ಹೈ-ಸ್ಲಿಟ್ ಮೆಟಾಲಿಕ್ ಸಿಲ್ವರ್ ಡ್ರೆಸ್‌ನಲ್ಲಿ Kiara Advani!
ಭೂಲ್ ಭುಲಯ್ಯ 2 ರ (Bhool Bhulaiyaa 2 ) ಟ್ರೈಲರ್ ಬಿಡುಗಡೆಗೆ ಮುಂಚಿತವಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಸೂಪರ್ ಹಾಟ್ ಫೋಟೋಗಳು ಸಖತ್ ವೈರಲ್ ಆಗಿವೆ.
ಕಿಯಾರಾ ಅಡ್ವಾಣಿ ಹಿಂದಿ ಚಲನಚಿತ್ರೋದ್ಯಮ ಪ್ರಾಮಿಸಿಂಗ್ ಯುವ ನಟಿಯಲ್ಲಿ ಒಬ್ಬರಾಗಿದ್ದಾರೆ. ನಟಿಯ ಆಕೆಯ ವದಂತಿಯ ಗೆಳೆಯ ಸಿದ್ಧಾರ್ಥ್ ಮಲ್ಹೋತ್ರಾ ಎದುರು ಶೆರ್ಷಾ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ವಿಶೇಷವಾಗಿ ಶಾಹಿದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಚಿತ್ರದಲ್ಲಿನ 'ಪ್ರೀತಿ' ಪಾತ್ರದ ನಂತರ ಕಿಯಾರಾ ಅನೇಕ ಬಾಲಿವುಡ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಪ್ರಸ್ತುತ ಕಿಯಾರಾ ಆಟ್ವಾಣಿ ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಅವರ ಮುಂಬರುವ 'ಭೂಲ್ ಭುಲೈಯಾ 2' ಚಿತ್ರದ ಪ್ರಚಾರಗಳಲ್ಲಿ ನಿರತರಾಗಿರಾಗಿದ್ದಾರೆ.
ಈ ನಡುವೆ ಕಿಯಾರಾ ಮೆಟಾಲಿಕ್ ಸಿಲ್ವರ್ ಡ್ರೆಸ್‌ನಲ್ಲಿನ ಕೆಲವು ಫ್ರೆಶ್ ಫೋಟೋಗಳನ್ನು ಸೋಶಿಯಲ್ ವೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯ ಫೋಟೊಗಳು ಸಖತ್ ವೈರಲ್ ಆಗುತ್ತಿವೆ.
ಹಂಚಿಕೊಂಡಿರುವ ಫೋಟೋಗಳಲ್ಲಿ ನಟಿ ಮೆಟಾಲಿಕ್ ಸಿಲ್ವರ್ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಥೈ ಹೈಯ್ ಸ್ಲೀಟ್ ಸ್ಕರ್ಟ್ ಜೊತೆ ಅದೇ ರೀತಿಯ ಫುಲ್ ಸ್ಲೀವ್ ಕ್ರಾಪ್ ಟಾಪ್ ಧರಿಸಿದ್ದಾರೆ.
ಕಿಯಾರಾ ಅಡ್ವಾಣಿ ಲ್ವರ್ ಫಾಯಿಲ್ ಬ್ಯಾಕ್‌ಡ್ರಾಪ್‌ನ ಮುಂದೆ ಪೋಸ್ ನೀಡಿದ್ದಾರೆ. ಫೋಟೋಗಳಲ್ಲಿ ನಟಿ ತಮ್ಮ ಟೋನ್ಡ್ ಲೆಗ್ಸ್ ಪ್ರದರ್ಶಿಸುವ ಅವಕಾಶವನ್ನು ಬಿಡಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅರ್ಧ ಡಜನ್ ಫೋಟೋಗಳಲ್ಲಿ ಕಿಯಾರಾ ಮೇಕಪ್ ತುಂಬಾ ಮಿನಿಮಮ್ ಇದೆ ಮತ್ತು ತಮ್ಮ ಲುಕ್‌ಗೆ ನ್ಯೂಡ್ ಶೇಡ್ ಆಯ್ಕೆ ಮಾಡಿಕೊಂಡಿದ್ದಾರೆ.
ಇದುವರೆಗೆ ಕಿಯಾರಾ ಅಡ್ವಾಣಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ಸಂಬಂಧವನ್ನು ಇಬ್ಬರೂ ಅಧಿಕೃತವಾಗಿ ದೃಢೀಕರಿಸದಿದ್ದರೂ ಸಹ ಈ ನಡುವೆ ಅವರೊಂದಿಗೆ ಬ್ರೇಕಪ್ ಮಾಡಿಕೊಂಡರು ಎಂಬ ವದಂತಿಗಳಿವೆ,
ಅವರ ಬ್ರೇಕ್ ಅಪ್ ವದಂತಿಗಳ ನಡುವೆ, ಕಿಯಾರಾ ಅಡ್ವಾಣಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಧರ್ಮ ಪ್ರೊಡಕ್ಷನ್ಸ್ ಚಲನಚಿತ್ರ 'ಶೆರ್ಷಾ' ಕುರಿತು ಪೋಸ್ಟ್‌ಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರ ಲೇಡಿ ಲವ್ ಆಗಿ ನಟಿಸಿದ್ದಾರೆ.