Gangubai Kathiawadi : ಆಲಿಯಾ ರೀತಿ ಬಾಯಲ್ಲಿ ಬೀಡಿ ಇಟ್ಟುಕೊಂಡ ಬಾಲಕಿ, ಕಂಗನಾ ಕೆಂಡ!

* ದೀಪಿಕಾ ನಂತರ ಆಲಿಯಾ ಮೇಲೆ ಕಂಗನಾ ಕೆಂಡ
* ಮಕ್ಕಳು ಈ ರೀತಿ ವರ್ತನೆ ಮಾಡುವ ಸ್ಥಿತಿ ಬರಬಾರದು
* ಸೋಶಿಯಲ್  ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ವಿಡಿಯೋ 

Gangubai Kathiawadi Kangana Ranaut Objects To Kids Imitating Alia Bhatt s Role As Sex Worker mah

ಮುಂಬೈ(ಫೆ. 14)  ಬೋಲ್ಡ್ ಹೇಳಿಕೆ ಕೊಡುವುದರಲ್ಲಿ ಕಂಗನಾ ರಣಾವತ್ ಯಾವಾಗಲೂ  ಒಂದು ಕೈ ಮುಂದೆ. ಹಲವು ಸಂದರ್ಭ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಬಾರಿ ಕಂಗನಾ ಆಲಿಯಾ ಭಟ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್ (Bollywood) ತಾರೆ ಆಲಿಯಾ ಭಟ್ (Alia Bhatt)​ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ  ಪ್ರಚಾರ ವ್ಯಾಪ್ತಿ ದೊಡ್ಡದಾಗಿಯೇ ಇದೆ.  ಫೆಬ್ರವರಿ 25ರಂದು ತೆರೆಗೆ ಬರಲು ಸಿದ್ಧವಾಗಿದೆ.  ಆಲಿಯಾ ಸಿನಿಮಾದ ಡೈಲಾಗ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಆಗಿತ್ತು.

ಬಾಲಕಿಯೊಬ್ಬಳು ಆಲಿಯಾ ಭಟ್ ಅನುಕರಣೆ ಮಾಡಿ ಅದೇ ರೀತಿ ಮಾತನಾಡಿದ್ದು ವೈರಲ್ ಆಗಲು ಆರಂಭಿಸಿತ್ತು. ಆದರೆ ಕಂಗನಾ ಮಾತ್ರ ಇದಕ್ಕೆ ಅಪಸ್ವರ ಎತ್ತಿದ್ದಾರೆ.  ಬಾಲಕಿ ಕಿಯಾರಾ ಖನ್ನಾ ಮಾಡಿದ ಅನುಕರಣೆ ಕಂಗನಾರನ್ನು ಕೆರಳಿಸಿದೆ.

ದೃಶ್ಯದಲ್ಲಿ ಏನಿದೆ? ಸಿನಿಮಾದಲ್ಲಿ ಆಲಿಯಾ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯದಲ್ಲಿ ಆಲಿಯಾ ಬಾಯಿಗೆ ಬೀಡಿ ಇಟ್ಟುಕೊಂಡಿದ್ದರು. ಬಾಲಕಿ ಸಹ ಅದೇ ರೀತಿ ಮಾಡಿದ್ದಾಳೆ.

ಸಿನಿಮಾದ ಪ್ರಮುಖ ಪಾತ್ರಧಾರಿ ಗಂಗೂಬಾಯಿ ವೇಶ್ಯೆ ಆಗಿರುತ್ತಾಳೆ. ನಂತರ ಅವರು ಕಾಮಾಟಿಪುರದ ಡಾನ್​ ಆಗಿ ಬೆಳೆಯುತ್ತಾಳೆ. ಇದೇ ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ರೀತಿಯ ಕಥೆಯುಳ್ಳ ಸಿನಿಮಾಗಳ ಡೈಲಾಗ್​ಗಳನ್ನು ಬಾಲಕಿ ಕಿಯಾರಾ ಕಾಪಿ ಮಾಡಿರುವುದೆ ಕಂಗನಾ ಆಕ್ರೋಶಕ್ಕೆ ಕಾರಣ. 

