ಎಲ್ಲಾ ಬಿಟ್ಟು ಬಾತ್‌ರೂಂ ಇಷ್ಟವಂತೆ ಈ ನಟಿಗೆ, ಅಲ್ಲಿ ಮಾಡೋ ಕೆಲಸವೇನು?
ಜುಲೈ 27, 1990 ರಂದು ಜನಿಸಿದ ನಟಿ ಕೃತಿ ಸನೋನ್ (Kriti Sanon) ಬುಧವಾರ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇಂಜಿನಿಯರಿಂಗ್‌ನಿಂದ ಮಾಡೆಲಿಂಗ್‌ಗೆ ಬಂದು ನಂತರ ನಟನೆಗೆ ಬಂದ ಕೃತಿಗೆ ಚಿತ್ರರಂಗದ ಯಾವುದೇ ಹಿನ್ನೆಲೆ ಹೊಂದಿರಲಿಲ್ಲ. 2014 ರಲ್ಲಿ, ಅವರು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತೆಲುಗು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ 'ನೆನೊಕ್ಕಡಿನೆ' ಮೂಲಕ ಸಿನಿಮಾಕ್ಕೆ ಕಾಲಿಟ್ಟರು. ಅದೇ ಸಮಯದಲ್ಲಿ, ಅವರ ಮೊದಲ ಚಿತ್ರ 'ಹೀರೋಪಂತಿ' ಅದೇ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾಯಿತು, ಟೈಗರ್ ಶ್ರಾಫ್ ಎದುರು ಕಾಣಿಸಿಕೊಂಡ ಕೃತಿ ಈ ಚಿತ್ರಕ್ಕಾಗಿ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಇಂದು ಕೃತಿ ಬಾಲಿವುಡ್‌ನ ಟಾಪ್ ಲೀಡ್ ನಟಿಯರಲ್ಲಿ ಒಬ್ಬರು. ಇಂದು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ

ಕೃತಿ ಅವರ ತಂದೆ ರಾಹುಲ್ ಸನನ್ ಚಾರ್ಟೆಡ್ ಆಕೌಂಟ್ ಆಗಿದ್ದರೆ, ತಾಯಿ ಗೀತಾ ಸನನ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕೃತಿ ಸ್ವತಃ ಇಂಜಿನಿಯರಿಂಗ್ ಓದಿದ್ದಾರೆ. ಅವರು ನೋಯ್ಡಾದ ಕಾಲೇಜಿನಲ್ಲಿ ಬಿ.ಟೆಕ್ ಮಾಡಿದ್ದಾರೆ. ಕೃತಿಗೆ ತಂಗಿ ನೂಪುರ್ ಕೂಡ ಇದ್ದಾರೆ. ಇಬ್ಬರು ಉತ್ತಮ ಬಾಂಡಿಂಗ್ ಹೊಂದಿದ್ದು ಪರಸ್ಪರ ರಾಖೀ ಕಟ್ಟಿಕೊಳ್ಳುವ ಮೂಲಕ ಕೃತಿ ಮತ್ತು ನೂಪುರ್ ಒಟ್ಟಿಗೆ ರಕ್ಷಾಬಂಧನವನ್ನು ಆಚರಿಸುತ್ತಾರೆ.
ಕೃತಿ ಅವರು ಯಾವತ್ತೂ ನಟಿಯಾಗುವ ಪ್ಲಾನ್ ಮಾಡಿರಲಿಲ್ಲ. ಇಂಜಿನಿಯರಿಂಗ್ ಕಾಲೇಜಿನ ಎರಡನೇ ವರ್ಷದಲ್ಲಿ ಮಾಡೆಲಿಂಗ್ ಮಾಡುವುದನ್ನು ಹವ್ಯಾಸವಾಗಿ ಆರಂಭಿಸಿದರು. ಆ ಸಮಯದಲ್ಲಿ ಅವರು ಶೂಟಿಂಗ್ ಪ್ರಕ್ರಿಯೆ ಮತ್ತು ಜಾಹೀರಾತಿನಲ್ಲಿ ಕೆಲಸ ಮಾಡುವಾಗ ಕ್ಯಾಮರಾ ಮುಂದೆ ಇರಲು ಇಷ್ಟಪಡುತ್ತಾರೆ ಎಂದು ಅರಿತುಕೊಂಡರು.
