಕಾರ್ಯಕ್ರಮದ ಇತರ ಸ್ಪರ್ಧಿಗಳ ಹೆಸರುಗಳು ಸಹ ಹೊರಬಂದವು. ಯಾರಾರನ್ನು ಕಂಗನಾ ಲಾಕ್ ಅಪ್‌ನಲ್ಲಿ ಹಾಕಿದ್ದಾರೆ ನೋಡಿ.

ನಿಶಾ ರಾವಲ್, ಪೂನಂ ಪಾಂಡೆ, ಕರಣ್ವೀರ್ ಬೋಹ್ರಾ, ಬಬಿತಾ ಫೋಗಟ್ ಮತ್ತು ಮುನವ್ವರ್ ಫಾರೂಕಿ ಅವರ ಹೆಸರುಗಳು ಈಗಾಗಲೇ ಕಾರ್ಯಕ್ರಮಕ್ಕೆ ಸೇರಿದ ಸ್ಪರ್ಧಿಗಳಲ್ಲಿ ಹೊರಬಂದಿವೆ. ಇವರ ಹೊರತಾಗಿ ಬೇರೆ ಯಾರು ಸ್ಪರ್ಧಿಗಳ ಶೋನಲ್ಲಿ ಭಾಗಿಯಾಗಿದ್ದಾರೆ ಅನ್ನೋ ಪಟ್ಟಿ ಕೂಡ ರಿವೀಲ್ ಆಗಿದೆ.
ರವೀನಾ ಟಂಡನ್ (Raveena Tandon) ಕೂಡ ಲಾಕ್‌ಅಪ್‌ನ ಭಾಗವಾಗಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಒಂದು ದಿನ, ರವೀನಾ ಶೋನಲ್ಲಿ ಜೈಲರ್ ಪಾತ್ರವನ್ನು ನಿರ್ವಹಿಸಲಿದ್ದಾರೆ, ಅವರು ಸ್ಪರ್ಧಿಗಳ ಮೇಲೆ ಕಣ್ಣಿಟ್ಟು ಅವರಿಗೆ ನಿಯಮಗಳನ್ನು ಕಲಿಸುತ್ತಾರೆ. ಈ ಕಾರ್ಯಕ್ರಮವು ಸತ್ಯ ಮತ್ತು ವಿವಾದಗಳಿಂದ ತುಂಬಿರುತ್ತದೆ ಎಂದು ಲಾಕ್ ಅಪ್ ಚಿತ್ರದ ನಿರ್ಮಾಪಕ ಏಕ್ತಾ ಕಪೂರ್ (Ekta Kapoor) ಹೇಳಿದ್ದಾರೆ.
ಬಿಗ್ ಬಾಸ್ 4ರಲ್ಲಿ (Big Boss-4) ಸಾಕಷ್ಟು ಸುದ್ದಿಯಾಗಿದ್ದ ಕಿರುತೆರೆ ನಟಿ ಸಾರಾ ಖಾನ್ (Sara Khan) ಕೂಡ ಈ ಶೋನಲ್ಲಿ ಭಾಗವಹಿಸಲು ಬಂದಿದ್ದಾರೆ. ಬಿಗ್ ಬಾಸ್‌ನಲ್ಲಿ ಸಾರಾ ಅಲಿ ಮರ್ಚೆಂಟ್ ಅವರನ್ನು ವಿವಾಹವಾದರು, ಆದರೆ ಮನೆಯಿಂದ ಹೊರಬಂದ ನಂತರ ಇಬ್ಬರೂ ವಿಚ್ಛೇದನ ಪಡೆದರು.
ಡಿಸೈನರ್ ಸೈಶಾ ಶಿಂಧೆ ಕಳೆದ ವರ್ಷ ಸುದ್ದಿಯಲ್ಲಿದ್ದರು. ಲಿಂಗ ಬದಲಾವಣೆಯನ್ನು ಪಡೆದ ನಂತರ, ಅವರು ಸ್ವಪ್ನಿಲ್‌ನಿಂದ ಸೈಶಾ ಆದರು. ಅವರ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಪ್ರದರ್ಶನದಲ್ಲಿ ಅವರು ಚಕ್ರವಾಣಿ ಮಹಾರಾಜರೊಂದಿಗೆ ಜೋಡಿಯಾಗಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೋಹಟಗಿ ಸಾಕಷ್ಟು ವಿವಾದಗಳಲ್ಲಿ ಉಳಿದಿದ್ದಾರೆ. ಆಕೆಯ ವಿರುದ್ಧ ಹಲವು ಬಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಮೂಲಕ ಆಕೆ ಆಗಾಗ್ಗೆ ಹೇಳಿಕೆಗಳನ್ನು ನೀಡುತ್ತಾರೆ. ಶೋನಲ್ಲಿ ಪಾಯಲ್ ಸಹ ಇದ್ದಾರೆ.
ಪೂನಂ ಪಾಂಡೆ ಕೂಡ ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಪೂನಂ ತನ್ನ ನಗ್ನ ಫೋಟೋಶೂಟ್ ಮತ್ತು ವೀಡಿಯೋಗಳನ್ನು ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಮತ್ತು ಈ ಕಾರಣಗಳಿಂದಾಗಿ, ಅವರು ವಿವಾದಗಳಲ್ಲಿಯೂ ಉಳಿದಿದ್ದಾರೆ.
2014ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಹೆಸರನ್ನು ಜಗತ್ತಿಗೆ ತಂದ ಕುಸ್ತಿಪಟು ಬಬಿತಾ ಫೋಗಟ್ ಕೂಡ ಕಾರ್ಯಕ್ರಮದ ಭಾಗವಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಬಿತಾ ಪೂನಂ ಪಾಂಡೆ ಜೊತೆಯಾಗಿದ್ದಾರೆ.
