ಸೂಪರ್‌ಸ್ಟಾರ್ ಆಗಿದ್ರೂ ಗಲ್ಲಿಯಲ್ಲಿ ವಾಸಿಸ್ತಿದ್ದ ನಟ, ನಿರ್ಮಾಪಕರು ಸಹಿಗಾಗಿ ಶೌಚಾಲಯದ ಹೊರಗೆ ಕಾಯ್ತಿದ್ರು!
ಬಾಲಿವುಡ್‌ನ ಖ್ಯಾತ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕ ನಂತರವೂ ಬರೋಬ್ಬರಿ 33 ವರ್ಷಗಳ ಕಾಲ ಗಲ್ಲಿಯಲ್ಲಿ ವಾಸಿಸಿದರು. ಅವರ ಜೊತೆ ಸಿನಿಮಾಕ್ಕೆ ಸಹಿ ಹಾಕಿಸಲು ನಿರ್ಮಾಪಕರು ಶೌಚಾಲಯದ ಹೊರಗಡೆ ಕಾಯುತ್ತಿದ್ದರು.
ಬಾಲಿವುಡ್‌ನ ಹಲವಾರು ನಟರು ಯಾವುದೇ ಚಿತ್ರರಂಗದ ಹಿನ್ನಲೆಯಿಲ್ಲದೆ ಸಿನಿಮಾ ಇಂಡಸ್ಟ್ರಿಗೆ ಇಲ್ಲಿ ಸಣ್ಣಪುಟ್ಟ ನಾಟಕ ಮಾಡುತ್ತಾ ಸಿನಿಮಾಗಳಲ್ಲಿ ಅವಕಾಶ ಪಡೆದವರು. ಅವರಲ್ಲೊಬ್ಬರು ಬಾಲಿವುಡ್‌ನ ಖ್ಯಾತ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕ ನಂತರವೂ ಬರೋಬ್ಬರಿ 33 ವರ್ಷಗಳ ಕಾಲ ಗಲ್ಲಿಯಲ್ಲಿ ವಾಸಿಸಿದರು. ಅವರ ಜೊತೆ ಸಿನಿಮಾಕ್ಕೆ ಸಹಿ ಹಾಕಿಸಲು ನಿರ್ಮಾಪಕರು ಶೌಚಾಲಯದ ಹೊರಗಡೆ ಕಾಯುತ್ತಿದ್ದರು.
ಗ್ಲಾಮರ್ ಜಗತ್ತಿನಲ್ಲಿ,ನೇಮು ಫೇಮು ಎಲ್ಲವೂ ಸಿಕ್ಕ ಮೇಲೂ ಕೆಲವೇ ಕೆಲವು ನಟರು ಬದಲಾಗದೆ ಉಳಿಯುತ್ತಾರೆ. ಹಾಗೇ ಕಷ್ಟಪಟ್ಟು ತಾರಾಪಟ್ಟಕ್ಕೇರಿ ಎತ್ತರವನ್ನು ಸಾಧಿಸಿದ ಕಲಾವಿದನೊಬ್ಬ ಕುರಿತಾದ ಮಾಹಿತಿ ಇಲ್ಲಿದೆ. ಈ ನಟ ಜನಪ್ರಿಯ ಚಲನಚಿತ್ರ ತಾರೆಯಾದರೂ, ತಮ್ಮ ಹಳೆಯ ಒಡನಾಡಿಗಳೊಂದಿಗೆ ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಅವರ್ಯಾರೂ ಅಲ್ಲ, ಬಾಲಿವುಡ್‌ನ ಜಾಕಿ ಶ್ರಾಫ್.
ಜೈಕಿಶನ್ ಕಾಕುಭಾಯ್ ಶ್ರಾಫ್ ಅಥವಾ ಜಾಕಿ ಶ್ರಾಫ್ ಮುಂಬೈನಲ್ಲಿ ಜನಿಸಿದರು. ಅವರ ತಂದೆ ಗುಜರಾತಿ ಮತ್ತು ತಾಯಿ ತುರ್ಕಮೆನ್ ಮಹಿಳೆ. ಜಾಕಿ ಶ್ರಾಫ್ 11ನೇ ತರಗತಿಯ ವ್ಯಾಸಂಗ ಮುಗಿಸಿದ ನಂತರ ಜೂನಿಯರ್ ಕಾಲೇಜಿನಿಂದ ಹೊರಗುಳಿದರು. ಮುಂಬೈನ ತೀನ್ ಬಟ್ಟಿ ಪ್ರದೇಶದಲ್ಲಿ ಬೆಳೆದರು. ಬಾಲ್ಯದಲ್ಲಿ, ಅವರು ತಮ್ಮ ಸ್ನೇಹಿತರಿಗಾಗಿ ಆಗಾಗ ಜಗಳವಾಡುವುದು ಮಾಡುತ್ತಿದ್ದರು. ಗಲ್ಲಿಗಳಲ್ಲಿ ಆಗಾಗ ಫೈಟಿಂಗ್ ನಡೆಯುತ್ತಿತ್ತು.