ಕಂಗನಾ ರಣಾವತ್ ನಡೆಸಿಕೊಡೋ Lock UPP ರಿಯಾಲಿಟೋ ಶೋ ಟೀಸರ್ ನೋಡಿದ್ರಾ?

 ಮುಂಬೈನ ಹಳೆ ಜಗತ್ತನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆಲಿಯಾ ಭಟ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 

ಮಕ್ಕಳು ಈ ರೀತಿ ಬಾಯಿಗೆ  ಬೀಡಿ ಇಟ್ಟುಕೊಂಡು ವಿಡಿಯೋ ಮಾಡೋದು ಎಷ್ಟು ಸರಿ? ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಪರಿಣಾಮ ಬೀರುವುದಿಲ್ಲವೆ? ಉಳಿದ ಮಕ್ಕಳು ಇದನ್ನೇ ಅನುಕರಣೆ ಮಾಡುವುದಿಲ್ಲವೇ? ಎನ್ನುವುದು ಕಂಗನಾ ಪ್ರಶ್ನೆ.  ಪೋಸ್ಟ್​​ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಟ್ಯಾಗ್  ಮಾಡಲು ಮರೆತಿಲ್ಲ.

ದೀಪಿಕಾ ಸಿನಿಮಾಕ್ಕೂ ಕಂಗನಾ ವಿರೋಧ:   ದೀಪಿಕಾ ಪಡುಕೋಣೆ  ನಟನೆಯ ‘ಗೆಹರಾಯಿಯಾ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿಯೂ ಹವಾ ಸೃಷ್ಟಿಸಿತ್ತು. ಇದೊಂದು ಕೆಟ್ಟ ಸಿನಿಮಾ ಎಂದು ಕಂಗನಾ   ವಿಮರ್ಶೆ ಮಾಡಿದ್ದರು. ರೋಮಾನ್ಸ್ ಹೆಸರಿನಲ್ಲಿ  ಅಶ್ಲೀಲತನವನ್ನು ತಂದು ತುಂಬಬೇಡಿ.. ಕಸವನ್ನು ನೀಡಿದರೆ ಜನ ಒಪ್ಪಿಕೊಳ್ಳುವುದಿಲ್ಲ ಎಂದು ಕಂಗನಾ  ಹೇಳಿದ್ದರು. 

ಆಲಿಯಾ ಮದುವೆ ಆಗಿದ್ದಾರಂತೆ: ಆಲಿಯಾ ಭಟ್  ಮತ್ತು ರಣಬೀರ್ ಕಪೂರ್ (Ranbir Kapoor) ಯಾವಾಗ (Marriage) ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇದ್ದರೂ ಜೋಡಿ ಈಗಾಗಲೇ ಮದುವೆ ಆಗಿದ್ದಾರೆ. ಹೌಛದು ಈ  ವಿಚಾರವನ್ನು ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಅವರೇ  ಹೇಳಿಕೊಂಡಿದ್ದರು.

ಇಬ್ಬರಿಗೂ ಕುಟುಂಬಗಳ ಆಶೀರ್ವಾದವಿದೆ - ಸೋನಿ ರಜ್ದಾನ್, ಆಲಿಯಾಳ ತಾಯಿ, ರಣಬೀರ್ ಅನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅದೇ ರೀತಿ, ರಣಬೀರ್ ಅವರ ತಾಯಿ ನೀತು ಕಪೂರ್  ಗೆ ನನ್ನ ಕಂಡರೆ ಅಚ್ಚಯ  ಮೆಚ್ಚು ಎಂದು ಆಲಿಯಾ  ಹೇಳಿದ್ದರು .

ಕಂಗನಾ ರಣಾವತ್  ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ಒಂದಾಗಿದ್ದು  ರಿಯಾಲಿಟಿ ನಶೋ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಶೋ ಬಿಗ್ ಬಾಸ್ ಗೂ ಒಂದು ಕೈ ಜಾಸ್ತಿ ಇರಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಕಳೆದ ವರ್ಷ ಕಂಗನಾ ಮುಂಬೈ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದರು.

 

 

Latest Videos
Follow Us:
Download App:
  • android
  • ios