ಬ್ರೇಕಪ್ ವದಂತಿ ಬೆನ್ನಲ್ಲೇ ಸಿದ್ಧಾರ್ಥ್-ಕಿಯಾರಾ ಹೊಸ ಪೋಸ್ಟ್ ವೈರಲ್

ಬ್ರೇಕಪ್ ಸುದ್ದಿ ಬೆನ್ನಲ್ಲೇ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಇಬ್ಬರು ದೂರ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವ ಸಮಯದಲ್ಲೇ ಹಾಕಿರುವ ಪೋಸ್ಟ್ ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

Amid Break-up Rumours Sidharth Malhotra And Kiara Advani Share new Posts

ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಲಿವುಡ್ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ(Sidharth Malhotra and Kiara Advani) ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು. ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಶೇರ್ಷಾ(Shershaah) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. ಆದರೀಗ ಇಬ್ಬರೂ ಬ್ರೇಕಪ್(breakup) ಮಾಡಿಕೊಂಡು ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.

ಬ್ರೇಕಪ್ ಸುದ್ದಿ ಬೆನ್ನಲ್ಲೇ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಇಬ್ಬರು ದೂರ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವ ಸಮಯದಲ್ಲೇ ಹಾಕಿರುವ ಪೋಸ್ಟ್ ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಸಿದ್ಧಾರ್ಥ್ ಮಲ್ಹೋತ್ರಾ, 'ಸೂರ್ಯನಿಲ್ಲದ ದಿನ ಹೇಗಿರುತ್ತೆ ಬರಿ ಕತ್ತಲು' ಎಂದು ಹೇಳಿದ್ದಾರೆ. ಸಿದ್ಧಾರ್ಥ್ ಇತ್ತೀಚಿಗಷ್ಟೆ ಟರ್ಕಿ ಪಯಣ ಬೆಳೆಸಿದ್ದರು. ಸಿನಿಮಾ ಚಿತ್ರೀಕರಣ ನಿಮಿತ್ತ ಟರ್ಕಿಗೆ ಹಾರಿದ್ದರು. ಅಲ್ಲಿನ ಒಂದು ಸುಂದರವಾದ ಫೋಟೋ ಶೇರ್ ಮಾಡಿ ಈ ಸಾಲನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ಸೂರ್ಯನ ಬೆಳಕು ಅಂದರೆ ಕಿಯಾರಾ ಆಗಿದ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸಿದ್ಧಾರ್ಥ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ನಟಿ ಕಿಯಾರಾ ಕೂಡ ಸುಂದರವಾದ ಫೋಟೋ ಹಂಚಿಕೊಂಡಿದ್ದಾರೆ. ಪ್ರಕೃತಿ ಸೌಂದರ್ಯ ಆನಂದಿಸುತ್ತಿರುವ ಫೋಟೋ ಶೇರ್ ಮಾಡಿ, ಸದಾ ನಗುತ್ತೀರಿ ಪ್ರೀತಿ ಹಂಚಿ ಎನ್ನುವ ಸಾಲನ್ನು ಕಿಯಾರಾ ಶೇರ್ ಮಾಡಿದ್ದಾರೆ. ಬ್ರೇಕಪ್ ವಂದತಿ ಬೆನ್ನಲ್ಲೇ ಇಬ್ಬರು ಶೇರ್ ಮಾಡುವ ಪೋಸ್ಟ್ ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್ ಜೋಡಿ ನಡುವೆ ಬ್ರೇಕಪ್; ದೂರಾದ ಕಿಯಾರಾ - ಸಿದ್ಧಾರ್ಥ್

ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು ತಮ್ಮ ಪ್ರೀತಿ ವಿಚಾರವನ್ನು ಯಾವತ್ತು ಬಹಿರಂಗವಾಗಿ ಹೇಳಿಕೊಂಡವರಲ್ಲ, ಅಲ್ಲದೆ ನಿರಾಕರಿಸಿಯೂ ಇಲ್ಲ. ಶೇರ್ಷಾ ಸಿನಿಮಾ ಬಿಡುಗಡೆ ಬಳಿಕ ಈ ಜೋಡಿ ಮತ್ತಷ್ಟು ಫೇಮಸ್ ಆಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೆ ಬಿಟ್ಟಿದ್ದಾರಂತೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆ ಆಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಇಬ್ಬರು ತಮ್ಮ ರಿಲೇಶನ್ ಶಿಪ್ ಕೊನೆಗೊಳಿಸಿದ್ದಾರೆ. ಆದರೆ ಇಬ್ಬರು ಬೇರೆ ಆಗಲು ಇನ್ನು ಕಾರಣ ತಿಳಿದಿಲ್ಲ. ಆದರೆ ಇಬ್ಬರು ಬೇರೆ ಆಗಿರುವುದಂದು ನಿಜ. ಇಬ್ಬರು ಒಂದಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಇಬ್ಬರು ಮತ್ತೆ ಒಂದಾಗುವ ಸೂಚನೆ ಇಲ್ಲ ಎಂದು ವರದಿ ಮಾಡಿದೆ.

ಹಿಂದಿ ನಟ ಸಿದ್ಧಾರ್ಥ್‌ಗೆ ಸ್ಪೆಷಲ್‌ ಆಗಿ ವಿಶ್ ಮಾಡಿದ ಸುದೀಪ್‌ ಪುತ್ರಿ!

ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರು ಬೆಸ್ಟ್ ಜೋಡಿ ಎಂದು ಫ್ಯಾನ್ ಕಾಮೆಂಟ್ ಮಾಡುತ್ತಿದ್ದರು. ಇಬ್ಬರ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಶೇರ್ಷಾ ಸಿನಿಮಾ ಬಳಿಕವಂತು ಇಬ್ಬರಿಗೆ ಅಭಿಮಾನಿ ಬಳಗ ಹೆಚ್ಚಾಗಿತ್ತು. ಕ್ಯೂಟ್ ಜೋಡಿ ನೋಡಿ ಅಭಿಮಾನಿಗಳು ಸಹ ಹೀಗೆ ಇರಬೇಕೆಂದು ಬಯಸುತ್ತಿದ್ದರು. ಆದರೀಗ ಇಬ್ಬರು ದೂರ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇಬ್ಬರು ಸಿನಿಮಾರಂಗದಲ್ಲಿ ಸಖತ್ ಬ್ಯುಸಿ ಇರುವ ಕಲಾವಿದರು. ಆದರೆ ನಿಜಕ್ಕೂ ಏನಾಗಿದೆ ಎನ್ನುವುದು ಬಹಿರಂಗವಾಗಿಲ್ಲ.

 

Latest Videos
Follow Us:
Download App:
  • android
  • ios