ದೇವ್ ಆನಂದ್ ಅವರ ಸ್ವಾಮಿ ದಾದಾ ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಜಾಕಿ ಮೊದಲ ಬಾರಿಗೆ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡರು. ಸ್ವಾಮಿ ದಾದಾ ನಂತರ, ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಅವರಿಗೆ ಹೀರೋ (1983) ನಲ್ಲಿ ಚೊಚ್ಚಲ ಮೀನಾಕ್ಷಿ ಶೇಷಾದ್ರಿಯ ವಿರುದ್ಧ ಮೊದಲ ಪ್ರಮುಖ ಪಾತ್ರವನ್ನು ನೀಡಿದರು.
ಈ ಸಿನಿಮಾ ಯಶಸ್ವಿಯಾಯಿತು, ಬಾಲಿವುಡ್‌ಗೆ ಹೊಸ ಮ್ಯಾಕೋ ಸ್ಟಾರ್ ಜಾಕಿ ಶ್ರಾಫ್ ಸಿಕ್ಕರು. ಜಾಕಿ ಶ್ರಾಫ್ ಸಿನಿಮಾ ತಾರೆಯಾದ ನಂತರವೂ ಬದಲಾಗದೆ ಉಳಿದರು
ಜಾಕಿ ಸ್ಟಾರ್‌ಡಮ್ ಗಳಿಸಿದ ನಂತರವೂ, ಅವರು ತಮ್ಮದೇ ಗಲ್ಲಿಯಲ್ಲಿ ಉಳಿಯಲು ನಿರ್ಧರಿಸಿದರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮುಖೇಶ್ ಖನ್ನಾ ಅವರೊಂದಿಗೆ ಮಾತನಾಡುವಾಗ, ಜಾಕಿ ಶ್ರಾಫ್ ಹಳೆಯ ಮನೆಯಲ್ಲೇ ಇರುವುದಾಗಿ ಹೇಳಿಕೊಂಡಿದ್ದರು. ಶೌಚಾಲಯದ ಹೊರಗೆ ನಿರ್ಮಾಪಕರೊಂದಿಗೆ ಸಭೆ ನಡೆಸಿದ್ದಾಗಿ ಜಾಕಿ ಬಹಿರಂಗಪಡಿಸಿದ್ದಾರೆ.
ಜಾಕಿ 33 ವರ್ಷಗಳ ಕಾಲ ಗಲ್ಲಿಯಲ್ಲಿ ವಾಸಿಸುತ್ತಿದ್ದರು. ಹಲವಾರು ಸಂದರ್ಶನಗಳಲ್ಲಿ ನಟನಾಗಿ ಅವರ ಆರಂಭಿಕ ಜೀವನವನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ವೈರಲ್ ಕ್ಲಿಪ್‌ನಲ್ಲಿ, ಜಾಕಿ ಅವರು ಇಕ್ಕಟ್ಟಾದ ಜಾಗದಲ್ಲಿ ವಾಸಿಸುತ್ತಿದ್ದರಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರೆ ಅವರ ತಾಯಿ ತಕ್ಷಣವೇ ಹೇಗೆ ತಿಳಿಯುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು.
ಆದರೆ ದೊಡ್ಡ ಮನೆಗೆ ಹೋದಾಗ, ಗೋಡೆಗಳು ನಮ್ಮ ನಡುವೆ ಬಂದವು. ಬೆಳಗ್ಗೆ ಎದ್ದು ನೋಡಿದರೆ ನನ್ನ ತಾಯಿ ಮುಂದಿನ ಕೋಣೆಯಲ್ಲಿ ಸತ್ತರು ಎಂದು ನಟನಿಗೆ ತಿಳಿದಿರಲಿಲ್ಲ. ಇತ್ತೀಚಿಗೆ ರಜನಿಕಾಂತ್ ಅವರ ಜೈಲರ್‌ನಲ್ಲಿ ಜಾಕಿ ಶ್ರಾಫ್ ಕಾಣಿಸಿಕೊಂಡಿದ್ದಾರೆ.