ಕೃತಿಯ ಮೊದಲ ಜಾಹೀರಾತು ಟೂತ್‌ಪೇಸ್ಟ್ ಬ್ರಾಂಡ್ ಕ್ಲೋಸ್-ಅಪ್ ಆಗಿತ್ತು. ಸ್ವಲ್ಪ ಸಮಯದ ನಂತರ, ಕೃತಿಗೆ ನಟನೆಯಲ್ಲಿ ಸ್ವಾಭಾವಿಕ ಸಾಮರ್ಥ್ಯವಿದೆ ಎಂದು ಅರಿತುಕೊಂಡರು ಮತ್ತು ಅವರು ಚಲನಚಿತ್ರಗಳಿಗೆ ಆಡಿಷನ್ ನೀಡಲು ಪ್ರಾರಂಭಿಸಿದರು.
ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡಿದ ನಂತರ ಕೃತಿ ತುಂಬಾ ಅಳುತ್ತಿದ್ದರು ಎಂದು ಸ್ವತಃ ಅವರೇ ಬಹಿರಂಗಪಡಿಸಸಿದ್ದರು. ಸಂದರ್ಶನವೊಂದರಲ್ಲಿ, ಅವರು ತುಂಬಾ ಹೆದರುತ್ತಿದ್ದರು. ಅವರು ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸಿದ್ದರು, ಇದರಿಂದಾಗಿ ಅವರು ನಡೆಯಲು ಆರಾಮದಾಯಕವಾಗಲಿಲ್ಲ. ವಾಕ್ ಮುಗಿಸಿ ವಾಪಸ್ ಮನೆಗೆ ಹೋಗುವಾಗ ಆಟೋದಲ್ಲಿ ಆಕೆ ಅಳುತ್ತಿದ್ದರು ಎಂದು ಹೇಳಿದ್ದಾರೆ.
ಕೃತಿ ಸನೋನ್ ಕೇವಲ ನಟನೆಯಲ್ಲಿ ಮಾತ್ರ ಎಕ್ಸ್‌ಪರ್ಟ್ ಅಲ್ಲ ಅವರು ತರಬೇತಿ ಪಡೆದ ಕಥಕ್ ನೃತ್ಯಗಾರ್ತಿ ಹಾಗೂ ಅವರು ರಾಜ್ಯ ಮಟ್ಟದ ಬಾಕ್ಸರ್ ಕೂಡ ಆಗಿದ್ದಾರೆ.
ತನ್ನ ಬಾತ್ರೂಮ್‌ನಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಅಲ್ಲಿಯೇ ಕುಳಿತು ತನ್ನ ಹೆಚ್ಚಿನ ಕೆಲಸವನ್ನು ಮುಗಿಸುತ್ತಾರೆ. ಇದನ್ನು ಸ್ವತಃ ನಟಿಯೇ ಒಮ್ಮೆ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಬಹಿರಂಗಪಡಿಸಿದ್ದಾರೆ.
'ನಾನು ಫೋನ್ ಅನ್ನು ಬಾತ್ರೂಮ್‌ಗೆ ತೆಗೆದುಕೊಂಡು ಹೋಗುತ್ತೇನೆ. ಈ ಸಮಯದಲ್ಲಿ, ನಾನು ಅನೇಕ ಸಂದೇಶಗಳಿಗೆ ಉತ್ತರಿಸುತ್ತೇನೆ ಮತ್ತು ಅನೇಕ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ'ಎಂದು ಅವರು ಹೇಳಿದ್ದರು, .
ಕೃತಿ ಮೊದಲಿನಿಂದಲೂ ತುಂಬಾ ಸೃಜನಶೀಲ ವ್ಯಕ್ತಿ. ಅವರು ಕವಿತೆಗಳನ್ನು ಬರೆಯಲು ಇಷ್ಟಪಡುತ್ತಾರೆ. ಶಾಲೆ-ಕಾಲೇಜು ಓದುತ್ತಿದ್ದಾಗಲೂ ಬರೆಯುವ ಹವ್ಯಾಸ ಹೊಂದಿದ್ದ ನಟಿ ಇಂದಿಗೂ ಸಮಯ ಸಿಕ್ಕಾಗ ಏನಾದರೊಂದು ಬರೆಯಲು ಇಷ್ಟಪಡುತ್ತಾರೆ. ಆಗಾಗ್ಗೆ ಅವಳು ಬರೆದ ಕವಿತೆಗಳನ್ನು ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳುತ್ತಾರೆ.
'ಆದಿಪುರುಷ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಪ್ರಭಾಸ್ ಅವರ ಎದುರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಟೈಗರ್ ಶ್ರಾಫ್ ಜೊತೆಗಿನ 'ಗಣಪತ್', ವರುಣ್ ಧವನ್ ಜೊತೆ 'ಭೇದಿಯಾ' ಮತ್ತು ಕಾರ್ತಿಕ್ ಆರ್ಯನ್ ಜೊತೆಗಿನ 'ಶೆಹಜಾದಾ' ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.