ಕಿರುತೆರೆ ನಟ ಕರಣ್ವೀರ್ ಬೋಹ್ರಾ (Karanveer Bohra) ಕೂಡ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಕರಣ್ವೀರ್ ಈ ಮೊದಲು ಅನೇಕ ರಿಯಾಲಿಟಿ ಶೋಗಳ ಭಾಗವಾಗಿದ್ದರು ಆದರೆ ಅವರು ಒಂದೇ ಒಂದು ಶೋ ಅನ್ನು ಗೆಲ್ಲಲು ಸಾಧ್ಯವಾಗಲಿಲ್ಲ
ಚಕ್ರಪಾಣಿ ಮಹಾರಾಜ್ (Chakrapani Maharaj) ಸಹ ಕಂಗನಾರ ಲಾಕ್‌ಅಪ್‌ನಲ್ಲಿದ್ದಾರೆ. ಕರೋನಾ ಸಾಂಕ್ರಾಮಿಕದ ಆರಂಭಿಕ ದಿನಗಳಲ್ಲಿ, ಚಕ್ರಪಾಣಿ ಅವರು ತಮ್ಮ ಗೋಮೂತ್ರ ಪಾರ್ಟಿಯಲ್ಲಿ ಸುದ್ದಿಯಲ್ಲಿದ್ದರು. ಇವರನ್ನು ಕಂಗನಾ ಲಾಕ್ ಅಪ್‌ನಲ್ಲಿ ಹಾಕಿದ್ದಾರೆ.
ಕಂಗನಾ ರಣಾವತ್ ಅವರ ಶೋನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ (Stand Up Comedian) ಮುನವ್ವರ್ ಫಾರೂಕಿ ಕೂಡ ಸೇರಿದ್ದಾರೆ. ಮುನವ್ವರ್ ಅವರು ತಮ್ಮ ಪ್ರದರ್ಶನದ ಸಮಯದಲ್ಲಿ ನೀಡುವ ಹೇಳಿಕೆಗಳ ಕಾರಣ ಅವರು ತೊಂದರೆಗೆ ಸಿಲುಕಿ ಕೊಂಡಿದ್ದಿದೆ.
ಟಿವಿ ನಟಿ ನಿಶಾ ರಾವಲ್ ಕಳೆದ ವರ್ಷ ಪತಿ ಕರಣ್ ಮೆಹ್ರಾ (Karan Mehra) ಅವರೊಂದಿಗಿನ ವಿವಾದದ ಕಾರಣ ಸಾಕಷ್ಟು ಚರ್ಚೆಯಲ್ಲಿದ್ದರು. ಆಕೆ ಪತಿಯ ಮೇಲೆ ವಿವಾಹೇತರ ಸಂಬಂಧ (Extra Marital Affair) ಹಾಗೂ ಹಲ್ಲೆ ಆರೋಪ ಹೊರಿಸಿದ್ದರು.
ಈ ಶೋನಲ್ಲಿ ಹಾಸ್ಯನಟ ಸುನೀಲ್ ಪಾಲ್ (Sunil Paul) ಕೂಡ ಭಾಗವಹಿಸಿದ್ದಾರೆ. ಅವರಿಗೆ ಜೋಡಿಯಾಗಿ ಮುನವ್ವರ್ ಫಾರೂಕಿ ನಟಿಸಿದ್ದಾರೆ. ಸುನೀಲ್ ಈ ಮೊದಲು ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಹಾಸ್ಯ ಶೈಲಿಯನ್ನು ತೋರಿಸಿದ್ದಾರೆ. ಅವರು ಕೆಲವು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ವಕೀಲ ಮತ್ತು ಕಾರ್ಯಕರ್ತ ತೆಹಸೀನ್ ಪೂನವಾಲಾ ಕೂಡ ಕಾರ್ಯಕ್ರಮದ ಭಾಗವಾಗಿದ್ದಾರೆ. ತೆಹ್ಸೀನ್ ಈ ಹಿಂದೆ ಬಿಗ್ ಬಾಸ್ 13 ರಲ್ಲಿ ಕಾಣಿಸಿಕೊಂಡಿದ್ದರು. ಕಂಗನಾ ಅವರ ಶೋನಲ್ಲಿ ಅವರು ಏನು ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಬಿಗ್ ಎಫ್, ಸ್ಪ್ಲಿಟ್ಸ್ವಿಲ್ಲಾ ಮುಂತಾದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಸಿದ್ಧಾರ್ಥ್ ಶರ್ಮಾ ಕೂಡ ಈ ಶೋನಲ್ಲಿದ್ದಾರೆ. ಅವರು ಈ ಹಿಂದೆ ಏಕ್ತಾ ಕಪೂರ್ ಅವರ ಆಲ್ಟ್ ಬಾಲಾಜಿ ವೆಬ್ ಸರಣಿ ಪಂಚ್ ಬೀಟ್‌ನಲ್ಲಿಯೂ
ಕಾಣಿಸಿಕೊಂಡಿದ್ದರು.
ಸಾಮಾಜಿಕ ಮಾಧ್ಯಮದ ಪ್ರಭಾವಿ ಅಂಜಲಿ ಅರೋರಾ ಕೂಡ ಕಾರ್ಯಕ್ರಮದ ಭಾಗವಾಗಿದ್ದಾರೆ. ಅದೇ ಸಮಯದಲ್ಲಿ, ಸ್ಪ್ಲಿಟ್ಸ್ವಿಲ್ಲಾ ಶೋನಲ್ಲಿ ಕಾಣಿಸಿಕೊಂಡಿದ್ದ ಶಿವಂ ಶರ್ಮಾ ಕೂಡ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ .